Saturday, December 9, 2023
HomeUncategorizedವೆರಿಕೋಸ್ ವೇಯ್ನ್ ತಜ್ಞವೈದ್ಯ ಉರಾಳ್ ಸೇರಿದಂತೆ ಹಲವು ವೈದ್ಯರಿಂದ ಶಿವಮೊಗ್ಗದ ಐಲೆಟ್ಸ್ ಆಸ್ಪತ್ರೆಯಲ್ಲಿ ತಪಾಸಣಾ...

ವೆರಿಕೋಸ್ ವೇಯ್ನ್ ತಜ್ಞವೈದ್ಯ ಉರಾಳ್ ಸೇರಿದಂತೆ ಹಲವು ವೈದ್ಯರಿಂದ ಶಿವಮೊಗ್ಗದ ಐಲೆಟ್ಸ್ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ.

ಖ್ಯಾತ ವೆರಿಕೋಸ್ ವೆಯ್ನ್ ತಜ್ಞ ಡಾಕ್ಟರ್ ಉರಾಳ್ ಎಂ.ವಿ ಅವರು ಹಲವಾರು ವರ್ಷಗಳ ಕಾಲ ರಿಸರ್ಚ್ ಮಾಡಿ ವೆರಿಕೋಸ್ ವೆಯ್ನ್ ಖಾಯಿಲೆಗೆ ಆಪರೇಷನ್ ರಹಿತ ಚಿಕಿತ್ಸೆಯನ್ನು ಕಂಡು ಹಿಡಿದಿದ್ದಾರೆ. ಇದು ಅವರ ಗರಿಮೆಯನ್ನು ವೈದ್ಯ ಲೋಕದಲ್ಲಿ ಇನ್ನಷ್ಟು ಹೆಚ್ಚಿಸಿದೆ. ರಿಸರ್ಚ್ ನ ಮೂಲಕ ಹಲವಾರು ಇತಿಹಾಸ ಸೃಷ್ಟಿಸಿರುವ ಡಾ. ಉರಾಳ್ ಅವರು ವಿಶಿಷ್ಟವಾದ ರೀತಿಯಲ್ಲಿ ಆಪರೇಶನ್ ರಹಿತವಾಗಿ ವೆರಿಕೋಸ್ ವೆಯ್ನ್ ಖಾಯಿಲೆಗೆ ಔಷಧಿಯನ್ನು ಕಂಡು ಹಿಡಿದಿದ್ದಾರೆ.

ಇಂದು ಮಾನವರಲ್ಲಿ ವೆರಿಕೋಸ್ ವೇಯ್ನ್ ಸಮಸ್ಯೆ ಡಯಾಬಿಟೀಸ್ ಕಾಯಿಲೆಯಂತೆಯೇ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಾಗಿದೆ. ವೆರಿಕೋಸ್ ವೇಯ್ನ್ ಎಂಬ ಗಂಭೀರ ಕಾಯಿಲೆಯನ್ನು ಗುಣಪಡಿಸಲು ಸೂಕ್ತವಾದ ಔಷಧಿ ಇಲ್ಲದೇ ಇರುವುದರಿಂದ ಡಾ. ಉರಾಳ್ ರವರು ಈ ಕಾಯಿಲೆಯನ್ನು ಆದಷ್ಟು ಕಡಿಮೆಗೊಳಿಸುವ ಹಾಗೂ ಮುಂದಿನ ಹಂತಕ್ಕೆ ಹೋಗದಂತೆ ಸಾಕಷ್ಟು ಪರಿಣಾಮಕಾರಿಯಾದಂತಹ ಹಾಗೂ ಉತ್ತಮ ಫಲಿತಾಂಶ ನೀಡುತ್ತಿರುವ ಅಮೃತ್ ವೆರಿಕೋಸ್ ವೇನ್ಸ್ ಸಿರಪ್‌ಅನ್ನು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅದನ್ನು ಜನರಿಗೆ ಪರಿಚಯಿಸಿದ್ದಾರೆ.

ಭಾರತ ದೇಶದಲ್ಲಿ ಈ ಕಾಯಿಲೆಯಿಂದ 30-40% ಜನರು ಬಳಲುತ್ತಿದ್ದಾರೆ. ತುಂಬಾ ಸಮಯ ನಿಂತುಕೊಂಡು ಮತ್ತು ಕುಳಿತುಕೊಂಡು ಕೆಲಸ ಮಾಡುವುದರಿಂದ, ಕಲಬೆರಕೆ ಆಹಾರ ಸೇವಿಸುವುದರಿಂದ, ಅತಿಯಾದ ಮಾಂಸ ಸೇವಿಸುವುದರಿಂದ, ಗರ್ಭವಸ್ಥೆಯಲ್ಲಿ ಏರುಪೇರು, ಹಾಗೂ ವಂಶಪಾರಂಪರ್ಯವಾಗಿ ಕಾಯಿಲೆ ಇರುವುದರಿಂದಲೂ ಈ ವೆರಿಕೋಸ್ ವೇಯ್ನ್ ಕಾಯಿಲೆ ಬರುತ್ತದೆ.

ಕಳೆದ ಐದು ವರ್ಷಗಳಿಂದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಪೊಲೀಸ್ ಇಲಾಖೆ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನೆಡೆಸಿ ವೆರಿಕೋಸ್ ರೋಗದ ಬಗ್ಗೆ ಜನರಲ್ಲಿ ಸಾಕಷ್ಟು ಜನಜಾಗ್ರತಿಯನ್ನು ಮೂಡಿಸುತ್ತಿದ್ದಾರೆ.

ಅಂತೆಯೇ ಐಲೆಟ್ಸ್ ಡಯಾಬಿಟೀಸ್ ಆಸ್ಪತ್ರೆ ಆಯೋಜಿಸಿರುವ ಉಚಿತ ಗರ್ಭ ಕಂಠ, ಸ್ತನ ಕ್ಯಾನ್ಸರ್ ಹಾಗೂ ವೆರಿಕೋಸ್ ವೆಯ್ನ್ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಪ್ರಶಾಂತ್, ಡಾ.ಎಂ.ವಿ ಉರಾಳ್, ಡಾ. ಲಕ್ಷ್ಮೀ, ಡಾ. ಅಮೂಲ್ಯ, ಡಾ. ಐನಪುರೆ, ಡಾ.ಪ್ರೀತಂ ಬಿ, ಡಾ. ಶಶಿಧರ್ ರಾಗಲ್, ಡಾ. ನಾಗಭೂಷಣ್ ಎಸ್ ಪರೀಕ್ಷೆ ನಡೆಸಿ ಉತ್ತಮ ರೀತಿಯ ಚಿಕಿತ್ಸೆಯನ್ನು ನೀಡಲಿದ್ದಾರೆ.ವೆರಿಕೋಸ್ ವೆಯ್ನ್, ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಮುಂತಾದ ಸಮಸ್ಯೆಗಳಿದ್ದಲ್ಲಿ ಇದೀಗ ಶೀಘ್ರವಾಗಿ ಶಿವಮೊಗ್ಗದಲ್ಲಿ ಪರಿಹಾರ ಲಭಿಸಲಿದೆ.

  • ದಿನಾಂಕ 17.10.2021ರ ಭಾನುವಾರದಂದು
  • ಆಸ್ಪತ್ರೆ ವಿಳಾಸ : ಐಲೆಟ್ಸ್ ಡಯಾಬಿಟೀಸ್ ಹಾಸ್ಪಿಟಲ್, ಸಾಗರ ರಸ್ತೆ, ಎನ್ ಹೆಚ್ 208, ಶಿವಮೊಗ್ಗ 577204
  • ಸಂಪರ್ಕಿಸಿ : 7204452307

Most Popular

Recent Comments