Sunday, September 24, 2023
Homeಮಲೆನಾಡುಬಾಳೆಬರೆ ಘಾಟಿ; ವಾಹನ ಸಂಚಾರ ಆರಂಭ

ಬಾಳೆಬರೆ ಘಾಟಿ; ವಾಹನ ಸಂಚಾರ ಆರಂಭ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ (ಹುಲಿಕಲ್‌) ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ರಾತ್ರಿಯಿಂದ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ.

ಇದನ್ನೂ ಓದಿ; ಶಾಸಕ ಸಿ. ಟಿ ರವಿ ಆಸ್ಪತ್ರೆಗೆ ದಾಖಲು.. ಪತ್ನಿ ಪಲ್ಲವಿ ಸಿಟಿ ರವಿ ಕಣ್ಣೀರು!

ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ, ಚರಂಡಿ ಮತ್ತಿತರ ಕಾಮಗಾರಿಗಳಾಗಿ ಫೆ.5ರಿಂದ ಎ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆ ಬಳಿಕ ಎ. 5ರಂದು ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ 10 ದಿನಗಳ ವರೆಗೆ ಸಂಚಾರ ನಿಷೇಧಿಸಲಾಗಿತ್ತು. ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


3.5 ಕಿ.ಮೀ. ಕಾಮಗಾರಿ:
ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಬಾಳೆಬರೆ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 3 ಕೋಟಿ.ರೂ. ವೆಚ್ಚದಲ್ಲಿ ಅಂದಾಜು 1 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 10 ಕೋಟಿ.ರೂ. ವೆಚ್ಚದಲ್ಲಿ 2.5 ಕಿ.ಮೀ. ಸೇರಿದಂತೆ ಒಟ್ಟು 3.5 ಕಿ.ಮೀ. ದೂರದವರೆಗೆ ರಸ್ತೆ ಅಗಲ, ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.

3.5 ಕಿ.ಮೀ. ಅಭಿವೃದ್ಧಿ ಬಾಕಿ:
ಬಾಳೆಬರೆ ಘಾಟಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಹುಲಿಕಲ್‌ ಚೆಕ್‌ ಪೋಸ್ಟ್‌ನಿಂದ ಹೊಸಂಗಡಿಯ ಘಾಟಿಯ ಬುಡದ ವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲೆಯ 8 ಕಿ.ಮೀ. ಪೈಕಿ ಈ ಹಿಂದೆ ಸ್ವಲ್ಪ ಕಾಂಕ್ರಿಟೀಕರಣ ಆಗಿದ್ದು, ಈಗ ಬಾಕಿಯಿದ್ದ 2.5 ಕಿ.ಮೀ.ನೊಂದಿಗೆ ಕಾಂಕ್ರಿಟೀಕರಣಗೊಂಡಿದೆ. ಉಡುಪಿ ಜಿಲ್ಲೆಯ 6.5 ಕಿ.ಮೀ. ಘಾಟಿಯ ಪೈಕಿ ಈ ಹಿಂದೆ 2 ಕಿ.ಮೀ., ಈಗ 1 ಕಿ.ಮೀ. ಸೇರಿದಂತೆ ಒಟ್ಟು 3 ಕಿ.ಮೀ. ಕಾಂಕ್ರಿಟೀಕರಣಗೊಂಡಂತಾಗಿದೆ. ಇನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ 3.5 ಕಿ.ಮೀ. ಘಾಟಿ ರಸ್ತೆ ಕಾಂಕ್ರಿಟೀಕರಣ ಬಾಕಿ ಇದೆ.

ಇದನ್ನೂ ಓದಿ; ಒಳಮೀಸಲಾತಿ ಕಿಚ್ಚು: ತರ್ಲಘಟ್ಟ ತಾಂಡಾದಲ್ಲಿ ವಿಜಯೇಂದ್ರಗೆ ಪ್ರತಿಭಟನೆಯ ಸ್ವಾಗತ

Pan Card ನಲ್ಲಿರೋ ಅಕ್ಷರಕ್ಕೂ, ನಿಮ್ಮ ಹೆಸರಿಗೂ ಸಂಬಂಧ ಇದೆ!

ಪಾನ್ ಕಾರ್ಡ್(Pan Card) ಇಂದು ಹೆಚ್ಚಿನ ಬ್ಯಾಂಕಿಂಗ್(Banking) ವ್ಯವಹಾರಗಳಿಗೆ ಅತ್ಯಗತ್ಯ ದಾಖಲೆಯಾಗಿದೆ. ಹೆಚ್ಚಾಗಿ ಎಲ್ಲರ ಬಳಿಯೂ ಪಾನ್ ಇದ್ದೇ ಇದೆ. ಆದರೆ, ನೀವು ಪಾನ್ ನಂಬರ್(Pan Number) ಗಮನಿಸಿದ್ದೀರಾ? ಅವುಗಳ ಅರ್ಥ ಏನು ಗೊತ್ತಿದೆಯಾ? ಪಾನ್ ಕಾರ್ಡ್ ನಲ್ಲಿರೋ ಅಕ್ಷರಕ್ಕೂ ನಿಮ್ಮ ಹೆಸರಿಗೂ ಸಂಬಂಧ ಇದೆ. ಅತ್ಯಂತ ರಹಸ್ಯ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ;  ಎನ್ ಆರ್ ಪುರದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಹೆಚ್ಚಿದ ಭಯ

ಯಾವುದೇ ಪಾನ್ ಕಾರ್ಡ್ ನಲ್ಲಿ, 10 ಸಂಖ್ಯೆಗಳ ಮೊದಲ ಮೂರು ಅಕ್ಷರಗಳು ವರ್ಣಮಾಲೆಯಾಗಿರುತ್ತದೆ. ನಿಮ್ಮ ಪಾನ್ ಕಾರ್ಡ್ ನಲ್ಲಿ ನಮೂದಿಸಲಾದ 10 ಸಂಖ್ಯೆಗಳು ಅಕ್ಷರಗಳು ಮತ್ತು ಸಂಖ್ಯೆಗಳ ಸಂಯೋಜನೆಯಾಗಿದೆ. ವರ್ಣಮಾಲೆಯ ಸರಣಿಯಲ್ಲಿ, AAA ನಿಂದ ZZZ ವರೆಗಿನ ಯಾವುದೇ ಮೂರು ಅಕ್ಷರಗಳ ಸರಣಿಯನ್ನು ನಿಮ್ಮ ಪಾನ್ ಕಾರ್ಡ್ ನಲ್ಲಿ ನಮೂದಿಸಬಹುದು.

ನೀವು ಗಮನಿಸಿರಬಹುದು, ಪಾನ್ ಕಾರ್ಡ್ ನಲ್ಲಿನ ಮೊದಲ ಐದು ಅಕ್ಷರಗಳಾಗಿರುತ್ತವೆ ಮತ್ತು ನಂತರ ಸಂಖ್ಯೆಗಳು ಇರುತ್ತವೆ. ಈ ಅಕ್ಷರಕ್ಕೂ ನಿಮ್ಮ ಹೆಸರಿಗೂ ಸಂಬಂಧ ಇದೆ. ಹೌದು, ಆದಾಯ ತೆರಿಗೆ ಇಲಾಖೆಯ ದೃಷ್ಟಿಯಲ್ಲಿ, ನಿಮ್ಮ ಪಾನ್ ಕಾರ್ಡ್ ನಲ್ಲಿ ನಮೂದಿಸಲಾದ ನಾಲ್ಕನೇ ಅಕ್ಷರವು ನೀವು ಯಾರೆಂಬುದನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ; ಕೈ ಟಿಕೆಟ್ ತಪ್ಪಿದ್ದಕ್ಕೆ ಗಳಗಳನೆ ಅತ್ತ ಗೋಪಿಕೃಷ್ಣ

ನೀವು ವ್ಯಕ್ತಿಯಾಗಿದ್ದರೆ, ನಿಮ್ಮ ಪಾನ್ ಕಾರ್ಡನ್ನು ನಾಲ್ಕನೇ ಅಕ್ಷರ ‘P’ ಆಗಿರುತ್ತದೆ. G ಎಂದರೆ ಸರ್ಕಾರ, F ಎಂದು ಬರೆದರೆ, ಅದು ಸಂಸ್ಥೆಗೆ ಸೇರಿದೆ ಎಂದು ಸೂಚಿಸುತ್ತದೆ. B ಎಂದರೆ ವ್ಯಕ್ತಿಯ ದೇಹ, T ಎಂಬುದು ಟ್ರಸ್ಟ್, H ಎಂದರೆ ಹಿಂದೂ ಅವಿಭಜಿತ ಕುಟುಂಬ, L ಸ್ಥಳೀಯ, J ಎಂದರೆ ಕೃತಕ ನ್ಯಾಯಾಂಗ ವ್ಯಕ್ತಿ ಮತ್ತು ಎಂಬ ವಿಭಿನ್ನ ಅರ್ಥವಿದೆ.

Most Popular

Recent Comments