Tuesday, November 28, 2023
Homeಇತರೆಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿ ಗಂಟೆಗೆ 140 ಕಿ. ಮೀ ಏರಿಕೆ : ಸಾರಿಗೆ ಸಚಿವ...

ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿ ಗಂಟೆಗೆ 140 ಕಿ. ಮೀ ಏರಿಕೆ : ಸಾರಿಗೆ ಸಚಿವ ನಿತಿನ್ ಗಡ್ಕರಿ

ನವದೆಹಲಿ: ಹೈವೇಗಳಲ್ಲಿ ವೇಗದ ಮಿತಿಯನ್ನು ಗಂಟೆಗೆ 140 ಕಿಲೋಮೀಟರ್ ಗೆ ಏರಿಕೆ ಮಾಡಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದಾ ಅವರು ಎಕ್ಸ್ ಪ್ರೆಸ್ ವೇಗದಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 140 ಕಿಲೋಮೀಟರ್ ಗೆ ಹೆಚ್ಚಳ ಮಾಡಲು ಶೀಘ್ರದಲ್ಲೇ ಸಂಸತ್ತಿನಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ.

ಯಾವುದೇ ವಾಹನವನ್ನು ವೇಗವಾಗಿ ಓಡಿಸಿದರೆ ಅಪಘಾತ ಸಂಭವಿಸುತ್ತವೆ ಎಂಬ ಕಲ್ಪನೆ ಇದೆ. ಆದರೆ ರಸ್ತೆಗಳ ಅನ್ವಯ ವೇಗದ ಮಿತಿಯನ್ನು ನಿಗದಿ ಮಾಡಬೇಕಿದೆ. ಅನೇಕ ರೀತಿಯ ರಸ್ತೆಗಳಲ್ಲಿ ವಿವಿಧ ರೀತಿಯ ವೇಗದ ಮಿತಿ ನಿರ್ಧರಿಸಬೇಕೆಂಬುದು ನನ್ನ ಮುಖ್ಯ ನಿಲುವಾಗಿದೆ. ಎಕ್ಸ್ ಪ್ರೆಸ್ ರಸ್ತೆಗಳಲ್ಲಿ ಗಂಟೆಗೆ 140 ಕಿಲೋಮೀಟರ್, ಚತುಷ್ಪಥದ ಹೆದ್ದಾರಿಗಳಲ್ಲಿ ಗಂಟೆಗೆ 100 ಕಿಲೋಮೀಟರ್, ದ್ವಿಪಥದ ಹೆದ್ದಾರಿಗಳಲ್ಲಿ ಗಂಟೆಗೆ 80 ಕಿಲೋಮೀಟರ್, ನಗರದ ರಸ್ತೆಗಳಲ್ಲಿ 75 ಕಿಲೋಮೀಟರ್ ವೇಗದ ಮಿತಿಯನ್ನು ನಿಗದಿಪಡಿಸುವ ಕುರಿತಂತೆ ಕ್ರಮಕೈಗೊಳ್ಳಲಾಗುತ್ತದೆ. ಎಕ್ಸ್ ಪ್ರೆಸ್ ಮಾರ್ಗಗಳಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲಾಗಿದೆ ಹಾಗಾಗಿ ವೇಗದ ಮಿತಿ ಹೆಚ್ಚಳವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Most Popular

Recent Comments