Saturday, June 10, 2023
Homeವಿಶೇಷಆರೋಗ್ಯಕೋವಿಡ್ ಬೂಸ್ಟರ್ ನ ವಿತರಣೆ ಈ ವರ್ಷ ಬೇಡ-ಶ್ರೀಮಂತ ದೇಶದವರಿಗೆ ಸಲಹೆ ನೀಡಿದ ವಿಶ್ವ ಆರೋಗ್ಯಸಂಸ್ಥೆ

ಕೋವಿಡ್ ಬೂಸ್ಟರ್ ನ ವಿತರಣೆ ಈ ವರ್ಷ ಬೇಡ-ಶ್ರೀಮಂತ ದೇಶದವರಿಗೆ ಸಲಹೆ ನೀಡಿದ ವಿಶ್ವ ಆರೋಗ್ಯಸಂಸ್ಥೆ

ಜಿನೀವಾ : ಕೊರೋನ ವೈರಸ್ ವಿರುದ್ಧದ ಲಸಿಕೆಗಳ ಪೂರೈಕೆಯನ್ನು ಹೇರಳವಾಗಿ ಹೊಂದಿರುವ ಶ್ರೀಮಂತ ದೇಶಗಳು ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ನೀಡುವ ನಿರ್ಧಾರವನ್ನು ವರ್ಷದ ಕೊನೆಯವರೆಗೆ ತಡೆಹಿಡಿದು ಲಸಿಕೆ ಅಗತ್ಯವಿರುವಂತಹ ಬಡ ದೇಶಗಳಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕರೆಯನ್ನು ನೀಡಿದ್ದಾರೆ.

ಬೂಸ್ಟರ್ ಡೋಸ್ ಬಗ್ಗೆ ಈ ಹಿಂದೆ ಮಾಡಿಕೊಂಡಿರುವoತಹ ಮನವಿಯನ್ನು ಬಹುತೇಕ ನಿರ್ಲಕ್ಷಿಸಲಾಗಿದೆ ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ಸರಬರಾಜು ಇರುವ ದೇಶಗಳಲ್ಲಿ ಬೂಸ್ಟರ್ ಡೋಸ್‌ಗಳನ್ನು ನೀಡಲು ಮತ್ತು ಲಸಿಕೆ ಕೊರತೆ ಎದುರಿಸುತ್ತಿರುವ ಬಡ ದೇಶಗಳಲ್ಲಿ ಮೊದಲ ಡೋಸ್ ನೀಡಲು ಸಾಕಾಗುವಷ್ಟು ಲಸಿಕೆಯು ಲಭ್ಯವಿದೆ ಎಂದು ಔಷಧ ಉತ್ಪಾದಕ ಕಂಪೆನಿಗಳ ಸಂಘ ಹೇಳಿಕೆಯನ್ನು ನೀಡಿರುವುದು ದಿಗಿಲು ಮೂಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯಾಸಸ್ ಹೇಳಿದ್ದಾರೆ.

“ಬಡದೇಶಗಳ ಜನತೆ ಉಳಿದಿರುವಂತಹ ಅಲ್ಪಸ್ವಲ್ಪ ಲಸಿಕೆಗೆ ತೃಪ್ತಿಪಡುತ್ತಾರೆ ಎಂದು ಜಾಗತಿಕ ಲಸಿಕೆಯ ಪೂರೈಕೆಯನ್ನು ನಿಯಂತ್ರಿಸುವ ಕಂಪೆನಿಗಳು ಮತ್ತು ದೇಶಗಳು ಭಾವಿಸುವುದನ್ನು ಮೌನವಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.

ಲಸಿಕೆಯ ಉತ್ಪಾದಕರು ಡಾಲರ್ ನೀಡುವ ಶ್ರೀಮಂತ ದೇಶಗಳ ಜತೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡು ಅದನ್ನು ಈಡೇರಲು ಆದ್ಯತೆಯನ್ನು ನೀಡಿದ್ದಾರೆ. ಬಡ ದೇಶಗಳಿಗೆ ತಮ್ಮ ಜನರನ್ನು ರಕ್ಷಿಸುವ ಸಾಧನಗಳನ್ನು ವಂಚಿಸಲಾಗಿದೆ ಎಂದು ಆಪಾದಿಸಿದ್ದಾರೆ.

ಆದರೆ ಶ್ರೀಮಂತ ದೇಶಗಳಾದ ಬ್ರಿಟನ್, ಡೆನ್ಮಾರ್ಕ್, ಫ್ರಾನ್ಸ್, ಗ್ರೀಸ್, ಜರ್ಮನಿ ಮತ್ತು ಸ್ಪೇನ್ ಈಗಾಗಲೇ ತಮ್ಮ ದೇಶದ ಹಿರಿಯ ನಾಗರಿಕರು ಮತ್ತು ಪ್ರತಿರೋಧದ ಶಕ್ತಿಯು ಕಡಿಮೆ ಇರುವವರಿಗೆ ಮೂರನೇ ಡೋಸ್ ನನ್ನು ನೀಡಲು ಆರಂಭಿಸುವ ಬಗ್ಗೆ ಚಿಂತನೆಯನ್ನು ನಡೆಸಿವೆ.

Most Popular

Recent Comments