ನವದೆಹಲಿ: ಸೋಪ್ ಮತ್ತು ಡಿಟರ್ಜೆಂಟ್ ಮಾರಾಟದಲ್ಲಿ ಸಿಂಹಪಾಲನ್ನು ಹೊಂದಿರುವoತಹ ಗ್ರಾಹಕ ಸರಕುಗಳ ದೈತ್ಯ, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಇವುಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ಕಳೆದ ತಿಂಗಳಷ್ಟೇ ಬೆಲೆಯನ್ನು ಏರಿಸಿದ್ದ ಈ ಸಂಸ್ಥೆ, ಈಗ ಪುನಃ ವಸ್ತುಗಳ ಬೆಲೆಯಲ್ಲಿ ಏರಿಕೆಯನ್ನು ಮಾಡಿದ್ದು, ಗ್ರಾಹಕರಿಗೆ ಬರೆ ಬಿದ್ದಂತಾಗಿದೆ.
ಲಾoಡ್ರಿ ಮತ್ತು ದೇಹ-ಶುದ್ಧೀಕರಣ ವಿಭಾಗಗಳಲ್ಲಿನ ತನ್ನ ಉತ್ಪನ್ನಗಳ ಬೆಲೆಗಳನ್ನು ಇದು ಹೆಚ್ಚಿಸಿರುವ ಕಾರಣ, ಸರ್ಫ್ ಎಕ್ಸೆಲ್, ಲೈಫ್‌ಬಾಯ್, ರಿನ್, ವ್ಹೀಲ್ ಸೇರಿದಂತೆ ಹಲವು ಸೋಪು ಹಾಗೂ ಸೋಪಿನ ಪೌಡರ್‌ಗಳ ಬೆಲೆ ಏರುಮುಖವಾಗಿದೆ.
ಕಳೆದ ತಿಂಗಳಲ್ಲಿ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಡಿಟರ್ಜೆಂಟ್ ಗಳು ಮತ್ತು ಸೋಪ್, ಬಾರ್ ಗಳ ಬೆಲೆಗಳನ್ನು ಶೇಕಡ 3.5 ರಿಂದ 14ಕ್ಕೆ ಏರಿಸಲಾಗಿತ್ತು ಈಗ ಪುನಃ ವಸ್ತುಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ಇದರಿಂದ ಅರ್ಧ ಮತ್ತು ಒಂದು ಕೆ.ಜಿ. ಪೌಡರ್ ಬೆಲೆಯಲ್ಲಿ ಏರಿಕೆಯಾಗಲಿದೆ.
ರಿನ್ ಡಿಟರ್ಜೆಂಟ್ ಪೌಡರ್ ಒಂದು ಕಿಲೋ ಪ್ಯಾಕೆಟ್ ಗೆ 77 ರೂ. ಗಳ ಬದಲಾಗಿ 82ರೂ. ಏರಿದ್ದರೆ, ಸರ್ಫ್ ಎಕ್ಸೆಲ್ ಒಂದು ಕಿಲೋಗ್ರಾಂ ಪ್ಯಾಕೆಟ್‌ಗೆ 14 ರೂ. ಹೆಚ್ಚಳವಾಗಿದೆ. ಲಕ್ಸ್ ಮತ್ತು ಲೈಫ್‌ಬಾಯ್ ಇತ್ಯಾದಿ ಸಾಬೂನುಗಳ ಬೆಲೆಗಳು ಶೇಕಡಾ 8-12 ರಷ್ಟು ಬೆಲೆಯಲ್ಲಿ ಏರಿಕೆಯನ್ನು ಕಂಡಿವೆ. ಉಳಿದವುಗಳಲ್ಲಿ ಕೂಡ 5-10 ರೂಪಾಯಿ ಏರಿಕೆಯಾಗಲಿದೆ. ಅಷ್ಟೇ ಅಲ್ಲದೇ ಸ್ಯಾಷೆಯಲ್ಲಿ ಸಿಗುತ್ತಿದ್ದ ಪೌಡರ್‌ಗಳ ವೇಟೇಜ್ ಕಡಿಮೆ ಮಾಡಲಾಗಿದ್ದು, ದರವನ್ನು ಮಾತ್ರ ಹೆಚ್ಚಿಸಲಾಗಿದೆ. 150ಗ್ರಾಂ ತೂಕವನ್ನು ಹೊಂದಿದ್ದ ಸ್ಯಾಷೆಗಳ ವೇಟೇಜ್ ಅನ್ನು 130 ಗ್ರಾಂಗಳಿಗೆ ಇಳಿಸಲಾಗಿದ್ದು, ಕೆಲವು ಸ್ಯಾಷೆಗಳ ಬೆಲೆ ಏರಿಕೆ ಮಾಡಲಾಗಿದೆ ಎಂಬ ಮಾಹಿತಿಯು ಲಭಿಸಿದೆ.