ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಕಾರ್ಮಿಕ ಮಹಿಳೆಯ ಹತ್ಯೆ ಮಾಡಿ ಸುಟ್ಟುಹಾಕಿದ ಹಂತಕರು, ಸ್ಥಳಕ್ಕೆ SP ಉಮಾ ಪ್ರಶಾಂತ್ ಭೇಟಿ
ಇದನ್ನೂ ಓದಿ; ಕಡೂರು; ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಟ್ರಯಲ್ ರನ್ ಯಶಸ್ವಿ
ಬೈಕ್ನಲ್ಲಿದ್ದ ವಿಶ್ವಾಸ್(24), ದೀಪಿಕಾ(22) ಮೃತ ರ್ದುದೈವಿಗಳು. ತರೀಕೆರೆ ತಾಲೂಕಿನ ಬೇಲೇನಹಳ್ಳಿಯ ನಿವಾಸಿಯಾದ ವಿಶ್ವಾಸ್ ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ದೀಪಿಕಾ ಇಬ್ಬರು ಬೈಕ್ನಲ್ಲಿ ಹೋಗುವಾಗ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೈಕ್ ಸವಾರರಿಬ್ಬರೂ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸುವಾಗಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಇತ್ತೀನ ಜನಪ್ರಿಯ ಸುದ್ದಿಗಳು
- ಇಂದಿನ ಅಡಿಕೆ ರೇಟ್ ಎಲ್ಲೆಲ್ಲಿ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ-20.06.2023
- ಚಿಕ್ಕಮಗಳೂರು: ರೈತರಿಂದ ರಾಗಿ ಖರೀದಿಸಿ 51 ಕೋಟಿ ಸಾಲ ಉಳಿಸಿಕೊಂಡ ಸರ್ಕಾರ
- ಚಿಕ್ಕಮಗಳೂರು; ಸರ್ಕಾರಿ ಕಾಲೇಜಿಗೆ 50 ಲಕ್ಷ ರೂ. ಮೌಲ್ಯದ ಪೀಠೋಪಕರಣ
ರಾಜ್ಯದ 31 ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿ ನೇಮಕಗೊಳಿಸಿ ಆದೇಶ ಹೊರಡಿಸಿದ ಸರ್ಕಾರ; ಎಲ್ಲಿಗೆ ಯಾರು?
ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಸರ್ಕಾರವು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ರಾಜೇಂದರ್ ಕುಮಾರ್ ಕಟಾರಿಯಾಯನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ; ಆಗುಂಬೆ: ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಸಹಸವಾರೆಯೂ ಸಾವು
ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು.
ಅದರಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ರಾಜೇಂದರ್ ಕುಮಾರ್ ಕಟಾರಿಯಾಯನ್ನು ನೇಮಿಸಲಾಗಿದೆ. ಕಟಾರಿಯಾ ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಎಂ.ಜಿ.ರಸ್ತೆ ಅಗಲೀಕರಣ, ಕಲ್ಯಾಣ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಶ್ರಮಿಸಿದ್ದರು.
ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ ಈ ಕೆಳಕಂಡಂತೆ ಇದೆ:
1. ಟಿ.ಕೆ. ಅನಿಲ್ ಕುಮಾರ್ – ಬೆಂಗಳೂರು ನಗರ
2. ಸಲ್ಮಾ ಕೆ. ಫಾಹಿಂ – ಬೆಂಗಳೂರು ಗ್ರಾಮಾಂತರ
3. ವಿ. ರಶ್ಮಿ ಮಹೇಶ್ – ರಾಮನಗರ
4. ಅಮಲಾನ್ ಆದಿತ್ಯ ಬಿಸ್ವಾಸ್ – ಚಿತ್ರದುರ್ಗ
5. ಡಾ. ಏಕ್ ರೂಪ್ ಕೌರ್- ಕೋಲಾರ
6. ಅಂಜುಂ ಪರ್ವೇಜ್ – ಬೆಳಗಾವಿ
7. ಡಾ. ಎನ್. ಮಂಜುಳ – ಚಿಕ್ಕಬಳ್ಳಾಪುರ
8. ಎಸ್. ಆರ್. ಉಮಾಶಂಕರ್ – ಶಿವಮೊಗ್ಗ
9. ಗುಂಜನ್ ಕೃಷ್ಣ- ದಾವಣಗೆರೆ
10. ಡಾ.ಎಸ್. ಸೆಲ್ವ ಕುಮಾರ್ – ಮೈಸೂರು
11. ಡಾ.ಪಿ.ಸಿ. ಜಾಫರ್- ಮಂಡ್ಯ
12. ಮಂಜುನಾಥ ಪ್ರಸಾದ್ .ಎನ್ – ಚಾಮರಾಜನಗರ
13. ಡಾ.ಎಂ.ಎನ್. ಅಜಯ್ ನಾಗಭೂಷಣ್ – ಹಾಸನ
14. ಡಾ.ಎನ್.ವಿ. ಪುಸಾದ್ – ಕೊಡಗು
15. ರಾಜೇಂದರ್ ಕುಮಾರ್ ಕಠಾರಿಯಾ – ಚಿಕ್ಕಮಗಳೂರು
16. ಡಾ. ಎಂ.ಟಿ. ರೇಜು – ಉಡುಪಿ
17. ಎಲ್.ಕೆ ಅತೀಕ್ – ದಕ್ಷಿಣ ಕನ್ನಡ
18. ಜಿ.ಸತ್ಯವತಿ – ತುಮಕೂರು
19. ವಿ.ಅನ್ಬುಕುಮಾರ್ – ಧಾರವಾಡ
20. ಸಿ. ಶಿಖಾ – ಗದಗ
21. ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ – ವಿಜಯಪುರ
22. ರಿತೇಶ್? ಕುಮಾರ್ ಸಿಂಗ್ – ಉತ್ತರ ಕನ್ನಡ
23. ಮೊಹಮ್ಮದ್ ಮೊಹಿಸಿನ್ – ಬಾಗಲಕೋಟೆ
24. ಪಂಕಜ್ ಕುಮಾರ್ ಪಾಂಡೆ – ಕಲಬುರಗಿ
25. ಮನೋಜ್ ಜೈನ್ – ಯಾದಗಿರಿ
26. ಡಾ. ಜೆ.ರವಿಶಂಕರ್ – ರಾಯಚೂರು
27. ನವೀನ್ ರಾಜ್ ಸಿಂಗ್ – ಕೊಪ್ಪಳ
28. ಡಾ. ಕೆ.ವಿ. ಲೋಕ್ ಚಂದ್ರ – ಬಳ್ಳಾರಿ
29. ಮುನೀಶ್ ಮೌದ್ಗಿಲ್ – ಬೀದರ್
30. ಡಾ.ವಿಶಾಲ್.ಆರ್ – ಹಾವೇರಿ
31. ಕೆ.ಪಿ.ಮೋಹನ್ ರಾಜ್ – ವಿಜಯನಗರ