Monday, December 11, 2023
Homeಕರಾವಳಿಆಗುಂಬೆ: ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಸಹಸವಾರೆಯೂ ಸಾವು

ಆಗುಂಬೆ: ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಸಹಸವಾರೆಯೂ ಸಾವು

ಆಗುಂಬೆ/ಹೆಬ್ರಿ: (ನ್ಯೂಸ್ ಮಲ್ನಾಡ್ ವರದಿ) ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿ ದಾರುಣ ರೀತಿಯಲ್ಲಿ ಮೃತಪಟ್ಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಶಶಾಂಕ್‌ ಮತ್ತು ನಿರ್ಮಿತಾ ಬೈಕಿನಲ್ಲಿ ತೀರ್ಥಹಳ್ಳಿ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಖಾಸಗಿ ಬಸ್‌ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಹೆಬ್ರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆಗುಂಬೆ ಘಾಟಿ ತಿರುವಿನಲ್ಲಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಶಶಾಂಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಹಿಂಬದಿ ಕುಳಿತಿದ್ದ ನಿರ್ಮಿತಾಗೆ ಕೂಡ ತೀವ್ರ ತರಹದ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ನಿಮ್ಮೂರಿನ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಎಷ್ಟು?

ಸಿವಿಲ್‌ ಎಂಜಿನಿಯರಿಂಗ್‌ ಮುಗಿಸಿ ಕಂಟ್ರಾಕ್ಟರ್‌ ಜತೆಗೆ ಕೆಲಸ ಮಾಡುತ್ತಿದ್ದ ಬಾರ್ಕೂರು ನಿವಾಸಿ ಸಶಾಂಕ್ (22) ಸ್ಥಳದಲ್ಲೇ ಮೃತಪಟ್ಟಿದ್ದ, ಗಂಭೀರ ಗಾಯಗೊಂಡಿದ್ದ ಸಹಸವಾರೆ ನಿರ್ಮಿತ(19) ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇನ್ನು ಶಶಾಂಕ್‌ ಸಹಿತ ಒಂದೇ ಕುಟುಂಬದ 6 ಮಂದಿ ಮೂರು ಬೈಕ್‌ನಲ್ಲಿ ಭಾನುವಾರ ಬೆಳಗ್ಗೆ ಹೊರಟಿದ್ದರು. ಶಶಾಂಕ್‌ ಅವರ ಜತೆ ಹಿಂಬದಿ ಸವಾರರಾಗಿ ಅಕ್ಕನ ಮಗಳು ನಿರ್ಮಿತಾ ಕುಳಿತಿದ್ದರು. ಅವರು ದ್ವಿತೀಯ ಪಿಯುಸಿ ಮುಗಿಸಿ ಪದವಿ ಕಾಲೇಜಿಗೆ ಸೇರಿದ್ದರು ಎಂದು ತಿಳಿದು ಬಂದಿದೆ.

ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ, ಪ್ರತಿಭಟನೆ

ಚಿಕ್ಕಮಗಳೂರು: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರೌಢ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಪಠ್ಯ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ದೇಶಭಕ್ತರಾದ ಸುಖದೇವ್, ರಾಜಗುರು, ಭಗತ್ ಸಿಂಗ್, ಭಗತ್ ಸಿಂಗ್, ಅವರ ಪಠ್ಯವನ್ನು ಪುಸ್ತಕದಿಂದ ಬಿಟ್ಟಿರುವ ಕ್ರಮವನ್ನು ಖಂಡಿಸಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಇದನ್ನೂ ಓದಿ: ಶೃಂಗೇರಿಯಲ್ಲೊಂದು ಹೃದಯ ವಿದ್ರಾವಕ ಘಟನೆ; ಕಾದ ಎಣ್ಣೆ ಬಾಣಲೆಗೆ ಬಿದ್ದು ಯುವಕ ಸಾವು

ಚಿಕ್ಕಮಗಳೂರು ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಮುಂಭಾಗದಲ್ಲಿ ಸರ್ಕಾರ ತೆಗೆದಿರುವ ಪಠ್ಯದ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಜೆರಾಕ್ಸ್ ಪ್ರತಿ ಹಂಚುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಸತ್ಯ ಬೂಧಿಯೊಳಗೆ ಮುಚ್ಚಿಟ್ಟ ಕೆಂಡದAತೆ ಅದು ಎಂದಾದರೂ ಹೊರಗೆ ಬಂದೇ ಬರುತ್ತದೆ. ವೀರ ಸಾವರ್ಕರ್, ಭಗತ್ ಸಿಂಗ್, ಸುಖದೇವ್, ರಾಜಗುರು ಪಠ್ಯವನ್ನು ತೆಗೆದು ಕಾಂಗ್ರೆಸ್ ಕುಲಪುತ್ರ ನೆಹರೂ ಪಠ್ಯವನ್ನು ಅಳವಡಿಸಲಾಗಿದೆ.
ಭಾರತದ ನೈಜ ಇತಿಹಾಸ ಅರಿತವರಿಗೆ ಶೂರರು ಯಾರು ಹೇಡಿಗಳು ಯಾರು ಎಂದು ತಿಳಿದಿದೆ, ಕ್ರಾಂತಿಕಾರಿ ಹೋರಾಟಗಾರರನ್ನು ಪಠ್ಯದಿಂದ ತೆಗೆಯಬಹುದು ಆದರೆ ಭಾರತೀಯರು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ. ಶ್ವಾನಕ್ಕೆ ಬಣ್ಣ ಬಳಿದರೆ ಸಿಂಹ ಎನಿಸಿಕೊಳ್ಳುವುದಿಲ್ಲ, ಸಿಂಹಕ್ಕೆ ಸರಪಳಿ ಹಾಕಿದರೆ ಅದು ಶ್ವಾನ ಆಗುವುದಿಲ್ಲ. ಕಾಂಗ್ರೆಸ್ಸಿಗರು ಸುಳ್ಳು ಇತಿಹಾಸವನ್ನು ಹಂಚುವ ಮುನ್ನ ಇದನ್ನು ಅರಿಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಕಿಡಿಕಾರಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಶಶಿ ಆಲ್ದೂರು, ಪುನೀತ್ ಸೇರಿದಂತೆ ಬಿಜೆಪಿ ಯುವಮೋರ್ಚಾ ಮುಖಂಡರು ಇದ್ದರು.

Most Popular

Recent Comments