Sunday, December 3, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಪ್ರವಾಸಿ ತಾಣದಲ್ಲಿ ಕಾಡು ಪ್ರಾಣಿಗಳ ಉಪಟಳ

ಚಿಕ್ಕಮಗಳೂರು: ಪ್ರವಾಸಿ ತಾಣದಲ್ಲಿ ಕಾಡು ಪ್ರಾಣಿಗಳ ಉಪಟಳ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕದ ಪಶ್ಚಿಮ ಭಾಗದಲ್ಲಿರುವ ಸುಂದರವಾದ ಜಿಲ್ಲೆ ಚಿಕ್ಕಮಗಳೂರು ‘ಕಾಫಿ ನಾಡು’ ಎಂದೇ ಪ್ರಸಿದ್ಧಿ ಪಡೆದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟಗಳು ಮತ್ತು ಆಕರ್ಷಣೀಯ ಗಿರಿಧಾಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಐತಿಹಾಸಿಕ ದೇವಾಲಯಗಳು ಹಾಗೂ ಜಲಪಾತಗಳು ಜನರ ಕಣ್ಮನ ಸೆಳೆಯುವಂತದ್ದು.

ಇದನ್ನೂ ಓದಿ; ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಇದನ್ನೂ ಓದಿ; ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ ಜಾರ್ಜ್ ನೇಮಕ

ಆದರೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಾಡು ಪ್ರಾಣಿಗಳ ಭೀತಿ ಶುರುವಾಗಿದೆ. ದತ್ತಪೀಠ, ಮುಳ್ಳಯ್ಯಗಿರಿಯ ತಪ್ಪಿನಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ನಿನ್ನೆ ಕಾಡಾನೆಗಳು ಪ್ರತ್ಯಕ್ಷವಾಗಿ ಕೆಲಕಾಲ ಭಯದ ವಾತಾರಣವನ್ನು ಸೃಷ್ಠಿಮಾಡಿತ್ತು.

ಇದನ್ನೂ ಓದಿ; ದೇವರು ಮನೆ ಗುಡ್ಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಕಂಡು ಪ್ರವಾಸಿಗಳು ಶಾಕ್

ಹೌದು ದತ್ತಪೀಠದ ಸಮೀಪ ಗಾಳಿಕೆರೆಗೆ ತೆರಳುವ ಮಾರ್ಗದಲ್ಲಿ ಎರಡು ಕಾಡಾನೆಗಳು ರಸ್ತೆಯಲ್ಲಿ ನಿಂತಿದ್ದವು, ಸ್ಥಳೀಯ ಯುವಕರು ಹಾಗೂ ಪ್ರವಾಸಿಗರು ಗಮನಿಸಿ ಕೂಗಾಟ ನಡೆಸಿದ್ದರಿಂದ ರಸ್ತೆಯಿಂದ ಅರಣ್ಯದ ಕಡೆಗೆ ತೆರಳಿದ್ದು ಕೆಲ ಹೊತ್ತು ಅಲ್ಲೇ ಓಡಾಟ ನಡೆಸಿ ನಂತರ ಮರಗಳಿರುವ ಸ್ಥಳಕ್ಕೆ ಆನೆಗಳು ತೆರಳಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಆನೆಗಳು ಆಹಾರ ಅರಸಿ ಬಂದಿರುವ ಸಾಧ್ಯತೆಯಿದ್ದು, ಕಾಡಾನೆ ಕಾಣಿಸಿಕೊಂಡು ಕೆಲ ಕಾಲ ಭಕ್ತರು ಹಾಗೂ ಸ್ಥಳೀಯರಿಗೆ ಆತಂಕ ಮೂಡಿಸಿದೆ.

ಚಿಕ್ಕಮಗಳೂರು: ಹತ್ತೂರು ತಿರುಗಿದರೂ ದೊರೆಯದ ಶೌಚಾಲಯ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರಕೃತಿ ಪ್ರೇಮಿಗಳ ಸ್ವರ್ಗ, ಪ್ರವಾಸಿಗರ ಮೆಚ್ಚಿನ ತಾಣವಾದ ಚಿಕ್ಕಮಗಳೂರಿನ ಬಾಬಾಬುಡನಗಿರಿ ದತ್ತ ಪೀಠ, ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಅಲ್ಲಿ ಕನಿಷ್ಠ ಶೌಚಾಲಯದಂತಹ ಮೂಲಸೌಕರ್ಯವಿಲ್ಲದೆ ತಾನು ಅನುಭವಿಸಿದ ಯಾತನೆಯನ್ನು ಮಹಿಳೆಯೊಬ್ಬರು ರಾಷ್ಟ್ರಪತಿ ಮರ್ಮು ಅವರಿಗೆ ಪತ್ರ ಮುಖಾಂತರ ವಿವರಿಸಿದ್ದಾರೆ. ಇದೀಗ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ;  ಮಧ್ಯಾಹ್ನದ ಊಟ ಸೇವಿಸಿ 35 ಸೈನಿಕರು ಅಸ್ವಸ್ಥ

ಕನ್ನಡದಲ್ಲಿ ಪತ್ರ ಬರೆದಿರುವ ಜಡೆಮ್ಮ ಎಂಬ ಮಹಿಳೆ ತನಗೆ ಎದುರಾದ ಸಂಕಷ್ಟವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಲಕ್ಷಾಂತರ ಜನರು ಭೇಟಿ ನೀಡುವ ಯಾತ್ರಾ ಕೇಂದ್ರಗಳಲ್ಲಿ ಕನಿಷ್ಠ ಶೌಚಾಲಯಗಳನ್ನಾದರೂ ನಿರ್ಮಿಸುವಂತೆ ಪತ್ರದಲ್ಲಿ ಮಹಿಳೆ ಒತ್ತಾಯಿಸಿದ್ದಾರೆ. ನೀವು ರಾಷ್ಟ್ರಪತಿಯಾದರೂ ಮಹಿಳೆಯಾಗಿರುವ ಕಾರಣ ನಿಮಗೆ ನನ್ನ ಯಾತನೆ ಹೆಚ್ಚು ಅರ್ಥವಾಗಬಹುದು ಎಂದು ವಿವರಿಸಿದ್ದಾರೆ. ಅಲ್ಲದೆ “ನನ್ನಂತಹ ಸಾಮಾನ್ಯ ಮಹಿಳೆಯರ ನೋವನ್ನು ತಿಳಿಸುವುದು ಪತ್ರದ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

“ಕೆಲವು ದಿನಗಳ ಹಿಂದೆ ನಾನು ಬಾಬಾಬುಡನಗಿರಿ ದತ್ತ ಪೀಠ, ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿಗೆ ಭೇಟಿ ನೀಡಿದ್ದೆ, ಬಾಬಾಬುಡನ್‌ಗಿರಿಯಲ್ಲಿ ಈ ವೇಳೆ ನನಗೆ ನೈಸರ್ಗಿಕ ಕರೆ ಒತ್ತಡ ಆರಂಭವಾಯಿತು. ಈ ವೇಳೆ ಸಾರ್ವಜನಿಕ ಶೌಚಾಲಯಕ್ಕಾಗಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. “ನಂತರ ಸೀತಾಳಯ್ಯನಗಿರಿ ಹತ್ತಿ ಸಾರ್ವಜನಿಕ ಶೌಚಾಲಯಕ್ಕಾಗಿ ಅವರಿವರಲ್ಲಿ ಕೇಳಿದೆ. ಅಲ್ಲಿಯೂ ಶೌಚಾಲಯವಿರಲಿಲ್ಲ. ಈ ವೇಳೆ ಕ್ಷಣಕ್ಷಣಕ್ಕೂ ಯಾತನೆ ಅನುಭವಿಸಿದೆ. ಬಳಿಕ ಸಹಿಸಲಾಗದೆ ಅವಮಾನ ಬದಿಗಿಟ್ಟು ಮೂತ್ರ ವಿಸರ್ಜನೆ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ; ಯುವಕನ ಕೊಲೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರತಿದಿನವೂ ಜನರು ತಮ್ಮ ಧರ್ಮ ಮತ್ತು ದೇವರಿಗಾಗಿ ಹೋರಾಡುತ್ತಾರೆ, ಆದರೆ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ಅವರ ನಿರ್ಲಕ್ಷ್ಯ ದುರದೃಷ್ಟಕರ. ಇಂತಹ ಪ್ರಸಿದ್ಧ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಸಂವಿಧಾನದ 19 ಮತ್ತು 21 ನೇ ವಿಧಿಯ ಉಲ್ಲಂಘನೆಯಾಗಿದೆ. ನಾವು ಮಂಗಳ ಗ್ರಹವನ್ನು ತಲುಪಿದ್ದೇವೆ ಆದರೆ ಭೂಮಿ ಮೇಲೆ ಅಗತ್ಯವಿದ್ದಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಾಗಿರುವುದು ಶೋಚನೀಯ ಎಂದು ವಿವರಿಸಿದ್ದಾರೆ.

Most Popular

Recent Comments