Sunday, June 4, 2023
Homeಬಯಲುಸೀಮೆತುಮಕೂರಿನಲ್ಲಿ ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಮಹಿಳೆಗೂ ನ್ಯಾಯವನ್ನು ಒದಗಿಸಿಕೊಡಿ : ಗೌರಿಶಂಕರ್

ತುಮಕೂರಿನಲ್ಲಿ ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಮಹಿಳೆಗೂ ನ್ಯಾಯವನ್ನು ಒದಗಿಸಿಕೊಡಿ : ಗೌರಿಶಂಕರ್

ತುಮಕೂರು: ಬರೀ ಸಿಟಿ ಹೆಣ್ಣು ಮಕ್ಕಳನ್ನ ಮಾತ್ರ ನೋಡಬೇಡಿ. ಗ್ರಾಮೀಣ ಹೆಣ್ಣು ಮಕ್ಕಳಿಗೂ ಜೀವವಿದೆ ಅನ್ನೋದು ಮರಿಬೇಡಿ ಎಂದು ಹೇಳುವ ಮೂಲಕ ತುಮಕೂರಿನ ಮಹಿಳೆಗೂ ನ್ಯಾಯವನ್ನು ಒದಗಿಸಿಕೊಡಿ ಎಂದು ತುಮಕೂರಿನ ಶಾಸಕ ಡಿ.ಸಿ ಗೌರಿ ಶಂಕರ್ ಆಗ್ರಹಿಸಿದರು.

ತುಮಕೂರು ಜಿಲ್ಲೆಯ ಗ್ರಾಮಾಂತರದ, ಚೋಟಸಾಬರ ಪಾಳ್ಯದಲ್ಲಿ ನಡೆದಿದ್ದ ಯುವತಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಶಂಕೆ ಪ್ರಕರಣಕ್ಕೆ ಸಂಬoಧಿಸಿದoತೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಾಂತರ ಶಾಸಕರ ನೇತೃತ್ವದಲ್ಲಿ ಇಂದು ತುಮಕೂರು ಜಿಲ್ಲಾ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಲಾಯಿತು.

ತುಮಕೂರು ವಿವಿ ಮುಂಭಾಗದಿoದ ಹೊರಟ ಪ್ರತಿಭಟನಾ ಮೆರವಣಿಗೆಯು ತುಮಕೂರು ಜಿಲ್ಲಾ ಎಸ್ಪಿ ಕಚೇರಿವರೆಗೂ ಬಂದು ತಲುಪಿ, ಅಲ್ಲಿಂದ ಕಚೇರಿ ಮುಂದೆ ಸುಮಾರು ಒಂದು ಗಂಟೆಗಳಕಾಲ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ಶಾಸಕರು, ಚಾಮುಂಡಿ ಬೆಟ್ಟದಲ್ಲಿ ನಡೆದ ಗ್ಯಾಂಗ್ ರೇಪ್ ಗೆ ಸರ್ಕಾರವು ಗಮನಕೊಟ್ಟು ಆರೋಪಿಗಳನ್ನ ಹಿಡಿಯಲು ಪ್ರಯತ್ನವನ್ನು ಮಾಡುತ್ತಿದೆ. ಇದೇ ರೀತಿಯಲ್ಲಿ ತುಮಕೂರಿನಲ್ಲಿ ನಡೆದ ಮಹಿಳೆಯ ಅತ್ಯಾಚಾರ ಹಾಗು ಕೊಲೆ ಪ್ರಕರಣಕ್ಕೆ ಗಮನಹರಿಸಿ ತನಿಖೆ ತಂಡಗಳನ್ನು ರಚಿಸಿ ಆರೋಪಿಗಳನ್ನ ಬಂಧಿಸಬೇಕು. ಆಗಿರುವ ಅನ್ಯಾಯಕ್ಕೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳೇ, ಸನ್ಮಾನ್ಯ ಗೃಹ ಮಂತ್ರಿಗಳೇ ದಯವಿಟ್ಟು ಚಾಮುಂಡಿ ಬೆಟ್ಟದಲ್ಲಿ ನಡೆದ ಪ್ರಕರಣ ಕ್ಕೆ ತಾವೇ ಖುದ್ದಾಗಿ ಹೋಗಿದಿರಿ. ದೆಹಲಿಯಿಂದ ಸಿಎಂ ಕರೆ ಮಾಡಿ ಮಾಹಿತಿಯನ್ನು ಪಡೆದಿದ್ದಾರೆ. ಆರೋಪಿಗಳನ್ನ ಬೇಗ ಬಂಧಿಸಿ ಅಂತ ಹೇಳಿದ್ದಿರಿ. ಬರೀ ಸಿಟಿ ಹೆಣ್ಣು ಮಕ್ಕಳನ್ನ ನೋಡಬೇಡಿ ಎಂದು ಕಿಡಿಕಾರಿದರು.

Most Popular

Recent Comments