ಮಂಡ್ಯ : ಯುವಕನೊಬ್ಬ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲು ಚಲಿಸಿದ ಘಟನೆ ಯಲಿಯೂರು-ಮಂಡ್ಯ ರೈಲ್ವೆ ಮಾರ್ಗದಲ್ಲಿ ಸಂಭವಿಸಿದೆ.
ಮೈಸೂರು-ಬೆಂಗಳೂರು ಸಂಗೊಳ್ಳಿ ರಾಯಣ್ಣ ಮೆಮು ಪ್ರಯಾಣಿಕ ರೈಲು ಸಂಖ್ಯೆ ( 06258 ) ನಲ್ಲಿ ಬುಧವಾರ ಈ ದುರಂತ ಸಂಭವಿಸಿದೆ.
ಅಪಘಾತ ಸಂಭವಿಸಿದ ನಂತರ ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ನಿಲ್ದಾಣವನ್ನು 64 ನಿಮಿಷ ತಡವಾಗಿ ತಲುಪಿತು. ಇದೇ ಮಾರ್ಗದಲ್ಲಿ ಬರುತ್ತಿದ್ದ ಬೇರೆ ರೈಲುಗಳಿಗೂ ಇದರಿಂದ ತೊಂದರೆಯಾಗಿ ವಿವಿಧ ನಿಲ್ದಾಣಗಳಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿತು.
ಮೆಮು ರೈಲು ನಿನ್ನೆ ಅಪರಾಹ್ನ 2.40 ರ ಸುಮಾರಿಗೆ ಯಲಿಯೂರು ರೈಲು ನಿಲ್ದಾಣದಿಂದ ಮಂಡ್ಯಕ್ಕೆ ಪ್ರಯಾಣಿಸುತ್ತಿತ್ತು.
ಅಪಘಾತವಾದ ಕೂಡಲೇ ಲೊಕೊ ಪೈಲಟ್ ರಾಮಕೃಷ್ಣ ಬ್ರೇಕ್ ಹಾಕಿದ್ದರಿಂದ ಸುಮಾರು 64 ನಿಮಿಷಗಳ ಕಾಲ ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ರೈಲು ನಿಲ್ಲಬೇಕಾಯಿತು. ನಂತರ ಲೊಕೊ ಪೈಲಟ್ ರೈಲಿನ ಹಿಂಬದಿಯ ಕ್ಯಾಬ್‌ನಿಂದ ರೈಲನ್ನು ಚಲಾಯಿಸಲು ನಿರ್ಧರಿಸಿದರು
ರೈಲು ಹಠಾತ್ತನೆ ಬ್ರೇಕ್ ಹಾಕಿದ್ದರಿಂದ ಎಂಜಿನ್ ನ ಕೆಳಗಿರುವ ಪೈಪ್ ಗೆ ಹಾನಿಯುಂಟಾಗಿದ್ದು ಇದರಿಂದ ರೈಲನ್ನು ಚಾಲನೆ ಮಾಡಲು ಕಷ್ಟವಾಯಿತು. ಕೊನೆಗೆ ರೈಲು ಅಲ್ಲಿಂದ ಹೊರಡುವಾಗ ಸಮಯ ಸಾಯಂಕಾಲ 4 ಗಂಟೆ 8 ನಿಮಿಷ ಆಗಿತ್ತು ಎಂದು ಬೆಂಗಳೂರು ವಿಭಾಗದ ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಮಂಡ್ಯ ನಿಲ್ದಾಣವನ್ನು ತಡವಾಗಿ ತಲುಪಿದ ಕಾರಣದಿಂದಾಗಿ ಈ ಸಮಯದಲ್ಲಿ ಅದೇ ಮಾರ್ಗದಲ್ಲಿ ಬರುವ ಬೇರೆ ರೈಲಿನಲ್ಲಿ ಪ್ರಯಾಣಿಕರಿಗೆ ಹತ್ತಿಕೊಳ್ಳುವ ವ್ಯವಸ್ಥೆ ಮಾಡಲಾಯಿತು.
ಈ ಸಮಯದಲ್ಲಿ ಒಂದು ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ಅನುವು ನೀಡಿದ್ದರಿಂದ ಹಲವು ರೈಲುಗಳು ನಿಲ್ದಾಣವನ್ನು ತಲುಪುವುದು ವಿಳಂಬವಾಯಿತು.