Friday, June 9, 2023
Homeಮಲೆನಾಡುಚಿಕ್ಕಮಗಳೂರುಮೂಡಿಗೆರೆ: ಕಾಫಿನಾಡಲ್ಲಿ ಮೊದಲ ಬಲಿ ಪಡೆದುಕೊಂಡ ಮಳೆರಾಯ

ಮೂಡಿಗೆರೆ: ಕಾಫಿನಾಡಲ್ಲಿ ಮೊದಲ ಬಲಿ ಪಡೆದುಕೊಂಡ ಮಳೆರಾಯ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) 2023ರ ಮಳೆರಾಯ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಲಿಯನ್ನು ಪಡೆದುಕೊಂಡಿದೆ.

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ಬೋರ್ಡ್ ಸಮೀಪ ಸಂಚರಿಸುತ್ತಿದ್ದ ಸ್ಕೂಟಿ ಮೇಲೆ ಮರವೊಂದು ಬಿದ್ದು ಸವಾರ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ಇಂದು ಮೂಡಿಗೆರೆ ವ್ಯಾಪ್ತಿಯಲ್ಲಿ ವರಣರಾಯನ ಹೊಡೆತಕ್ಕೆ ಒಂದರ ಹಿಂದೆ ಒಂದರಂತೆ ಏಕಕಾಲಕ್ಕೆ ಮೂರು ಮರಗಳು ಧರೆಗುರುಳಿವೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಣುಗೋಪಾಲ್ ಮೇಲೆ ಮರ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವೇಣುಗೋಪಾಲ್ ತಮ್ಮ ಕುಟುಂಬದೊಂದಿಗೆ ಹಲವಾರು ವರ್ಷದಿಂದ ವಾಸವಿದ್ದರು. ಮೂಡಿಗೆರೆಯಲ್ಲಿ ಖಾಸಗಿ ಹೋಂ ಸ್ಟೇ ಜೊತೆಗೆ ಬಳೆ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಹೋಂ ಸ್ಟೇ ಸಮೀಪವೇ ಮರ ಅವರ ಸ್ಕೂಟಿ ಮೇಲೆ ಬಿದ್ದಿದ್ದು ಒಂದು ನಿಮಿಷ ವ್ಯತ್ಯಾಸವಾಗಿದ್ದರು ವೇಣುಗೋಪಾಲ್ ಬಚಾವಾಗುತ್ತಿದ್ದರು. ಆದರೆ ವಿಧಿ ಅವರನ್ನು ಬಲಿಪಡೆದುಕೊಂಡಿದೆ. ಈ ಕುರಿತು ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಿಗೆರೆ: ಸ್ಕೂಟಿ ಹಾಗೂ ಪಿಕಪ್ ನಡುವೆ ಅಪಘಾತ; ಗಂಭೀರ ಗಾಯ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ 20-05-2023) ಸ್ಕೂಟಿ ಹಾಗೂ ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟಿ ಸವಾರರನಿಗೆ ಗಂಭೀರ ಗಾಯಾಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಸ್ಕೂಟಿ ಚಾಲಕ ಸಂಪತ್ (ಸಂತೋಷ್ 37) ಗಂಭೀರ ಗಾಯಾಗೊಂಡ ವ್ಯಕ್ತಿ.


ಇತ್ತೀಚಿನ ಜನಪ್ರಿಯ ಸುದ್ದಿಗಳು 


ಮೂಡಿಗೆರೆ ತಾಲೂಕು ಬಾಳೂರು ಹೋಬಳಿ, ನಡುವಾಳೆಯ ಉರುವಿನ್ ಖಾನ್ ಅಂಬೇಡ್ಕರ್ ನಗರ ಸಮೀಪ ನಡೆದಿದೆ. ಗಂಭೀರ ಗಾಯಗೊಂಡ ಸಂಪತ್ ಅನ್ನು ನಿಡುವಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ದಾಖಲಿಸಲಾಗಿದೆ.

Most Popular

Recent Comments