Tuesday, November 28, 2023
Homeಇತರೆಬೆಂಗಳೂರು : ಜುಲೈ 29 ಕ್ಕೆ ಸಾರಿಗೆ ನೌಕರರ ಧರಣಿ

ಬೆಂಗಳೂರು : ಜುಲೈ 29 ಕ್ಕೆ ಸಾರಿಗೆ ನೌಕರರ ಧರಣಿ

ಬೆಂಗಳೂರು : ಸಾರಿಗೆ ಮುಷ್ಕರದ ಸಮಯದಲ್ಲಿ ಸೇವೆಯಿಂದ ವಜಾಗೊಳಿಸಿರುವಂತಹ ಎಲ್ಲಾ ಕಾರ್ಮಿಕರನ್ನು ಕರ್ತವ್ಯಕ್ಕೆ ಮರುನೇಮಿಸಿಕೊಳ್ಳಬೇಕು ಎಂದು ಹಾಗೂ ವಿವಿಧ ಬೇಡಿಕೆಗಳ ಈಡೀರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ನಿಗಮಗಳ ನೌಕರರ ಒಕ್ಕೂಟವು ಇದೇ ಜುಲೈ 29 ರಂದು ಬೆಳಿಗ್ಗೆ 11 ಗಂಟೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿಯನ್ನು ಹಮ್ಮಿಕೊಂಡಿದ್ದಾರೆ.

ಸೋಮವಾರ ಇಲ್ಲಿ ಸುದ್ದಿಗೂಷ್ಟಿಯಲ್ಲಿ ಮಾತನಾಡಿದಂತಹ ಒಕ್ಕೂಟದ ಅಧ್ಯಕ್ಷ ಎಚ್ ಡಿ ರೇವಪ್ಪ ರಾಜ್ಯ ರಸ್ತೆ ಸಾರಿಗೆ ನಿಗಮದಳ ನೌಕರರು ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಏಪ್ರಿಲ್ ನಲ್ಲಿ ಮುಷ್ಕರ ನಡೆಸಿದ್ದರು. ಈ ಕಾರಣಕ್ಕೆ ನಾಲ್ಕು ಸಾರಿಗೆ ನಿಗಮಗಳಲ್ಲಿ ಸಾವಿರಾರು ಕಾರ್ಮಿಕರನ್ನು ವಜಾಗೊಳಿಸಿದ್ದು ವರ್ಗಾವಣೆ ಹಾಗೂ ಅಮಾನತು ಶಿಕ್ಷೆಗಳನ್ನು ನೀಡಲಾಗಿದೆ ಎಂದು ದೂರಿದರು.

ನಿವೃತ್ತಿ ಅಂಚಿನಲ್ಲಿದ್ದಂತಹ ನೌಕರರು ಮಾತ್ರವಲ್ಲದೆ ಟ್ರೈನಿ ನೌಕರರನ್ನೂ ಸೇವೆಯಿಂದ ವಜಾಗೊಳಿಸಿದ್ದಾರೆ. ಕೆಲವರ ಅಮಾನತು ಈವರೆಗೂ ತೆರುವು ಮಾಡಿಲ್ಲ.60 ಸಾವಿರಕ್ಕೂ ಹೆಚ್ಚು ಮಂದಿಗೆ ಆಪಾದನಾ ಪತ್ರ ನೀಡಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ನಂತರ ಮಾತನಾಡಿದಂತಹ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ಮಂಜುನಾಥ್ “ಸೇವೆಯಿಂದ ವಜಾಗೊಳಿಸಿರುವಂತಹ ಎಲ್ಲಾ ಕಾರ್ಮಿಕರು ಹಾಗೂ ಸೇವೆಯಿಂದ ಕೈಬಿಟ್ಟಿರುವ ಟ್ರೈನಿ ಕಾರ್ಮಿಕರನ್ನು ಕೂಡಲೇ ಕರ್ತವ್ಯಕ್ಕೆ ಮರು ನೇಮಿಸಿಕೊಳ್ಳಬೇಕು ದೂರದ ವಿಭಾಗಗಳಿಗೆ ವರ್ಗಾವಣೆಗೊಂಡಿರುವವರನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದಂತಹ ಹಿಂದಿನ ಸ್ಥಳಗಳಿಗೆ ನೇಮಿಸಬೇಕು ಎಂದು ಒತ್ತಾಯಿಸಿದರು”

ಹಾಗೂ ಕಾರ್ಮಿಕರಿಗೆ ಗೈರು ಹಾಜರಿ ಅಪಾದನಾ ಪತ್ರಗಳನ್ನು ವಾಪಸ್ ಪಡೆದು ಶಿಸ್ತು ಕ್ರಮಗಳನ್ನು ರದ್ದು ಮಾಡಬೇಕು. ಕಾರ್ಮಿಕ ಸಂಘಗಳೊಂದಿಗೆ ಚರ್ಚಿಸಿ, ವೇತನ ಪರಿಷ್ಕರಣೆ ಯನ್ನು ಜಾರಿ ಮಾಡಬೇಕು ಈ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರು ಧರಣಿ ನಡೆಸಲಿದ್ದೇವೆ ಎಂದು ಅವರು ಹೇಳಿದರು.

Most Popular

Recent Comments