Wednesday, November 29, 2023
Homeಇತರೆಚಲಿಸುತ್ತಿರುವ ರೈಲಿನ ಜೊತೆ ವಿಡಿಯೋ ಮಾಡುವಾಗ ರೈಲಿಗೆ ಸಿಲುಕಿ ಯುವಕ ಸಾವು. ವಿಡಿಯೋ ವೈರಲ್

ಚಲಿಸುತ್ತಿರುವ ರೈಲಿನ ಜೊತೆ ವಿಡಿಯೋ ಮಾಡುವಾಗ ರೈಲಿಗೆ ಸಿಲುಕಿ ಯುವಕ ಸಾವು. ವಿಡಿಯೋ ವೈರಲ್

ಮಧ್ಯಪ್ರದೇಶ: ರೈಲು ಚಲಿಸುವ ವೇಳೆ ಅದರೊಡನೆ ವಿಡಿಯೋ ಮಾಡಲು ಹೋಗಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಹೋಶಂಗಾಬಾದ್ ನಲ್ಲಿ ನಡೆದಿದೆ.


ಭಾನುವಾರ ಇಟಾರ್ಸಿಯ ಸಂಜು ಎಂಬ ಯುವಕನೊಬ್ಬ ರೈಲು ಬರುವ ಸಮಯದಲ್ಲಿ ವಿಡಿಯೋ ಮಾಡುತ್ತಿರುವಾಗ ರೈಲಿಗೆ ತಗುಲಿ ಸಾವಿಗೀಡಾಗಿದ್ದಾನೆ.

ಯುವಕ ತನ್ನ ಸ್ನೇಹಿತನೊಂದಿಗೆ ಶರದ್ ದೇವ್ ಬಾಬಾ ನ ದೇವಾಲಯಕ್ಕೆ ತೆರಳಿದ ನಂತರ ರೈಲು ಬರುವ ಸಮಯದಲ್ಲಿ ಸಿನಿಮಾ ಶೈಲಿಯಲ್ಲಿ ನಡೆದುಕೊಂಡು ಬರುವ ಸಮಯದಲ್ಲಿ ವಿಡಿಯೋ ಮಾಡುವಂತೆ ತನ್ನ ಗೆಳೆಯನಿಗೆ ಮೊಬೈಲ್ ನನ್ನು ನೀಡಿ ರೈಲು ಇಂಜಿನ್ ಬರುವವರೆಗೆ ವಿಡಿಯೋ ಮಾಡು ನಂತರ ಅಲ್ಲಿಂದ ದೂರ ಸರಿಯುತ್ತೇನೆ ಎಂದು ಸಂಜು ತನ್ನ ಗೆಳೆಯನಿಗೆ ಹೇಳಿದ್ದಾನೆ.

ರೈಲು ಬರುವ ಸಮಯದಲ್ಲಿ ಸಂಜು ನಡೆದುಕೊಂಡು ಬರುವ ಸಮಯದಲ್ಲಿ ರೈಲು ಹತ್ತಿರ ಸಮೀಪಿಸುತ್ತಿದ್ದಂತೆ ಅವನಿಗೆ ರೈಲಿನಿಂದ ದೂರ ಸರಿಯಲು ಸಾಧ್ಯವಾಗದ ಕಾರಣ ವೇಗವಾಗಿ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಆತನ ತಲೆಗೆ ಗಂಭೀರ ಪೆಟ್ಟು ಬಿದ್ದಿತು.

ಘಟನೆಯ ನಂತರ ಯುವಕನ ಸ್ನೇಹಿತ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿ, ಗಂಭೀರ ಸ್ಥಿತಿಯಲ್ಲಿದ್ದ ಸಂಜುವನ್ನು ಆಸ್ಪತ್ರೆಗೆ ದಾಖಲಿಸಿದರು ನಂತರ ವೈದ್ಯರು ಯುವಕ ಸಾವನಪ್ಪಿರುವುದನ್ನು ದೃಢಪಡಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಸಿನಿಮೀಯ ರೀತಿಯಲ್ಲಿ ವಿಡಿಯೋ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಯುವಕನಿಗೆ ಆತನಿಗಿದ್ದ ಹವ್ಯಾಸವೇ ಆತನ ಸಾವಿಗೆ ಕಾರಣವಾಗಿದೆ.

Most Popular

Recent Comments