Tuesday, November 28, 2023
Homeಸುದ್ದಿಗಳುಕ್ರೀಡೆಟೋಕಿಯೋ 2020: ಸೆಮಿಫೈನಲ್ ಗೆ ಲಗ್ಗೆ ಇಟ್ಟಿರುವ ಲೋವ್ಲಿನಾ ಬೋರ್ಗೋಹೈನ್

ಟೋಕಿಯೋ 2020: ಸೆಮಿಫೈನಲ್ ಗೆ ಲಗ್ಗೆ ಇಟ್ಟಿರುವ ಲೋವ್ಲಿನಾ ಬೋರ್ಗೋಹೈನ್

ಟೋಕಿಯೋ(ಜು.30): ಭಾರತದ ಪಾಲಿಗೆ ಇಂದು ಶುಭ ಶುಕ್ರವಾರವಾಗಿದೆ. ಮಹಿಳಾ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೈನೀಸ್ ತೈಪೆಯ ಚೆನ್ ನೀನ್-ಚಿನ್ ವಿರುದ್ದ 4-1 ಅಂತರದಲ್ಲಿ ಜಯಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರ ಜತೆಗೆ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಸಹ ಖಚಿತಪಡಿಸಿಕೊಂಡಿದ್ದಾರೆ.

ಮಹಿಳಾ ವಾಲ್ಟರ್‌ವೇಟ್ ವಿಭಾಗದಲ್ಲಿ ಚೈನೀಸ್ ತೈಪೆಯ ಚೆನ್ ನೀನ್-ಚಿನ್ ಎದುರು ಪ್ರಾಬಲ್ಯ ಮೆರದಂತಹ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶಿಸುವ ಮೂಲಕ ಇಡೀ ದೇಶವೇ ಸಂಭ್ರಮಿಸುವoತೆ ಮಾಡಿದ್ದಾರೆ.

ಲೊವ್ಲಿನಾ ಬೊರ್ಗೊಹೈನ್ ಇದೀಗ ಕಂಚಿನ ಪದಕ ಖಚಿತ ಪಡಿಸಿಕೊಂಡಿದ್ದು, ಹೀಗೆಯೇ ಸೆಮಿಫೈನಲ್‌ನಲ್ಲಿ ಗೆಲುವು ದಾಖಲಿಸಿದರೆ ಚಿನ್ನ ಅಥವಾ ಬೆಳ್ಳಿ ಪದಕಕ್ಕಾಗಿ ಪೈಪೋಟಿ ನಡೆಸಬಹುದಾಗಿದೆ. ಒಂದು ವೇಳೆ ಸೆಮೀಸ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಸೋತರೂ ಕಂಚಿನ ಪದಕ ಭಾರತೀಯ ಬಾಕ್ಸರ್ ಪಾಲಾಗಲಿದೆ.

ಗುರುವಾರವಷ್ಟೇ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಆದರೆ ಇಂದು ಲೊವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ನಲ್ಲಿ ಈಗಾಗಲೇ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಈಗ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶಿಸುವ ಮೂಖಾಂತರ ಮತ್ತೊಂದು ಪದಕ ಭಾರತದ ಪಾಲಾದಂತೆ ಆಗಿದೆ.

Most Popular

Recent Comments