Saturday, June 10, 2023
Homeಸುದ್ದಿಗಳುಕ್ರೀಡೆಹಾಕಿಯಲ್ಲಿ ದಾಖಲೆ ಬರೆದ ಭಾರತದ ವನಿತೆಯರು. 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ

ಹಾಕಿಯಲ್ಲಿ ದಾಖಲೆ ಬರೆದ ಭಾರತದ ವನಿತೆಯರು. 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ

ಟೋಕಿಯೊ: ಒಲಿಂಪಿಕ್ಸ್ ಇತಿಹಾಸದಲ್ಲಿ 41 ವರ್ಷಗಳ ನಂತರ ಎಂಟರಘಟ್ಟಕ್ಕೇರಿರುವ ಭಾರತದ ಮಹಿಳಾ ತಂಡ ಇಂದು ನಡೆದಂತಹ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ.

ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾವನ್ನು1 -0 ಅಂತರದಿoದ ಸೋಲಿಸಿ ಇತಿಹಾಸದಲ್ಲಿ ಮೊದಲನೇ ಬಾರಿಗೆ ಸೆಮಿಫೈನಲ್‌ನನ್ನು ಪ್ರವೇಶಿಸಿದೆ.

ಎ ಗುಂಪಿನಲ್ಲಿ ಹ್ಯಾಟ್ರಿಕ್ ಸೋಲಿನ ನಡುವೆಯೂ ಕೊನೆಯ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆಯನ್ನು ತೋರಿದ ಭಾರತ ತಂಡ, 6 ಪಾಯಿಂಟ್ಸ್ಗಳೊoದಿಗೆ 4ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಕೊನೆ ಎರಡು ಹಣಾಹಣಿಯಲ್ಲಿ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಎದುರು ಜಯ ದಾಖಲಿಸಿತ್ತು.

ಮಹಿಳಾ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡಾಗ ಎಂಟರಘಟ್ಟಕ್ಕೇರಿದ ಸಾಧನೆಯನ್ನು ಮಾಡಿತ್ತು.

1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆದಿರುವುದೇ ಒಲಿಂಪಿಕ್ಸ್ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಶ್ರೇಷ್ಠ ಸಾಧನೆ ಎನಿಸಿದೆ. ಮುಂದೆ ಬರುವ ಸೆಮಿಫೈನಲ್ ನಲ್ಲಿ ಭಾರತವು ಅರ್ಜೆಂಟೀನಾವನ್ನು ಎದುರಿಸಲಿದೆ.

Most Popular

Recent Comments