Saturday, December 9, 2023
Homeಸುದ್ದಿಗಳುಕ್ರೀಡೆಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್ : ಪ್ರಧಾನಿ ನರೇಂದ್ರ ಮೋದಿ

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್ : ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ(ಆ.೦9): ಟೋಕಿಯೋ  ಒಲಿಂಪಿಕ್ಸ್  ಪದಕವನ್ನು ಗೆದ್ದ ಕ್ರೀಡಾಪಟುಗಳು ದೇಶವನ್ನು ಹೆಮ್ಮೆ ಹಾಗೂ ಸಂಭ್ರಮ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿದ ಮೋದಿಯವರು ಯುವ ಪ್ರತಿಭೆಗಳಿಗೆ ಮುಂದೆ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಗಬೇಕಿದೆ. ಇದು ಕ್ರೀಡೆಯನ್ನು ಮತ್ತಷ್ಟು ಉತ್ತಮಪಡಿಸಲು ಕಠಿಣ ಪರಿಶ್ರಮ ಪಡಬೇಕಾದ ಸಮಯ ಎಂದಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದಿದೆ.

ಉತ್ತಮ ಪ್ರದರ್ಶನ ನೀಡಿದಂತಹ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಎಲ್ಲಾ ಕ್ರೀಡಾಪಟುಗಳು ಒಗ್ಗಟ್ಟು, ಸಮರ್ಪಣೆ, ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್ ಎಂದ ಅವರು, ಉತ್ತಮವಾಗಿ ಒಲಿಂಪಿಕ್ಸ್ ಆಯೋಜಿಸಿದ ಟೋಕಿಯೋಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಸೇರಿ ಒಟ್ಟು 7 ಪದಕಗಳನ್ನು ಜಯಿಸುವುದರೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಸಾಧನೆಯನ್ನು ಮಾಡಿದೆ.

ಮೀರಬಾಯಿ ಚಾನು ಮಹಿಳೆಯರ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದರೆ, ಪಿ.ವಿ ಸಿಂಧು, ಲೊವ್ಲೀನಾ ಬೊರ್ಗೊಹೈನ್, ಭಾರತೀಯ ಹಾಕಿ ತಂಡ ಹಾಗೂ ಭಜರಂಗ್ ಪೂನಿಯಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇನ್ನು ಮಿಂಚಿನ ಪ್ರದರ್ಶನ ತೋರಿದ ಕುಸ್ತಿಪಟು ರವಿಕುಮಾರ್ ದಹಿಯಾರವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ  ಶತಮಾನದ ಬಳಿಕ  ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕವನ್ನು ಗೆದ್ದು ಇತಿಹಾಸವನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ .

Most Popular

Recent Comments