Sunday, October 1, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ರಂಜಾನ್ ಸಾಮೂಹಿಕ ಪ್ರಾರ್ಥನೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಆಗಮಿಸಿದ್ದಕ್ಕೆ ಎರಡು ಗುಂಪುಗಳ ನಡುವೆ...

ಚಿಕ್ಕಮಗಳೂರು: ರಂಜಾನ್ ಸಾಮೂಹಿಕ ಪ್ರಾರ್ಥನೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಆಗಮಿಸಿದ್ದಕ್ಕೆ ಎರಡು ಗುಂಪುಗಳ ನಡುವೆ ಕಿರಿಕ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಇಂದು ಎಲ್ಲೆಡೆ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು ಚಿಕ್ಕಮಗಳೂರಿನಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಎರಡು ಗುಂಪುಗಳ ನಡುವೆ ಕಿರಿಕ್ ಆಗಿರುವ ಘಟನೆ ನಡೆದಿದೆ.

ಇದನ್ನೂ ಓದಿ; ದಂಪತಿಗಳ ಬಲಿ ಪಡೆದ ಜವರಾಯ, ಭೀಕರ ಅಪಘಾತದಲ್ಲಿ ಮಕ್ಕಳ ಸ್ಥಿತಿಯೂ ಗಂಭೀರ

ಪ್ರಾರ್ಥನಾ ಸ್ಥಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಆಗಮಿಸಿದ್ದು ಇದಕ್ಕೆ ಇನ್ನೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ಹಿಂದೆ ಹಂದಿ ಕಡಿದು ಮಸೀದಿಗೆ ಎಸೆದು ಮುಸ್ಲಿಂರ ಭಾವನೆಗೆ ದಕ್ಕೆ ತಂದಿದ್ದ ಆರೆಸ್ಸೆಸ್ ನ ತಮ್ಮಯ್ಯಗೆ ಒಳಗೆ ಬರಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ನಗರದ ಕೆಇಬಿ ಸರ್ಕಲ್ ನಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವಾಗ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಕಾಂಗ್ರೆಸ್ ಪ್ರಚಾರಕ್ಕೆ ಆಗಮಿಸಿದರು. ಈ ವೇಳೆ ಎರಡು ಮುಸ್ಲಿಂ ಗುಂಪುಗಳ ನಡುವೆ ವಾಕ್ಸಮರ ನಡೆದಿದ್ದು, ತಮ್ಮಯ್ಯ ವಿರುದ್ಧ ಮುಸ್ಲಿಮರು ರೆಬಲ್ ಆಗಿದ್ದರು. ಅಲ್ಪಸಂಖ್ಯಾತರ ಅಸಮಾಧಾನದಿಂದ ಮುಜುಗರಕ್ಕೀಡಾದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ. ತಮ್ಮಯ್ಯ ಸ್ಥಳದಿಂದ ಕಾಲ್ಕಿತ್ತರು.

ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು, ಪೊಲೀಸರು ಹರಸಾಹಸ ಪಟ್ಟು ಗುಂಪನ್ನು ಚದುರಿಸಿದರು.

ಇದನ್ನೂ ಓದಿ; ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಇದನ್ನೂ ಓದಿ; ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ವಿರುದ್ಧ 41 ಚೆಕ್‌ ಬೌನ್ಸ್‌ ಪ್ರಕರಣ

ಶೃಂಗೇರಿ ಕ್ಷೇತ್ರದಲ್ಲಿ ತಂದೆಯ ಪರ ಪ್ರಚಾರಕ್ಕಿಳಿದ ಅಭ್ಯರ್ಥಿಗಳ ಮಕ್ಕಳು

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಟಿ ಡಿ ರಾಜೇಗೌಡರವರ ಮೇಲಿರುವ ಅಭಿಮಾನ ಹಾಗು ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಶಾಸಕ ಟಿಡಿ ರಾಜೇಗೌಡರು ಪ್ರೀತಿಯ ರಾಜಕಾರಣ ಮಾಡುತ್ತಿದ್ದಾರೆ. ಶೃಂಗೇರಿ ಕ್ಷೇತ್ರಾದ್ಯಂತ ಯುವ ಸಮೂಹವು ನಮ್ಮ ಜನಪರ ಕಾಂಗ್ರೆಸ್ ನತ್ತ ಬರುತ್ತಿದ್ದು ಇದರಿಂದ ಹತಾಶೆಗೆ ಒಳಗಾದ ಬಿಜೆಪಿಯ ಜೀವರಾಜ್ ಬೆಂಬಲಿಗರು ಕೆಲವೆಡೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್ ಹೆಗ್ಡೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ಕ್ಷೇತ್ರದಲ್ಲಿ ಸಾವಿರಾರು ಜನ ಯುವಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಕೆಲ ದಿನಗಳ ಹಿಂದೆ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯುವಕರ ಗುಂಪು ಕಾಂಗ್ರೆಸ್ ಸೇರಿದ್ದು, ಯುವಕ ಸಂಪತ್ ಎಂಬುವರಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಸುರೇಶ್ ಜಟಿಕೇಶ್ವರ ಹಾಗು ಗ್ರಾಮ ಪಂಚಾಯಿತಿ ಉದ್ಯೋಗಿ ದಿನೇಶ್ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂಪತ್ ತಂದೆ ತಾಯಿಗೆ ಕೆಟ್ಟಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಇದರ ಬಗ್ಗೆ ಸಂಪತ್ ಆಡಿಯೋ ಇರುವ ಸಿಡಿಯೊಂದಿಗೆ ಶೃಂಗೇರಿ ಠಾಣೆಗೆ ದೂರು ನೀಡಿದ್ದರೂ ಪೊಲೀಸ್ ಇಲಾಖೆ ಇನ್ನೂ ಕ್ರಮಕೈಗೊಂಡಿಲ್ಲ. ಪೊಲೀಸ್ ಇಲಾಖೆ ಕೂಡಲೇ ಅವರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗು ದೂರು ಕೊಟ್ಟಿರುವ ಸಂಪತ್ ಮನೆಗೆ ರಕ್ಷಣೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ; ಶೃಂಗೇರಿ ಕ್ಷೇತ್ರದಲ್ಲಿ ತಂದೆಯ ಪರ ಪ್ರಚಾರಕ್ಕಿಳಿದ ಅಭ್ಯರ್ಥಿಗಳ ಮಕ್ಕಳು

ಮಾಜಿ ಶಾಸಕ ಜೇವರಾಜ್ ರವರ ಬೆಂಬಲಿಗರು ಮಲೆನಾಡಿನಲ್ಲಿ ಈ ರೀತಿ ಕೊಲೆ ಬೆದರಿಕೆಗಳನ್ನು ಹಾಕಿ ಶೃಂಗೇರಿಯಲ್ಲಿ ಭಯದ ವಾತಾವರಣ ಸೃಷ್ಟಿಮಾಡಲು ಹೊರಟಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದಶಿ ಪ್ರದೀಪ್ ಕಲ್ಲೊಳ್ಳಿ ಮಾತನಾಡಿ ದಿನೇಶ್ ಎಂಬ ಸರ್ಕಾರೀ ಉದ್ಯೋಗಿ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದು ಕಾನೂನು ಬಾಹಿರ. ಚುನಾವಣಾ ಅಧಿಕಾರಿಗಳು ಈ ಕೂಡಲೇ ಅವರನ್ನು ಅಮಾನತ್ತು ಮಾಡಬೇಕು ಹಾಗು ಇದೇ ಸರಕಾರಿ ಉದ್ಯೋಗಿ ಕೊಲೆ ಬೆದರಿಕೆ ಹಾಕಿರುವುದರಿಂದ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮದ್ಯ ಪ್ರವೇಶಿಸಿ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ;  ಚಿಕ್ಕಮಗಳೂರು ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಾವು

ಕಾಂಗ್ರಸ್ ಯುವಘಟಕದ ನೂತನ್ ಕಲ್ಕುಳಿ ಮಾತನಾಡಿ ಬಿಜೆಪಿಯ ಭ್ರಷ್ಟಾಚಾರ ಹಾಗು ಹುಸಿ ದೇಶ ಭಕ್ತಿ ಇವುಗಳಿಂದ ಬೇಸತ್ತು ಸಿಡಿದೆದ್ದು ಹೊರಬಂದು ಕಾಂಗ್ರೆಸ್ ಸೇರುತ್ತಿರುವ ಯುವ ಸಮುದಾಯದೊಂದಿಗೆ ನಮ್ಮ ಇಡೀ ಕಾಂಗ್ರೆಸ್ ಕುಟುಂಬ ನಿಮ್ಮೊಂದಿಗೆ ಇರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಜ್ವಲ್ ಶೆಟ್ಟಿ ಹೊಳೆಕೊಪ್ಪ, ಅಭಿಲಾಷ್ ಹುಲ್ಗಾರ್ , ಮೇಧ ಮದನ್, ಮತ್ತಿತರು ಇದ್ದರು.

ಇದನ್ನೂ ಓದಿ; ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ

Most Popular

Recent Comments