ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬ ಹಾಡಿನ ತುಣುಕು ವೈರಲ್ ಆಗಿದೆ.
ಇದನ್ನೂ ಓದಿ; ತರೀಕೆರೆ: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು
ಅನೇಕರು ಈ ಹಾಡಿನ ತುಣಕನ್ನು ಇಟ್ಟುಕೊಂಡು ವಿಡಿಯೋಗಳನ್ನು ರಚಿಸುತ್ತಿದ್ದಾರೆ. ಆದರೆ, ಆ ಹಾಡಿನ ಮೂಲ ಯಾವುದು, ಯಾರು ಹಾಡಿದ್ದು, ಪೂರ್ಣ ಹಾಡು ಎಲ್ಲಿದೆ ಎಂಬುದರ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಈ ಹಾಡನ್ನು ಖ್ಯಾತ ಜಾನಪದ ಗಾಯಕ ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ ಹಾಡಿರುವುದು.
ಸೋಷಿಯಲ್ ಮೀಡಿಯಾ ಬಂದ ಮೇಲೆ ಮರೆತು ಹೋದ ವಿಚಾರವೆಲ್ಲಾ ವೈರಲ್ ಆಗುವುದಕ್ಕೆ ಶುರುವಾಗಿದೆ. ಅದರಲ್ಲೂ ರೀಲ್ಸ್ ಬಂದ ಮೇಲಂತು ಹಳೆಯ ಹಾಡುಗಳಿಗೆ ಹೊಸ ಜೀವವೆರ ಬಂದಂತೆ ಆಗಿದೆ. ಅದಕ್ಕೆ ಅಪ್ಪಟ ಉದಾಹರಣೆ ಎಂದರೆ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬ ಹಾಡು.
ಇತ್ತೀನ ಜನಪ್ರಿಯ ಸುದ್ದಿಗಳು
- ಕಾತಾಳೆ ಗೆಡ್ಡೆಗೆ ಬಣ್ಣ ಹಚ್ಚಿ ಭೂಚಕ್ರ ಗೆಡ್ಡೆ ಎಂದು ತಿನ್ನಿಸುತ್ತಿದ್ದಾರೆ ಹುಷಾರ್!
- ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ನೇರ ಪ್ರವೇಶ; ಮುಜರಾಯಿ ಇಲಾಖೆ ಮಹತ್ವದ ನಿರ್ಧಾರ
- ಅಪ್ರಾಪ್ತರಿಗೆ ಬೈಕ್ ಕೊಡೋ ಮುಂಚೆ ಎಚ್ಚರ
ಅಂದಹಾಗೆ ಇದು ಈಗ ವೈರಲ್ ಆದ ಅನ್ಯಾಯಕಾರಿ ಬ್ರಹ್ಮ ಹಾಡು ಹಾಡಿದ್ದು 1995 ರಲ್ಲಿ, ಅಂದರೆ 28 ವರ್ಷಗಳ ಹಿಂದೆ ಮಹದೇವಸ್ವಾಮಿಯವರು ಅಮೃತ ಘಳಿಗೆಯಲ್ಲಿ ಹಾಡಿದ ಹಾಡಿನ ಒಂದೇ ಒಂದು ತುಣುಕು ಝೆನ್ ಝಡ್ ತಲೆಮಾರಿನವರ ರೀಲ್ಸ್ ಗಳ ಫೆವರೇಟ್ ಆಗಿದೆ.
ಹಾಡಿನ ಹಿಂದಿನ ಕಥೆ:
ಜೋಗಿಯಾಗಿ ವೇಷ್ಯೆಯರು ಇರುವ ಸ್ಥಳಕ್ಕೆ ಅರ್ಜುನ ಬಂದಾಗ ಸುಂದರ ಸನ್ಯಾಸಿಯಾಗಿದ್ದಾನೆ ಎಂದು ವೇಷ್ಯೆಯರು ಮರುಗಿದ್ದರು. ಅರ್ಜುನನ ಸೌಂದರ್ಯಕ್ಕೆ ಮನಸೋತು ಸುಂದರನ ಸನ್ಯಾಸಿಯಾಗಲು ಆ ಬ್ರಹ್ಮನೇ ಕಾರಣ ಎಂದು ದೂರುತ್ತಾರೆ ವೇಷ್ಯೆಯರು. ವೇಷ್ಯೆಯರು ಅರ್ಜುನನ್ನು ನೋಡಿ ಹೇಳಿದ ಸಾಲುಗಳೇ ಈಗ ವೈರಲ್ ಆಗಿರುವ ತುಣುಕಿನ ಸಾಹಿತ್ಯ.
ಇದನ್ನೂ ಓದಿ; ಚಿಕ್ಕಮಗಳೂರು: ಯೋಜನೆಗಳನ್ನು ಘೋಷಿಸುವಾಗ ತಲೆಯಲ್ಲಿ ಮೆದುಳು ಇರಲಿಲ್ಲಾ, ಆವಾಗ ಸಗಣಿ ತುಂಬಿತ್ತಾ?-ಶೋಭಾ ಕರಂದ್ಲಾಜೆ ಆಕ್ರೋಶ
ಈ ಹಾಡು ವೈರಲ್ ಆದ ನಂತರ ಮಹದೇವಸ್ವಾಮಿ ಏನಂತಾರೆ?:
ವೈರಲ್ ಆಗಿರುವ ಸಾಂಗ್ ಅನ್ನು ಈಗ ಕೇಳಿದ್ರೆ ಖುಷಿಯಾಗುತ್ತಿದೆ. ನನ್ನ ತಾಯಿ ಹೇಳಿಕೊಟ್ಟ ಹಾಡನ್ನ ಲಕ್ಷಾಂತರ ಜನರು ಕೇಳ್ತಿದ್ದಾರೆ. ಇದು ನನ್ನ ಸೌಭಾಗ್ಯ ಏಕೆಂದರೆ ಇಂದಿನ ಕಾಲದಲ್ಲಿ ವಯಸ್ಸಿನ ಗಂಡುಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಸರ್ಕಾರಿ ನೌಕರಿ ಇದ್ದವರಿಗೆ ಮಾತ್ರ ಹೆಣ್ಣು ಕೊಡುತ್ತಿದ್ಧಾರೆ. ಮದುವೆಯಾಗಲು ಹುಡುಗಿ ಸಿಗದೆ ನಡಂತರದಲ್ಲಿ ಹುಡುಗರು ಸಾಯ್ತಿದ್ದಾರೆ ಎಂದು ಬೇಸರಿಸಿದ್ದಾರೆ.
ಈ ಸಾಂಗನ್ನು ಯಾರೋ ಬರೆದಿರುವುದಲ್ಲ. ಇದು ಜಾನಪದ ಹಾಡಾಗಿದ್ದು, ನನ್ನ ತಾಯಿ, ಗುರುಗಳ ಬಾಯಿಂದ ಕೇಳಿ ನಾನು ಹಾಡಿದ್ದೇನೆ. ದೇಶ, ವಿದೇಶಗಳ ಜನರು ಈ ಹಾಡಿಗೆ ನೃತ್ಯ ಮಾಡಿ ಸಂತಸ ಪಡ್ತಿದ್ದಾರೆ. ಮದುವೆ ಆಗದವರು, ಹೆಣ್ಣು ಸಿಗದ ಗಂಡು ಮಕ್ಕಳಿಗೆ ಹಾಡು ಬಳಸಿ ತಮಾಷೆ ಮಾಡ್ತಿದ್ದಾರೆ. ಹಾಡು ವೈರಲ್ ಆದ ಬಳಿಕ ಸಿನೆಮಾ ಮಾಡೋದಾಗಿ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ.
ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ | Anyayakari Bramha E Sundarana Sanyasi Madabahude pic.twitter.com/CUugm7CSCe
— News Malnad (@NewsMalnadMedia) June 22, 2023
ಮಹದೇಶ್ವರನ ಕೃಪೆಯಿಂದ ನಾನು ಹಾಡಿದ ಹಾಡು ಫೇಮಸ್ ಆಗ್ತಿದೆ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ಗೀತೆ ವೈರಲ್ ಆದ ಕುರಿತು ಜಾನಪದ ಗಾಯಕ ಡಾ.ಎಂ.ಮಹದೇವಸ್ವಾಮಿ ಸಂತಸ ವ್ಯಕ್ತಪಡಿಸಿದ ರೀತಿ.