ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ಶಾಲೆಯ ಸಮಸ್ಯೆ ಹೇಳಿಕೊಳ್ಳಲು ಪಾನಮತ್ತರಾಗಿ ಬಂದಿದ್ದ ಪ್ರಾಂಶುಪಾಲರನ್ನು ಶಾಸಕ ಟಿ.ಡಿ.ರಾಜೇಗೌಡ ತರಾಟೆಗೆ ತೆಗೆದುಕೊಂಡಿರುವ ಘಟನೆ ಶನಿವಾರ ಸಿಂಸೆಯಲ್ಲಿ ನಡೆದಿದೆ.
ಇದನ್ನೂ ಓದಿ; ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ; ಐವರು MBBS ವಿದ್ಯಾರ್ಥಿಗಳು ಅರೆಸ್ಟ್
ಕಿತ್ತೂರು ರಾಣಿ ವಸತಿ ಶಾಲೆಯ ಸಮೀಪ ಇರುವ ಚಿಕ್ಕ ಅಗ್ರಹಾರ ವಲಯ ಅರಣ್ಯದ ಸಿಂಸೆ ನರ್ಸರಿಯಲ್ಲಿ ಫಲಾನುಭವಿಗಳಿಗೆ ಗಿಡ ವಿತರಿಸಲು ಶಾಸಕರು ಬಂದಿದ್ದರು. ಈ ವೇಳೆ ಸಿಂಸೆ ಗ್ರಾಮದ ಕಿತ್ತೂರು ರಾಣಿ ವಸತಿ ಶಾಲೆ ಪ್ರಾಂಶುಪಾಲ ಲೋಕನಾಯ್ಕ ಶಾಲೆಯ ಸಮಸ್ಯೆಗಳ ಬಗ್ಗೆ ಮನವಿ ನೀಡಲು ಬಂದಿದ್ದಾಗ, ಮದ್ಯಪಾನ ಮಾಡಿಕೊಂಡು ಬಂದಿರುವುದು ಗೊತ್ತಾಗಿದ್ದು, ಶಾಸಕರು ಅವರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ; ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್
ಹೆಣ್ಣು ಮಕ್ಕಳಿರುವ ವಸತಿ ಶಾಲೆಯಲ್ಲಿ ಕೆಲಸ ಮಾಡತ್ತಿರುವ ನೀವೇ ಪಾನಮತ್ತರಾಗಿ ಬಂದರೆ ಅವರಿಗೆ ರಕ್ಷಣೆ ಕೊಡುವವರು ಯಾರು ಎಂದು ಪ್ರಶ್ನಿಸಿದರು. ಪೊಲೀಸರನ್ನು ಕರೆಸಿದ ಶಾಸಕರು, ಮದ್ಯಪಾನ ಮಾಡಿರುವ ಬಗ್ಗೆ ಬೀಥಿಂಗ್ ಅಲ್ಕೋಹಾಲ್ ಅನಲೈಸರ್ ಮೂಲಕ ತಪಾಸಣೆ ನಡೆಸಲು ಸೂಚಿಸಿದರು. ಮದ್ಯಪಾನ ಮಾಡಿರುವುದು ದೃಢವಾದ ಬಳಿಕ ಅಂಬುಲೆನ್ಸ್ ಕರೆಸಿ ಅಸ್ಪತ್ರೆಗೆ ಕಳುಹಿಸಿದರು. ವೈದ್ಯಕೀಯ ವರದಿ ಪಡೆದು ಅವರನ್ನು ಅಮಾನತು ಮಾಡುವಂತೆ ಚೈತ್ರಾ ಅವರಿಗೆ ದೂರವಾಣಿ ಮೂಲಕ ತಿಳಿಸಿದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮೂಡಿಗೆರೆ: ಸರ್ಕಾರಿ ಬಸ್ ಗೆ ಅಡ್ಡ ಬಂದ ಒಂಟಿ ಸಲಗ
- ಚಿಕ್ಕಮಗಳೂರು: ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಲವ್ ಅಟ್ ಬ್ಯಾಕ್ ಸೈಟ್ : ಆರ್.ಅಶೋಕ್
- ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಸಚಿನ್ ಬೇಂಬೊರೆ ನೇಮಕ
ಈ ಕುರಿತು ಪ್ರತಿಕ್ರಿಯಿಸಿದ ಚೈತ್ರಾ, ಶಾಸಕರು ಬಂದಿದ್ದ ಕಾರ್ಯಕ್ರಮವೊಂದಕ್ಕೆ ಇವರು ಪಾನಮತ್ತರಾಗಿ ಹೋಗಿದ್ದರು ಎಂಬ ಮಾಹಿತಿ ಇದೆ. ಶಾಸಕರು ಕೂಡ ದೂರವಾಣಿ ಮೂಲಕ ತಿಳಿಸಿದ್ದಾರೆ. ಮೂರು ದಿನಗಳಿಂದ ರಜೆಯಲ್ಲಿದ್ದು, ಸೋಮವಾರ ಪರಿಶೀಲನೆ ನಡೆಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ; ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಶೃಂಗೇರಿಯ ಯುವಕ
70ನೇ ವಸಂತಕ್ಕೆ ಕಾಲಿಟ್ಟ ದತ್ತಮೇಷ್ಟ್ರು, ಕಳೆದ ರಾತ್ರಿ ದತ್ತ ಮನೆಯಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದರು. ಪಾತೇನಹಳ್ಳಿಯಲ್ಲಿ ಡಿಜೆ ಸೌಂಡ್ ಗೆ ಮನಸ್ಸೋ ಇಚ್ಛೆ ಕುಣಿದ ಅಭಿಮಾನಿಗಳ ಜೊತೆ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಇನ್ನು ದತ್ತ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳಿಂದ ಅನ್ನಸಂತರ್ಪಣೆ ಕೂಡ ಮಾಡಲಾಗಿತ್ತು.