ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ವಾಹನವೊಂದರಲ್ಲಿ ಬಂದ ಅಪರಿಚಿತನೊಬ್ಬ 3000ರೂ. ಗಳ ಪೆಟ್ರೋಲ್ ಹಾಕಿಸಿ ಹಣ ಕೊಡದೆ ಪರಾರಿಯಾದ ಘಟನೆ ನಿನ್ನೆ ರಾತ್ರಿ ಸುಮಾರು 10.15ರ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ; ಗಮನಿಸಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೀಗಿದೆ 07-07-2023
ಶೃಂಗೇರಿಯ ಮೆಣಸೆ ಸೇತುವೆ ಸಮೀಪದ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ರಿಜಿಸ್ಟ್ರಾರ್ ನಂಬರ್ ಇಲ್ಲದ ಸ್ವಿಫ್ಟ್ ವಾಹನದಲ್ಲಿ ಬಂದ ಅಪರಿಚಿತರು 3000 ರೂ. ಗಳ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುತ್ತಿದ್ದಂತೆಯೇ ವಂಚಕರು ಹಣ ಕೊಡದೆ ಕಾರ್ ತೆಗದುಕೊಂಡು ಪರಾರಿಯಾಗಿದ್ದಾರೆ. ಇನ್ನು ಇದೇ ಗ್ಯಾಂಗ್ ಶೃಂಗೇರಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲೂ 500ರೂ. ಪೆಟ್ರೋಲ್ ಹಾಕಿಸಿ ಪರಾರಿಯಾಗಿದ್ದಾರಂತೆ. (ಮುಂದಕ್ಕೆ ಓದಿ)
ಪೆಟ್ರೋಲ್ ಹಾಕಿಸಿ ಹಣ ಕೊಡದೆ ಪರಾರಿಯಾದ ನಂಬರ್ ಪ್ಲೇಟ್ ಇಲ್ಲದ ಸ್ವಫ್ಟ್ ಕಾರು#Sringeri #Chikkamagaluru pic.twitter.com/tvVvjmiCzK
— News Malnad (@NewsMalnadMedia) July 8, 2023
ತನಿಕೋಡು ಚೆಕ್ ಪೊಸ್ಟ್ ನಿಂದ ವಾಪಾಸು:
ಇನ್ನು ಇದೇ ವಾಹನ ಮಂಗಳೂರು ಮಾರ್ಗದಲ್ಲಿ ತೆರಳಿದ್ದು ತನಿಕೋಡು ಚೆಕ್ ಪೋಸ್ಟ್ ಬಳಿ ಸಾಗಿದೆ ಸಂದರ್ಭದಲ್ಲಿ ಚೆಕ್ ಪೊಸ್ಟ್ ಸಿಬ್ಬಂದಿ ಪಾಸ್ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ ಆದರೆ, ಪಾಸ್ ತೆಗೆದುಕೊಳ್ಳದೆ ಅಲ್ಲಿಂದಲೇ ಕಾರ್ ಹಿಂದುರುಗಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪಾಸ್ ತೆಗೆದುಕೊಳ್ಳದೆ ವಾಹನ ಅಲ್ಲಿಂದಲೇ ವಾಪಾಸು ಬಂದಿರುವುದು ಯಾಕೆ ಎನ್ನುವ ಅನುಮಾನ ದಟ್ಟವಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮಾರುಕಟ್ಟೆಯಲ್ಲಿ ಇಂದು ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ? 07.07.2023
- ಮೂಡಿಗೆರೆ: ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ
- ಸಿದ್ದು ಲೆಕ್ಕ – ಬಜೆಟ್ ನ ಎಲ್ಲಾ ಪ್ರಮುಖ ಅಂಶಗಳನ್ನು ಸಿಂಪಲ್ಲಾಗಿ ಓದಿ
ಸ್ವಿಫ್ಟ್ ವಾಹನದಲ್ಲಿ ಗೋವುಗಳ ಸಾಗಣೆ:
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಗಡಿ ಭಾಗವಾದ ತೀರ್ಥಹಳ್ಳಿ ತಾಲೂಕಿನ ಬಿದರಗೋಡಿ ಸಮೀಪದ ಹೊಸಗದ್ದೆಯಲ್ಲಿ ನಿನ್ನೆ ತಡರಾತ್ರಿಯಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ವಾಹನದಲ್ಲಿ ಗೋವುಗಳನ್ನು ಕದ್ದು ಸಾಗಿಸಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ. ಚೆಕ್ ಪೊಸ್ಟ್ ನ ಅಧಿಕಾರಿಗಳು ತಡರಾತ್ರಿ ಸರಿಯಾಗಿ ತಪಾಸಣೆ ನಡೆಸಿದ್ದರೆ ನಿಖರವಾದ ಮಾಹಿತಿ ತಿಳಿಯುತ್ತಿತ್ತು. ಆದರೆ ಚೆಕ್ ಪೋಸ್ಟ್ ನಲ್ಲಿ ಸರಿಯಾದ ತಪಾಸಣೆ ನೆಡೆಸುತ್ತಿಲ್ಲ ಎಂದು ಶೃಂಗೇರಿ ತಾಲ್ಲೂಕು ಬಜರಂಗದಳ ಆರೋಪಿಸಿದೆ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ; ಚಿಕ್ಕಮಗಳೂರು: ಪತಿಯ ಪ್ರಿಯತಮೆಯಿಂದಲೇ ನಡೀತಾ ಪತ್ನಿಯ ಭೀಕರ ಕೂಲೆ?
ಮೂಡಿಗೆರೆ: ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಡ್ರೈವರ್ ಗಳ ಕಾಲಿಗೆ ತೀವ್ರ ಗಾಯ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಸರ್ಕಾರಿ ಬಸ್ಸುಗಳ ನಡೆವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ ಗಳ ಡ್ರೈವರ್ ಗಳ ಕಾಲಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಈ ಅಪಘಾತಕ್ಕೆ ರಸ್ತೆ ಕಾಮಾಗಾರಿಯೇ ಕಾರಣ ಎಂದು ಹೇಳಲಾಗಿದೆ. 2019 ರಲ್ಲಿ ಕುಸಿದಿದ್ದ ಕಾಮಗಾರಿ ಇನ್ನೂ ಮುಗಿಯದೇ ಇರದ ಕಾರಣ ಈ ಅಪಘಾತ ಸಂಭವಿಸಿದ್ದು, ಚಾರ್ಮಾಡಿಯಲ್ಲಿ ರಸ್ತೆ ಕಾಮಗಾರಿಯನ್ನ ಕೂಡಲೇ ಮುಗಿಸುವಂತೆ ಆಗ್ರಹಿಸಲಾಗಿದೆ. ಹಾಗೂ ಚಾರ್ಮಾಡಿ ಘಾಟಿಯ ಮಂಜು ಕೂಡ ಕಾರಣ ಎನ್ನಲಾಗಿದೆ. ಚಾರ್ಮಾಡಿಯಲ್ಲಿ ಕವಿದಿರೋ ಭಾರೀ ಪ್ರಮಾಣದ ಮಂಜು ಅಡಿ ದೂರದಲ್ಲಿ ಇರುವವರು ಕಾಣದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಅಪಘಾತದಿಂದ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಘಾಟಿಯಲ್ಲಿ ಸಿಲುಕಿ ವಾಹನ ಸವಾರರ ಪರದಾಡುವಂತೆ ಆಗಿದೆ. ಇನ್ನು ಕೆಲ ಪ್ರಯಾಣಿಕರು 10 ಕಿ.ಮೀ. ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ.