ಮೂಡಿಗೆರೆ/ಸಕಲೇಶಪುರ: (ನ್ಯೂಸ್ ಮಲ್ನಾಡ್ ವರದಿ) ದನಕ್ಕೆ ಗುಂಡು ಹೊಡೆದ ಪ್ರಕರಣವನ್ನು ವಿರೋಧಿಸಿ ಪ್ರತಿಭಟನೆ ಒಂದರಲ್ಲಿ ಆಕ್ರೋಶ ಭಾಷಣ ಮಾಡಿದ್ದಾರೆ ಎಂದು ರಘು ಸಕಲೇಶಪುರ ಸೇರಿದಂತೆ ಮೂರು ಜನರ ವಿರುದ್ಧ ಕೇಸು ದಾಖಲು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೊ ಕಳ್ಳತನ
ಇದನ್ನೂ ಓದಿ; ಕಳಸ; ಗ್ಯಾಸ್ ಸಿಲಿಂಡರ್ ಸೋರಿಕೆ; ಮನೆಗೆ ಹಾನಿ
ನಮ್ಮ ಮನೆಯ ಬಳಿ ಜಿಹಾದಿಗಳು ಬಂದ್ರೆ ನಮ್ಮ ಮನೆಯಲ್ಲಿರುವ ಕೋವಿಗಳು ಹೊರಗೆ ಬರುತ್ತವೆ’ ಹೀಗೆಂದು ಸಕಲೇಶಪುರದ ಹಿಂದೂಪರ ಸಂಘಟನೆ ಮುಖಂಡ ರಘು ಸಕಲೇಶಪುರ ಹೇಳಿಕೆ ನೀಡಿದ್ದರು. ಜೂನ್ 27ರಂದು ನಡೆದ ಪ್ರತಿಭಟನೆ ಒಂದನ್ನು ಉದ್ದೇಶಿಸಿ ಮಾತನಾಡಿದ ರಘು ’ನಾವು ಗುಂಡನ್ನ ಹಾರಿಸೇ ಹಾರಿಸ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದರು. ಈ ಸಂಬಂಧ ಮೂರು ಜನರ ವಿರುದ್ಧ ಕೇಸು ದಾಖಲು ಮಾಡಲಾಗಿತ್ತು. ಇದೀಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಖಾತೆಗೆ ಹಣ ಜಮಾ; ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಅಂದ್ರೆ ಸಿಗಲ್ಲ ಈ ಆಫರ್
- arecanut price: 12 ಜುಲೈ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
- ಕಳಸ: ರಸ್ತೆ ಇಲ್ಲದೆ ರೋಗಿಯನ್ನ ಜೋಳಿಗೆಯಲ್ಲಿ ಹೊತ್ತು ತಂದ ಜನ
ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೊ ಕಳ್ಳತನ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಟೊಮೆಟೊ ಹಣ್ಣಿನ ದರ ಹೆಚ್ಚಳವಾದ ಬೆನ್ನಲ್ಲೇ ನಗರದ ತರಕಾರಿ ಅಂಗಡಿಯೊಂದರಿಂದ ಟೊಮೆಟೊ ಕಳವಾದ ಬಗ್ಗೆ ದೂರು ದಾಖಲಾಗಿದೆ. ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮಾಟೋ ಇದ್ದ ಎರಡು ಟ್ರೇ ಕಳ್ಳತನವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮೆಟೊ ಕಳ್ಳತನವಾಗಿದೆ.
ಇದನ್ನೂ ಓದಿ; ಶೃಂಗೇರಿ; ಕಿಗ್ಗಾ ನಾಡಕಚೇರಿಯನ್ನು ಶೃಂಗೇರಿಗೆ ವರ್ಗಾಯಿಸುವಂತೆ ಒತ್ತಾಯ
ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನ ಅಂಗಡಿಯಲ್ಲಿ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟೊಮೆಟೊ ಇರಲಿಲ್ಲ. ಆಗ ಅಂಗಡಿಯ ಟಾರ್ಪಲ್ ಸರಿಸಿರುವುದು ಬೆಳಕಿಗೆ ಬಂದಿದೆ. ನದೀಂ ಟೊಮೆಟೊ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.