Monday, December 11, 2023
Homeಮಲೆನಾಡುಚಿಕ್ಕಮಗಳೂರುಎನ್.ಆರ್.ಪುರ/ಕೊಪ್ಪ; ರಸ್ತೆಗೆ ಅಡ್ಡ ಬಂದ ಜಿಂಕೆಯನ್ನು ತಪ್ಪಿಸಲು ಹೋಗಿ ಗುಂಡಿಗೆ ಬಿದ್ದ ಕಾರು

ಎನ್.ಆರ್.ಪುರ/ಕೊಪ್ಪ; ರಸ್ತೆಗೆ ಅಡ್ಡ ಬಂದ ಜಿಂಕೆಯನ್ನು ತಪ್ಪಿಸಲು ಹೋಗಿ ಗುಂಡಿಗೆ ಬಿದ್ದ ಕಾರು

ಎನ್.ಆರ್.ಪುರ/ಕೊಪ್ಪ; (ನ್ಯೂಸ್ ಮಲ್ನಾಡ್ ವರದಿ) ರಸ್ತೆಗೆ ಅಡ್ಡ ಬಂದ ಜಿಂಕೆಯನ್ನು ತಪ್ಪಿಸಲು ಹೋಗಿ ಕಾರು ಗುಂಡಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೇಡಿಗಾರು ಸಮೀಪದಲ್ಲಿ ನಡೆದಿದೆ.

ಇದನ್ನೂ ಓದಿ; ನರಸಿಂಹರಾಜಪುರ: ಶಾಲೆಯ ಸಮಸ್ಯೆ ಹೇಳಿಕೊಳ್ಳಲು ಪಾನಮತ್ತರಾಗಿ ಬಂದಿದ್ದ ಪ್ರಾಂಶುಪಾಲ; ಶಾಸಕ ಟಿ.ಡಿ ರಾಜೇಗೌಡ ತರಾಟೆ

ನರಸಿಂಹರಾಜಪುರ-ಕೊಪ್ಪ ರಸ್ತೆಯಲ್ಲಿ ಬರುವ ಶೇಡಿಗಾರು ಸಮೀಪದಲ್ಲಿ ಈ ಅಪಘಾತ ನಡೆದಿದೆ. ರಸ್ತೆಗೆ ಅಡ್ಡ ಬಂದ ಜಿಂಕೆಯನ್ನ ತಪ್ಪಿಸಲು ಹೋಗಿ ಐ20 ಕಾರು ಗುಂಡಿಗೆ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದ್ದು, ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಲಾರಿ ನಡುವೆ ಅಪಘಾತ; ಬಸ್ ಪಲ್ಟಿ, ಪ್ರಾಣಾಪಾಯದಿಂದ ಪಾರು

ಮೂಡಿಗೆರೆ; ವೀಕ್ಷಣೆ ಹುಚ್ಚಾಟಕ್ಕಲ್ಲ, “ಸೆಲ್ಫಿ ನಿಲ್ಲಿಸಿ ಪರಿಸರ ವೀಕ್ಷಿಸಿ”

ಮೂಡಿಗೆರೆ; (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆ ಕಾಲಿಡುತ್ತಿದ್ದಂತೆ ನಿಸರ್ಗ ಸೌಂದರ್ಯ ಅನಾವರಣಗೊಳ್ಳುತ್ತದೆ. ಮಳೆಗಾಲದಲ್ಲಿ ಈ ಘಾಟಿಯ ಸೌಂದರ್ಯ ವರ್ಣಿಸಲು ಅಸಾಧ್ಯ. ಅಲ್ಲಲ್ಲಿ ಚಿಕ್ಕ-ಚಿಕ್ಕ ತೊರೆಗಳು, ಕಲ್ಲುಗಳ ಮೇಲಿಂದ ಧುಮ್ಮಿಕ್ಕುವ ನೀರು, ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹತ್ತಿದಂತೆ ತೀವ್ರಗೊಳ್ಳುವ ಮಂಜು, ಸುರಿಯುವ ಮಳೆ, ಕಡಿದಾದ ತಿರುವುಗಳು, ರಸ್ತೆ ಬದಿಯ ಆಳವಾದ ಕಮರಿಗಳು, ಸುತ್ತಲ ಪ್ರಕೃತಿ ಸೌಂದರ್ಯ, ಹಾದಿಯಲ್ಲಿ ಸಿಗುವ ಪಕ್ಷಿ, ಪ್ರಾಣಿಗಳು ಇವನ್ನೆಲ್ಲ ನೋಡುತ್ತಾ ಸಾಗುವಾಗ ದಾರಿ ಕ್ರಮಿಸಿದ್ದೆ? ತಿಳಿಯುವುದಿಲ್ಲ.

ಇದನ್ನೂ ಓದಿ; ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ; ಐವರು mbbs ವಿದ್ಯಾರ್ಥಿಗಳು ಅರೆಸ್ಟ್‌

ಇನ್ನೇನೂ ಮಳೆಗಾಲ ಕಾಲಿಡುವ ಲಕ್ಷಣಗಳು ಕಂಡುಬಂದಿದ್ದು, ಈ ಸಮಯದಲ್ಲಿ ಘಾಟಿ ಪರಿಸರ ವೀಕ್ಷಣೆ  ನೆಪದಲ್ಲಿ ಅನೇಕ ಮಂದಿ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದರ ಜೊತೆಗೆ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಾರೆ. ಈ ನಿಟ್ಟಿನಲ್ಲಿ ಫ್ರೆಂಡ್ಸ್ ಕ್ಲಬ್ ಬಣಕಲ್ ಇವರ ವತಿಯಿಂದ ‘ಘಾಟಿ ಪರಿಸರದಲ್ಲಿ ವೀಕ್ಷಣೆ ಹುಚ್ಚಾಟಕ್ಕಲ್ಲ, ಸೆಲ್ಫಿ ನಿಲ್ಲಿಸಿ ಪರಿಸರ ವೀಕ್ಷಿಸಿ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.

ಇದನ್ನೂ ಓದಿ; ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್

ಘಾಟಿಯ ಪರಿಸರದ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ, ನೋ ಪಾರ್ಕಿಂಗ್, ಅಪಾಯಕಾರಿ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಜಾರುವ ಬಂಡೆಗಳನ್ನು ಏರಿ ಸೆಲ್ಫಿ ತೆಗೆದುಕೊಳ್ಳುವ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಯಿತು. ಘಾಟಿ ಪರಿಸರದಲ್ಲಿ ವಾರಾಂತ್ಯದಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವಂತೆ ಆಗ್ರಹಿಸಿದ್ದು, ಒಂದು ವೇಳೆ ಘಾಟಿ ಪರಿಸರದಲ್ಲಿ ಪ್ರವಾಸಿಗರಿಂದ ಇಂತಹ ಸಮಸ್ಯೆಗಳು ಹೆಚ್ಚಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಒದಗಿ ಬರುವ ಕುರಿತು ಎಚ್ಚರಿಸಲಾಯಿತು. ಹಾಗೂ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಗಳು, ತಿನ್ನಲು ಕಟ್ಟಿಕೊಂಡು ಬಂದಂತಹ ಆಹಾರ ಪದಾರ್ಥಗಳು ಅಲ್ಲಲ್ಲಿ ಬಿಸಾಕಬಾರದು ಎಂಬ ಜಾಗೃತಿ ಮೂಡಿಸಲಾಯಿತು.

ಇನ್ನು ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷ ಪ್ರವೀಣ್ ಗೌಡ, ಮಧುಕುಮಾರ್, ರಶೀದ್ ಬಣಕಲ್, ಸೂರಿ, ಕಿರಣ್ ಗೌಡ, ಅರುಣ್ ಪೂಜಾರಿ, ಗಗನ್, ಅರುಣ್ ವೆಲೇರಿಯನ್, ಪ್ರಸಾದ್ ಆಚಾರ್ಯ ಹಾಗೂ ಇತರರು ಇದ್ದರು.

Most Popular

Recent Comments