ಜಮ್ಮು-ಕಾಶ್ಮೀರ : ಕಾಶ್ಮೀರದಲ್ಲಿ ಉಗ್ರರಿಗೆ ಸಹಾಯ ಮಾಡುತ್ತಿದ್ದ 900 ಗಿಂತಲೂ ಹೆಚ್ಚಿನ ಮತಾಂಧ ನಾಗರಿಕರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಗ್ರರಮೇಲೆ ಸಹಾನುಭೂತಿಯನ್ನು ತೋರಿಸಿ ಅವರಿಗೆ ಉಳಿದುಕೊಳ್ಳಲು ಮನೆಯ ವ್ಯವಸ್ಥೆಯನ್ನು ಮಾಡಿಕೊಡುವುದು ಹಾಗೂ ಮಾಹಿತಿಯನ್ನು ಸೋರಿಕೆಮಾಡುವಂತಹ ಕೆಟ್ಟ ಕೆಲಸವನ್ನು ಮಾಡುತ್ತಿದ್ದ 900ಕ್ಕೂ ಹೆಚ್ಚು ನಾಗರಿಕರನ್ನು ವಶಪಡಿಸಿಕೊಡಿದ್ದಾರೆ.
900 ನಾಗರಿಕರಲ್ಲಿ ಹೆಚ್ಚು ಮಂದಿ ನಿಷೇಧಿತ “ಜಮಾತೆ ಇಸ್ಲಾಮಿ” ಉಗ್ರ ಸಂಘಟನೆಯೊಡನೆ ಕೈಜೋಡಿಸಿರುವುದನ್ನು ತಿಳಿದು ಬಂಧಿಸಲಾಗಿದೆ.
ಕಾಶ್ಮೀರದಲ್ಲಿ ಉಗ್ರವಾದ ನಾಶವಾಗದಿರಲು ಅಲ್ಲಿಯ ಮತಾಂಧ ಮತ್ತು ದೇಶದ್ರೋಹಿ ನಾಗರಿಕರಿಂದ ಉಗ್ರರಿಗೆ ಸಿಗುತ್ತಿರುವ ತೆರೆಮರೆಯ ಬೆಂಬಲವೇ ಕಾರಣವಾಗಿದೆ. ಆದ್ದರಿಂದ ಇಂತಹವರನ್ನು ಸಹ ಉಗ್ರರೆಂದು ಪರಿಗಣಿಸಿ ಅವರಿಗೂ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.