Saturday, June 10, 2023
Homeಸುದ್ದಿಗಳುದೇಶದೇವಾಲಯಗಳನ್ನು, ಧಾರ್ಮಿಕ ಕೇಂದ್ರಗಳನ್ನು ಕೆಡುವುದು ಬಿಜೆಪಿಯ ಸಂಸ್ಕೃತಿ - ಯು ಟಿ ಖಾದರ್

ದೇವಾಲಯಗಳನ್ನು, ಧಾರ್ಮಿಕ ಕೇಂದ್ರಗಳನ್ನು ಕೆಡುವುದು ಬಿಜೆಪಿಯ ಸಂಸ್ಕೃತಿ – ಯು ಟಿ ಖಾದರ್

ಮಂಗಳೂರು: ಬಿಜೆಪಿಯವರು ಸಮಾಜ ಹಾಗೂ ಜನರ ಭಾವನೆಯನ್ನು ಕೆಡವುತ್ತಿದ್ದಾರೆ ಹಾಗೂ ಇಂದು ಧಾರ್ಮಿಕ ಕೇಂದ್ರಗಳನ್ನು ಕೆಡುವುದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಿಜೆಪಿಯ ವಿರುದ್ದ ಯು.ಟಿ ಖಾದರ್ ಆರೋಪ ಮಾಡಿದ್ದಾರೆ.

ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವನ್ನು ಕೆಡವಿದ ವಿಚಾರಕ್ಕೆ ಸಂಬoಧಿಸಿದoತೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆಯನ್ನು ನೀಡಿದ್ದು, ಬಿಜೆಪಿ ಪಕ್ಷದ ಸಂಸ್ಕೃತಿಯೇ ಕೆಡುವುದು. ಇವರು ಕೆಡುವುದರಲ್ಲಿ ನಿಸ್ಸೀಮರಾಗಿರುವುದರಿಂದ ಸಮಾಜ ಹಾಗೂ ಜನರ ಭಾವನೆಯನ್ನು ಕೆಡವುತ್ತಿದ್ದಾರೆ. ಇದೀಗಾ ಧಾರ್ಮಿಕ ಕೇಂದ್ರಗಳನ್ನು ಕೆಡುವುದರಲ್ಲಿ ತೊಡಗಿಕೊಂಡಿದ್ದಾರೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥವನ್ನು ಇವರು ಹೊಂದಿಲ್ಲ ಎಂದಿದ್ದಾರೆ.

ವಿದೇಶಿಯರು ದೇವಾಲಯ ಮಸೀದಿ ಕೆಡವಿದ್ದನ್ನು ಇತಿಹಾಸದಲ್ಲಿ ಓದಿದ್ದೆ. ಆದರೆ ಇದೀಗಾ ಬಿಜೆಪಿ ಈ ಕಾರ್ಯದಲ್ಲಿ ತೊಡಗಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ದೇವಾಲಯ ಮಂದಿರ ಧ್ವಂಸ ಆಗಬಾರದು. ಇಲ್ಲಿ ಬಿಜೆಪಿಗರು ಬಾಲಿಷ ಹೇಳಿಕೆ ನೀಡ್ತಾ ಇದ್ದಾರೆ. ಇವರಿಗೆ ಅಧಿಕಾರಿಗಳು ಮಾಡುವ ಆದೇಶ ಗೊತ್ತಿಲ್ಲ ಎಂದಿದ್ದಾರೆ.

ಆದರೆ, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Most Popular

Recent Comments