ಬಂಟ್ವಾಳ: ಹಿಂದೂ ದೇವಾಲಯದ ಒಳಗೆ ಚಪ್ಪಲಿಯನ್ನು ಧರಿಸಿ ಪ್ರವೇಶಿಸಿದ ನಾಲ್ವರು ಮುಸ್ಲಿಂ ಆರೋಪಿಗಳನ್ನು ಬಂಧಿಸಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ನಗರದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಆರೋಪಿಗಳು ಚಪ್ಪಲಿಯನ್ನು ಧರಿಸಿಯೇ ದೇವಸ್ಥಾನದೊಳಗೆ ಪ್ರವೇಶಿಸಿದ್ದಾರೆ.
ಘಟನೆಯ ಆರೋಪಿಗಳು ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಬಶೀರ್ ರಹ್ಮಾನ್ (20), ಮುಕ್ಕಚ್ಚೇರಿ ನಿವಾಸಿ ಇಸ್ಮಾಯಿಲ್, ಹಳೆಕೋಟೆ ನಿವಾಸಿ ಮುಹಮ್ಮದ್ ತಾನಿಶ್ (19) ಹಾಗೂ ಬಬ್ಬುಕಟ್ಟೆ ಪೆರ್ಮನ್ನೂರು ನಿವಾಸಿ ಮುಹಮ್ಮದ್ ರಶಾದ್ (19) ಎಂದು ತಿಳಿದುಬಂದಿದೆ.
ಈ ನಾಲ್ವರು ಆರೋಪಿಗಳು ದೇವಸ್ಥಾನದ ಒಳಗೆ ಚಪ್ಪಲಿಯನ್ನು ಧರಿಸಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಹರಿಬಿಟ್ಟಿದ್ದಾರೆ. ಈ ಘಟನೆಯ ಬಗ್ಗೆ ದೇವಾಲಯದ ಮಂಡಳಿ ಪುಂಜಾಲಕಟ್ಟೆ ಠಾಣೆಗೆ ತೆರಳಿ ದೂರನ್ನು ನೀಡಿದ್ದು ಪ್ರಕರಣದ ಸಂಬಂಧ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಡಿಯೋದಲ್ಲಿ ಇದ್ದ ಇನ್ನಿಬ್ಬರು ಆರೋಪಿಗಳಿಗಾಗಿ ತನಿಖೆ ಕಾರ್ಯವನ್ನು ಮುಂದುವರೆಸಿದ್ದಾರೆ.