ಮಂಗಳೂರು: ಕೂಳೂರು ಮತ್ತು ಕೋಡಿಕಲ್ ನಾಗಬನ ದ್ವಂಸ ಪ್ರಕರಣದ ಪ್ರಮುಖ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಸಫಾನ್, ಪ್ರವೀಣ್ ಮೊಂತೆರೊ, ನೌಶದ್, ಪ್ರತೀಕ್, ಜಯಂತ್, ನಿಖಿಲೇಶ್, ಮಂಜುನಾಥ್, ಮುಹಮ್ಮದ್ ಸುಹೇಲ್ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಆರೋಪಿಗಳು ಕೂಳೂರು ಮತ್ತು ಕಾವೂರಿನ ನಿವಾಸಿಗಳಾಗಿದ್ದು ಓರ್ವ ಹಾಸನ ಮೂಲದವನೆಂದು ತಿಳಿದುಬಂದಿದೆ.
ನವೆಂಬರ್ 13 ರಂದು ಕೋಡಿಕಲ್ ಹಾಗೂ ಅಕ್ಟೊಬರ್ 23ರಂದು ಕೂಳೂರಿನಲ್ಲಿರುವ ನಾಗನ ವಿಗ್ರಹವನ್ನು ಈ ಯುವಕರು ದ್ವಂಸಗೊಳಿಸಿದ್ದರು. ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಈ. ಕಿಡಿಗೇಡಿಗಳನ್ನು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದರು.
ಬೇರೆ ಅಪರಾಧದ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಯುವಕರು, ಪೋಲೀಸರ ಮತ್ತು ಜನರ ಗಮನ ಬೇರೆಡೆಗೆ ಹರಿಯಬೇಕೆಂದು ಪೋಲೀಸರ ದಿಕ್ಕನ್ನು ತಪ್ಪಿಸಬೇಕೆಂದು ಮತ್ತು ಜನರಲ್ಲಿ. ಕೋಮು ದ್ವೇಷವನ್ನು ಮೂಡಿಸಿ ಶಾಂತಿಯನ್ನು ಕದಡಲು ನಾಗಬನಗಳನ್ನು ದ್ಸಂಸ ಈ ಕೃತ್ಯವನ್ನು ನಡೆಸಿದರು ಎಂದು ಪೊಲೀಸ್ ಅಕ್ಯಕ್ತಾ ಎನ್. ಶಶಿ ಕುಮಾರ್ ತಿಳಿಸಿದರು.