Friday, June 9, 2023
Homeಇತರೆಜಾಲತಾಣಗಳ ಗೊಡವೆ ಬೇಡವೆಂದು ಟೀ ಅಂಗಡಿಯ ಮುಂದೆ 'ಹುಡುಗಿ ಬೇಕಾಗಿದ್ದಾಳೆ' ಎಂದು ಬ್ಯಾನರ್ ಹಾಕಿದ ಯುವಕ,

ಜಾಲತಾಣಗಳ ಗೊಡವೆ ಬೇಡವೆಂದು ಟೀ ಅಂಗಡಿಯ ಮುಂದೆ ‘ಹುಡುಗಿ ಬೇಕಾಗಿದ್ದಾಳೆ’ ಎಂದು ಬ್ಯಾನರ್ ಹಾಕಿದ ಯುವಕ,

ತ್ರಿಶ್ಯೂರ್: ಕೇರಳದ ವಲ್ಲಚಿರ ಪಟ್ಟಣದ ನಿವಾಸಿ ಉನ್ನಿಕೃಷ್ಣನ್ ಟೀ ಶಾಪ್ ಒಂದನ್ನು ನಡೆಸುತ್ತಿದ್ದಾನೆ.33 ವರ್ಷದ ಆತ ಮದುವೆಯನ್ನು ಮಾಡಿಕೊಳ್ಳಲು ಹುಡುಗಿಯನ್ನು ಹುಡುಕುತ್ತಿದ್ದಾನೆ. ಅದಕ್ಕಾಗಿ ಆತ ಹಿಡಿದ ಮಾರ್ಗ ಮಾತ್ರ ಅಪರೂಪಕರವಾಗಿದೆ.

ಬ್ರೋಕರ್, ಮ್ಯಾಟ್ರಿಮೋನಿಯಲ್ ಜಾಲತಾಣಗಳ ಗೊಡವೆಯೇ ಬೇಡವೆಂದು ಆತ ತನ್ನ ಅಂಗಡಿ ಮುಂದೆಯೇ ಹುಡುಗಿ ಬೇಕಾಗಿದ್ದಾಳೆ ಎಂದು ಪುಟ್ಟ ಬ್ಯಾನರ್ ನೊಂದನ್ನು ಹಾಕಿಕೊಂಡಿದ್ದಾನೆ. ಯಾವ ಜಾತಿಯ ಹುಡುಗಿಯಾದರೂ ಪರವಾಗಿಲ್ಲ ಎಂದು ಬೇರೆ ಉದಾರತೆ ಮೆರೆದಿದ್ದಾನೆ.

ಉನ್ನಿಕೃಷ್ಣನ್ ಹಾಕಿರುವಂತಹ ಈ ಜಾಹೀರಾತು ಇದೀಗ ಹೆಚ್ಚು ವೈರಲ್ ಆಗಿದ್ದು, ವಿದೇಶಗಳಿಂದ ಅವರಿಗೆ ಕರೆ ಬರುತ್ತಿವೆ. ಆಸ್ಟ್ರೇಲಿಯ ಮತ್ತು ಇಂಗ್ಲೆoಡಿನಿoದ ಹುಡುಗಿಯರು ಕರೆ ಮಾಡಿದ್ದಾರೆ ಎಂದು ನಾಚುತ್ತಾ ಉನ್ನಿಕೃಷ್ಣನ್ ಹೇಳುತ್ತಾರೆ.

ಆತ ಇತ್ತೀಚಿಗಷ್ಟೆ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಲಾಟರಿ ಅಂಗಡಿಯನ್ನು ನಡೆಸುತ್ತಿದ್ದ ಆತ ಈಗ ಟೀ ಅಂಗಡಿಯೊoದನ್ನು ಇಟ್ಟುಕೊಂಡಿದ್ದು, ಬಿಜಿನೆಸ್ ಚೆನ್ನಾಗಿ ಆಗುತ್ತಿದೆ ಎನ್ನುತ್ತಾರೆ. ಸದ್ಯ ಆತನ ಬದುಕಿಗೆ ಬೇಕಾಗಿರುವುದು ಒಳ್ಳೆ ಹೆಂಡತಿ.

ಉನ್ನಿಕೃಷ್ಣನ್ ಮನೆಯವರು ಈ ಹಿಂದೆ ಬ್ರೋಕರ್ ಮೊರೆ ಹೋಗಿ ಜಾತಕ ನೋಡಿಸಿ ಹುಡುಗಿ ಹುಡುಕುವ ಪ್ರಯತ್ನ ನಡೆಸಿದ್ದರಂತೆ ಆದರೆ ಯಾವುದೇ ಹುಡುಗಿಯ ಜಾತಕ ಹೊಂದಲಿಲ್ಲವoತೆ. ಹೀಗಾಗಿ ಆ ಮಾರ್ಗವನ್ನೇ ತ್ಯಜಿಸಿ ಜಾತಕದ ಉಸಾಬರಿಯೇ ಬೇಡವೆಂದು ಬ್ಯಾನರ್ ತಗುಲಿ ಹಾಕಿದ್ದರು, ಸ್ನೇಹಿತರೊಬ್ಬರು ಉನ್ನಿಯ ಬ್ಯಾನರ್ ಫೋಟೊ ಕ್ಲಿಕ್ಕಿಸಿ ಫೇಸ್ ಬುಕ್ಕಿನಲ್ಲಿ ಹಂಚಿಕೊoಡಿದ್ದರು. ಇದನ್ನು ನೋಡಿದ ದೂರದೂರಿನ ಮಲಯಾಳಿಗಳು ಮದುವೆ ವಿಚಾರವಾಗಿ ಕರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Most Popular

Recent Comments