Wednesday, November 29, 2023
HomeUncategorizedಶಿಕ್ಷಕರ ಕೊಡುಗೆ ಸಮಾಜಕ್ಕೆ ಅಪಾರವಾದದ್ದು ; ಉದ್ಯಮಿ ಸುಧಾಕರ್ ಎಸ್ ಶೆಟ್ಟಿ.

ಶಿಕ್ಷಕರ ಕೊಡುಗೆ ಸಮಾಜಕ್ಕೆ ಅಪಾರವಾದದ್ದು ; ಉದ್ಯಮಿ ಸುಧಾಕರ್ ಎಸ್ ಶೆಟ್ಟಿ.

ಶಿಕ್ಷಕರ ಕೊಡುಗೆ ಸಮಾಜಕ್ಕೆ ಅಪಾರವಾದದ್ದು, ಎಂದಿಗೂ ಅವರ ಕೊಡುಗೆಗಳನ್ನು ಸಮಾಜ ಮರೆಯಲಾಗುವುದಿಲ್ಲ ಎಂದು ಉದ್ಯಮಿ ಸುಧಾಕರ್ ಎಸ್.ಶೆಟ್ಟಿ ಅವರು ತಿಳಿಸಿದರು.

ಕರೋನ ಜೊತೆ ಜೊತೆಯಲ್ಲಿ ಶಿಕ್ಷಕರ ಕರ್ತವ್ಯವೂ ಸಹ ಅದರ ಜೊತೆಗೆ ಸಾಗಿದೆ, ಆನ್ಲೈನ್ ಕ್ಲಾಸ್ ಗಳ ಮೂಲಕ ನಿರಂತರವಾಗಿ ಅವರ ಭೋದನೆಗಳು ನಡೆಯುತ್ತಿದೆ.
ಕಳೆದ 16 ತಿಂಗಳಿಂದ ಶಿಕ್ಷಕ ವೃತ್ತಿಯನ್ನು ಅವಲಂಬಿಸಿರುವ ಶಿಕ್ಷಕ ಬಂಧುಗಳಿಗೆ ಕರೋನಾ ಎನ್ನುವಂತಹದ್ದು ದೊಡ್ಡ ಶಾಪವಾಗಿ ಪರಿಣಮಿಸಿದೆ. 2020ರಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಸಾಂಕೇತಿಕವಾಗಿತ್ತು. ಈ ದಿನದಂದು ತತ್ವಜ್ಞಾನಿಯಾದ ಹಾಗೂ ಉತ್ತಮ ಶಿಕ್ಷಕರಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದ ಶ್ರೀಯುತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ಸ್ಮರಿಸಿಕೊಳ್ಳುವ ಮೂಲಕ, ರಾಜ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಅಭಿನಂದಿಸುವ ಸುಂದರ ಸಮಾರಂಭವಾಗಿರುತ್ತದೆ.

ನಮ್ಮ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ ವೃಂದವಿದೆ. ಅವರೆಲ್ಲ ಉತ್ತಮವಾದ ಪದವಿ ಪಡೆದವರಾಗಿರುತ್ತಾರೆ. ಈ ಸಂದರ್ಭದಲ್ಲಿ 2021- 22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ “ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ”ಗೆ ಆಯ್ಕೆಯಾಗಿರುವ ಎಲ್ಲಾ ಶಿಕ್ಷಕ ವೃಂದದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಣೆ ಮಾಡುತ್ತೇನೆ ಎಂದರು.

ದುರಾದೃಷ್ಟವಶಾತ್ ಈ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಖಾಸಗಿ ಶಾಲಾ ಶಿಕ್ಷಕರನ್ನು ಆಯ್ಕೆ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸುಧಾಕರ್ ಎಸ್ ಶೆಟ್ಟಿ ಅವರು ಬೇಸರ ವ್ಯಕ್ತಪಡಿಸಿದರು.ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಷ್ಟೇ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ನಮ್ಮ ಖಾಸಗಿ ಶಾಲಾ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಕಡೆಗಣಿಸಿರುವುದು ವಿಷಾದದ ಸಂಗತಿಯಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ ಎಂದರು.

ಕರೋನ ಸಮಸ್ಯೆಯಿಂದ ಪ್ರಸ್ತುತ ಸನ್ನಿವೇಶದಲ್ಲಿ ಆನ್ ಲೈನ್ ಶಿಕ್ಷಣದಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಂಠಿತಗೊಂಡಿದೆ, ಮಕ್ಕಳಲ್ಲಿ ಮಾನಸಿಕ ಸಾಮರ್ಥ್ಯ, ಮನೋಸ್ಥೈರ್ಯ, ಬೌದ್ಧಿಕ ಸಾಮರ್ಥ್ಯ, ಉತ್ತಮ ಚಟುವಟಿಕೆಗಳೆಲ್ಲ ಕಡಿಮೆಯಾಗಿದೆ. ಇದಕ್ಕೆಲ್ಲ ಕಾರಣ ಶಿಕ್ಷಣದ ಗುಣಮಟ್ಟ ಸಂಪೂರ್ಣ ತಳಮಟ್ಟಕ್ಕೆ ಹೋಗಿದೆ.

ಕಳೆದ 16 ತಿಂಗಳಿಂದ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಅನುಭವಿಸುತ್ತಿರುವ ನೋವು ಸಂಕಟ ಹೇಳತೀರದಾಗಿದೆ. ಕಾರಣವೇನೆಂದರೆ ಪೋಷಕರು ಸರಿಯಾದ ರೀತಿಯಲ್ಲಿ ಶುಲ್ಕವನ್ನು ಪಾವತಿಸಿದೆ ಇರುವುದರಿಂದ ಎಷ್ಟೋ ಶಾಲೆಗಳಲ್ಲಿ ಶೇಕಡ 50%ರಷ್ಟನ್ನು ಮಾಸಿಕ ವೇತನವನ್ನು ಸಹ ಪಡೆಯಲಾಗದ ಸ್ಥಿತಿಯಲ್ಲಿ ಇದ್ದಾರೆ. ಶಿಕ್ಷಕರೆಂದರೆ ಸ್ವಾಭಿಮಾನದ ಸಂಕೇತವಾಗಿದ್ದಾರೆ ಆದ್ದರಿಂದ ಬೇರೆ ವೃತ್ತಿಯಲ್ಲಿ ತಡೆದುಕೊಳ್ಳಲು ಅಸಾಧ್ಯವಾಗದಂತಹ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ರೀತಿಯ ತಾರತಮ್ಯವನ್ನು ಮಾಡುವುದು ಸರಿಯಲ್ಲ. ಇನ್ನು ಮುಂದೆಯಾದರೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಖಾಸಗಿ ಶಾಲಾ ಶಿಕ್ಷಕರನ್ನು ಪರಿಗಣಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದರು.

Most Popular

Recent Comments