ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಗರ್ಭಿಣಿ ಪೊಲೀಸ್ ಮಹಿಳೆಯನ್ನು ಅವರ ಮಕ್ಕಳ ಮುಂದೆಯೇ ತಾಲಿಬಾನ್ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.
ಬಾನು ನೆಗರ್ ಎಂಬ ಮಹಿಳೆಯನ್ನು ಮಧ್ಯ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ಕೊದಲ್ಲಿರುವಂತಹ ತನ್ನ ಸಂಬoಧಿಕರ ಎದುರಿನಲ್ಲಿ ಕೊಲ್ಲಲಾಗಿದೆ.
ಈ ಘಟನೆ ನಡೆದ ನಂತರ ತಾಲಿಬಾನ್ ಬಿಬಿಸಿಯೊಂದಿಗೆ ನಡೆದ ಮಾತುಕತೆಯಲ್ಲಿ ನೆಗರ್ ರವರ ಸಾವಿನಲ್ಲಿ ತನ್ನ ಪಾತ್ರವಿಲ್ಲ ಎಂದು ಈ ಆರೋಪವನ್ನು ನಿರಾಕರಿಸಿತ್ತು. ವಕ್ತಾರ ಜಬಿವುಲ್ಲಾ ಮುಜಾಹೀದ್ ‘ಈ ಘಟನೆಯ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ ಮತ್ತು ತಾಲಿಬಾನ್ ಆ ಮಹಿಳೆಯನ್ನು ಕೊಂದಿಲ್ಲ, ಈ ಘಟನೆಯ ಬಗ್ಗೆ ತನಿಖೆಯು ನಡೆಯುತ್ತಿದೆ ಎಂದು ನಾನು ದೃಢೀಕರಿಸುತ್ತಿದ್ದೇನೆ.’ ಎಂದು ಹೇಳಿದ್ದಾರೆ.
ಹಿಂದಿನ ಆಡಳಿತಕ್ಕಾಗಿ ಕೆಲಸ ಮಾಡಿದಂತಹ ಜನರಿಗೆ ತಾಲಿಬಾನ್ ಈಗಾಗಲೇ ಕ್ಷಮಾದಾನವನ್ನು ಘೋಷಿಸಿದೆ ಮತ್ತು ನೆಗರ್ ಅವರ ಹತ್ಯೆಯನ್ನು ‘ವೈಯಕ್ತಿಕ ದ್ವೇಷ ಅಥವಾ ಬೇರೆ ಏನಾದರೂ ಕಾರಣವಿರಬಹುದು ಎಂದು ಮುಜಾಹೀದ್ ನವರು ತಿಳಿಸಿದ್ದಾರೆ ಹಾಗೂ ತಾಲಿಬಾನ್ ಶನಿವಾರ ತನ್ನ ಪತಿ ಮತ್ತು ಮಕ್ಕಳ ಮುಂದೆ ನೇಗರ್ ನನ್ನು ಹೊಡೆದು ಕೊಂದಿದೆ ಎಂದು ಕನಿಷ್ಠ ಮೂರು ಮೂಲಗಳು ತಿಳಿಸಿವೆ ಎಂದು ಬಿಬಿಸಿಯು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ. ಗ್ರಾಫಿಕ್ ಚಿತ್ರಗಳು ಕೋಣೆ ಮತ್ತು ದೇಹದ ಮೂಲೆಯಲ್ಲಿ ಅಲ್ಲಿರುವಂತಹ ಗೋಡೆಯ ಮೇಲೆ ರಕ್ತ ಚೆಲ್ಲಿರುವುದನ್ನು ತೋರಿಸಿದೆ, ಆದರೆ ಮುಖವು ಅತಿಯಾಗಿ ವಿರೂಪಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೃತ ಮಹಿಳೆ ಸಂಬoಧಿಕರು ಮೂವರು ಬಂದೂಕುಧಾರಿಗಳು ಶನಿವಾರ ತಮ್ಮ ಮನೆಗೆ ಬಂದು ಕುಟುಂಬದ ಸದಸ್ಯರನ್ನು ಕಟ್ಟಿಹಾಕುವ ಮೊದಲು ಮನೆಯನ್ನು ಶೋಧಿಸಿದ್ದಾರೆ ಆ ವ್ಯಕ್ತಿಗಳು ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಮಾಧ್ಯಮ ವರ್ಗದವರಿಗೆ ತಿಳಿಸಿದ್ದಾರೆ.