Sunday, June 4, 2023
Homeಸುದ್ದಿಗಳುದೇಶಭಾರತ - ಆಫ್ಘಾನಿಸ್ತಾನ ನಡುವಿನ ವ್ಯವಹಾರಕ್ಕೆ ನಿರ್ಬಂಧ ಹೇರಿದ ತಾಲಿಬಾನ್ ಉಗ್ರರು,

ಭಾರತ – ಆಫ್ಘಾನಿಸ್ತಾನ ನಡುವಿನ ವ್ಯವಹಾರಕ್ಕೆ ನಿರ್ಬಂಧ ಹೇರಿದ ತಾಲಿಬಾನ್ ಉಗ್ರರು,

ನವದೆಹಲಿ: ಕಾಬೂಲ್ ಪ್ರವೇಶಿಸಿ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಭಾರತದೊಂದಿಗಿನ ಆಮದು ಮತ್ತು ರಫ್ತು ವ್ಯವಹಾರಗಳನ್ನು ನಿಲ್ಲಿಸಿದೆ.

ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ (ಎಫ್ ಐಇಒ) ನ ಮಹಾ ನಿರ್ದೇಶಕ (ಡಿಜಿ) ಡಾ. ಅಜಯ್ ಸಹಾಯ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಪ್ರಸ್ತುತ ತಾಲಿಬಾನ್ ಪಾಕಿಸ್ತಾನದ ಸಾರಿಗೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ನಿಲ್ಲಿಸಿದೆ, ಆ ಮೂಲಕ ದೇಶದಿಂದ ಆಮದನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಆಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ನಾವು ನಿಕಟವಾಗಿ ನಿಗಾ ಇಡುತ್ತೇವೆ. ಅಲ್ಲಿಂದ ಆಮದು ಪಾಕಿಸ್ತಾನದ ಸಾರಿಗೆ ಮಾರ್ಗದ ಮೂಲಕ ಬರುತ್ತದೆ. ಸದ್ಯಕ್ಕೆ, ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆಯನ್ನು ನಿಲ್ಲಿಸಿದೆ, ಆದ್ದರಿಂದ ವಾಸ್ತವವಾಗಿ ಆಮದು ನಿಂತಿದೆ ಎಂದು ಎಫ್‌ಇಒ ಡಿಜಿ ತಿಳಿಸಿದ್ದಾರೆ.

ಭಾರತವು ಅಫ್ಘಾನಿಸ್ತಾನದ ಅತಿದೊಡ್ಡ ಪಾಲುದಾರ ದೇಶವಾಗಿದ್ದು, ಅಫ್ಘಾನಿಸ್ತಾನಕ್ಕೆ ನಮ್ಮ ರಫ್ತುಗಳು 2021 ಕ್ಕೆ ಸುಮಾರು 835 ಮಿಲಿಯನ್ ಡಾಲರ್ ನಷ್ಟಿದೆ. ನಾವು ಸುಮಾರು 510 ಮಿಲಿಯನ್ ಡಾಲರ್ ನಷ್ಟು ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ವ್ಯಾಪಾರದ ಹೊರತಾಗಿ, ಸುಮಾರು 3 ಶತಕೋಟಿ ಡಾಲರ್ ಹೂಡಿಕೆಯನ್ನು ಮಾಡಿದ್ದೇವೆ. ಸುಮಾರು 400 ಯೋಜನೆಗಳಿಗೆ ಆರ್ಥಿಕ ಸಹಾಯವನ್ನು ನೀಡಿದ್ದೇವೆ ಎಂದು ಸಹಾಯ್‌ಯವರು ವಿವರಿಸಿದ್ದಾರೆ.

 

Most Popular

Recent Comments