ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಇದೇ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿರುವ ಸುಧಾಕರ್ ಎಸ್ ಶೆಟ್ಟಿ ಅವರು ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸೋಮವಾರ ಕೊಪ್ಪದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ವೇದಮೂರ್ತಿ ರವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಇದನ್ನೂ ಓದಿ; ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮನೆ ಕಳ್ಳತನದ ಆರೋಪಿ ಬಂಧನ
ನಾಮಪತ್ರ ಸಲ್ಲಿಸುವ ಮೊದಲು ಕೊಪ್ಪದ ವೀರಭದ್ರ ದೇವಸ್ಥಾನದಲ್ಲಿ ಪಕ್ಷದ ಪ್ರಮುಖರೊಂದಿಗೆ ಪೂಜೆಯನ್ನು ಸಲ್ಲಿಸಿದರು. ನಂತರ ಪಕ್ಷದ ಕಚೇರಿಯಿಂದ ತಾಲೂಕು ಕಚೇರಿವರೆಗೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆ ಬಂದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ದೀಪಕ್ ದೊಡ್ಡಯ್ಯ
- ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತ್ಯು.!
- ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್ ವಶಕ್ಕೆ
ಮೂಲತಃ ಉದ್ಯಮಿಯಾಗಿರುವ ಸುಧಾಕರ್ ಶೆಟ್ಟಿ ಕೊಪ್ಪದ ತುಮಖಾನೆಯವರು. ತಮ್ಮ ಹಲವಾರು ಉದ್ಯಮವನ್ನು ಮೈಸೂರಿನಲ್ಲಿ ಹೊಂದಿದ್ದಾರೆ. ಕೋವಿಡ್ ನಂತರದಲ್ಲಿ ಅಮ್ಮ ಫೌಂಡೇಶನ್ ಮುಖಾಂತರ ಕ್ಷೇತ್ರಕ್ಕೆ ಎಂಟ್ರಿಯಾದ ಶೆಟ್ರಿಗೆ ಕುಮಾರಣ್ಣ ರಾಜ್ಯ ಉಪಾಧ್ಯಕ್ಷ ಸ್ಥಾನದ ಜೊತೆಗೆ ಶೃಂಗೇರಿಯ ಜೆಡಿಎಸ್ ಟಿಕೆಟ್ ಸಹ ಘೋಷಿಸಿದ್ದಾರೆ. ಹೆಸರಿಲ್ಲದಂತಿದ್ದ ಜೆಡಿಎಸ್ ಗೆ ಹೊಸ ರೂಪುರೇಷೆ ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನ ಎಂಟ್ರಿಯಿಂದ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎನ್ನುವ ಅಭಿಪ್ರಾಯ ಕೂಡ ಜನರಲ್ಲಿದೆ.
ಸುಧಾಕರ್ ಶೆಟ್ರಗೆ ಬೆನ್ನೆಲುಬಾಗಿ ನಿಂತ ವೆಂಕಟೇಶ್
ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಗೋವಿಂದೇಗೌಡರ ಪುತ್ರ ಹೆಚ್ ಜಿ ವೆಂಕಟೇಶ್, ಜೆಡಿಎಸ್ ನಿಂದ ಸ್ಪರ್ಧಿಸಿ ಚುನಾವಣಗೆ ಒಂದು ವಾರ ಇರುವಾಗ ಸೈಲೆಂಟ್ ಆಗಿದ್ದರು. ಆದರೂ ಸುಮಾರು 9 ಸಾವಿರ ಮತ ಪಡೆದಿದ್ದರು. ಈ ಬಾರಿ ಹೆಚ್ ಜಿ ವೆಂಕಟೇಶ್ ಸುಧಾಕರ್ ಶೆಟ್ಟರಿಗೆ ಸಾಥ್ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಸುಮಾರು 30 ಸಾವಿರ ದಕ್ಷಿಣ ಕನ್ನಡ ಮೂಲದ ಅಥವಾ ತುಳು ಭಾಷಿಕರ ಮತಗಳಿವೆ. ಹೀಗಾಗಿ ಸುಧಾಕರ್ ‘ಶೆಟ್ರು’ ಅದರ ಮೇಲೆ ಕಣ್ಣಿಟ್ಟಂತಿದೆ. ಒಕ್ಕಲಿಗ ಹಾಗು ಬ್ರಾಹ್ಮಣ ನಿರ್ಧಾರವಾಗಿರುವ ಶೃಂಗೇರಿ ಕ್ಷೇತ್ರದಲ್ಲಿ ಇದುವರೆಗೂ ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳು ಒಕ್ಕಲಿಗರೇ. ಒಟ್ಟಿನಲ್ಲಿ ಈ ಬಾರಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಯಾವ ರೀತಿ ವರ್ಕೌಟ್ ಆಗಲಿದೆ ಎನ್ನೋದನ್ನು ಕಾದುನೋಡಬೇಕಿದೆ.
ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ಪ್ರಮುಖರಾದ ಹೆಚ್.ಜಿ ವೆಂಕಟೇಶ್, ದಿವಾಕರ್ ಭಟ್, ವಿನಯ್ ಕಣಿವೆ, ಕುಂಚೂರು ವಾಸಪ್ಪ, ಬದ್ರಿಯಾ ಮಹಮ್ಮದ್ ಇದ್ದರು
ಇನ್ನು ವಿಧಾನಸಭಾ ಚುನಾವಣೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಸುದಾಕರ್ ಎಸ್ ಶೆಟ್ಟಿ ನಾಮಪತ್ರ ಸಲ್ಲಿಕೆಯಲ್ಲಿ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅವರು ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಒಟ್ಟು ನಗದು ಎಷ್ಟು?;
ಸುಧಾಕರ್ ಎಸ್ ಶೆಟ್ಟಿ ಅವರ ಹತ್ತಿರ ಇರುವ ಒಟ್ಟು ನಗದು 2,02,619 ರೂ
ಅವರ ಪತ್ನಿ ಸುಖಲತಾ ಎಸ್ ಶೆಟ್ಟಿ ಹತ್ತಿರ ಇರುವ ನಗದು 4,06,137 ರೂ
ವಿವಿಧ ಬ್ಯಾಂಕ್ ಗಳ ಠೇವಣಿಗಳ ವಿವರ:
ಸುಧಾಕರ್ ಎಸ್ ಶೆಟ್ಟಿ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಗಳಲ್ಲಿ 11,224,636 ರೂ
ಅವರ ಪತ್ನಿ ಸುಖಲತಾ ಎಸ್ ಶೆಟ್ಟಿ ಹತ್ತಿರ ಎಸ್ ಬಿಐ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 65,495 ರೂ
ಒಟ್ಟು ಕಂಪನಿಗಳ ಮ್ಯೂಚುವಲ್ ಫಂಡ್ ಎಷ್ಟು?:
ಸುದಾಕರ್ ಎಸ್ ಶೆಟ್ಟಿ ಹತ್ತಿರ 2,382,089
ಪತ್ನಿ ಸುಖಲತಾ ಎಸ್ ಶೆಟ್ಟಿ ಹತ್ತಿರ 3,80,216
ಸುಧಾಕರ್ ಎಸ್ ಶೆಟ್ಟಿ ಅವರು ಹಲವು ಜನರಿಗೆ ಸಾಲವನ್ನು ನೀಡಿದ್ದು ಅದರಲ್ಲಿ 15,152,0476ರೂ ಗಳನ್ನು ಸಾಲ ನೀಡಿದ್ದಾರೆ.
ಪತ್ನಿ ಸುಖಲತಾ ಎಸ್ ಶೆಟ್ಟಿ 6,775,687 ರೂ ಸಾಲ ನೀಡಿದ್ದಾರೆ.
ಚರಾಸ್ತಿಯ ಒಟ್ಟು ಮೌಲ್ಯ?:
ಸುಧಾಕರ್ ಎಸ್ ಶೆಟ್ಟಿ ಅವರ ಚರಾಸ್ತಿ 9,25,69.520
ಪತ್ನಿ ಸುಖಲತಾ ಎಸ್ ಶೆಟ್ಟಿ ಅವರ ಚರಾಸ್ತಿ 87,36,248
ಆಭರಣಗಳ ಎಷ್ಟು?:
ಸುಧಾಕರ್ ಎಸ್ ಶೆಟ್ಟಿ ಅವರ ಹತ್ತಿರ ಇರುವ ಆಭರಣಗಳ ಮೌಲ್ಯ 42,06,864 ರೂ(2104 ಗ್ರಾಂ ಚಿನ್ನದ ಆಭರಣಗಳು)
ಪತ್ನಿ ಸುಖಲತಾ ಎಸ್ ಶೆಟ್ಟಿ ಹತ್ತಿರ ಇರುವ ಆಭರಣಗಳ ಮೌಲ್ಯ 6,32,062 ರೂ(316 ಗ್ರಾಂ ಚಿನ್ನದ ಆಭರಣಗಳು)
ಬಾಳೆಬರೆ ಘಾಟಿ; ವಾಹನ ಸಂಚಾರ ಆರಂಭ
ಶಿವಮೊಗ್ಗ: ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ (ಹುಲಿಕಲ್) ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ರಾತ್ರಿಯಿಂದ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ.
ಇದನ್ನೂ ಓದಿ; ಶಾಸಕ ಸಿ. ಟಿ ರವಿ ಆಸ್ಪತ್ರೆಗೆ ದಾಖಲು.. ಪತ್ನಿ ಪಲ್ಲವಿ ಸಿಟಿ ರವಿ ಕಣ್ಣೀರು!
ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ, ಚರಂಡಿ ಮತ್ತಿತರ ಕಾಮಗಾರಿಗಳಾಗಿ ಫೆ.5ರಿಂದ ಎ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆ ಬಳಿಕ ಎ. 5ರಂದು ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ 10 ದಿನಗಳ ವರೆಗೆ ಸಂಚಾರ ನಿಷೇಧಿಸಲಾಗಿತ್ತು. ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
3.5 ಕಿ.ಮೀ. ಕಾಮಗಾರಿ:
ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಬಾಳೆಬರೆ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 3 ಕೋಟಿ.ರೂ. ವೆಚ್ಚದಲ್ಲಿ ಅಂದಾಜು 1 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 10 ಕೋಟಿ.ರೂ. ವೆಚ್ಚದಲ್ಲಿ 2.5 ಕಿ.ಮೀ. ಸೇರಿದಂತೆ ಒಟ್ಟು 3.5 ಕಿ.ಮೀ. ದೂರದವರೆಗೆ ರಸ್ತೆ ಅಗಲ, ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.
3.5 ಕಿ.ಮೀ. ಅಭಿವೃದ್ಧಿ ಬಾಕಿ:
ಬಾಳೆಬರೆ ಘಾಟಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಹುಲಿಕಲ್ ಚೆಕ್ ಪೋಸ್ಟ್‌ನಿಂದ ಹೊಸಂಗಡಿಯ ಘಾಟಿಯ ಬುಡದ ವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲೆಯ 8 ಕಿ.ಮೀ. ಪೈಕಿ ಈ ಹಿಂದೆ ಸ್ವಲ್ಪ ಕಾಂಕ್ರಿಟೀಕರಣ ಆಗಿದ್ದು, ಈಗ ಬಾಕಿಯಿದ್ದ 2.5 ಕಿ.ಮೀ.ನೊಂದಿಗೆ ಕಾಂಕ್ರಿಟೀಕರಣಗೊಂಡಿದೆ. ಉಡುಪಿ ಜಿಲ್ಲೆಯ 6.5 ಕಿ.ಮೀ. ಘಾಟಿಯ ಪೈಕಿ ಈ ಹಿಂದೆ 2 ಕಿ.ಮೀ., ಈಗ 1 ಕಿ.ಮೀ. ಸೇರಿದಂತೆ ಒಟ್ಟು 3 ಕಿ.ಮೀ. ಕಾಂಕ್ರಿಟೀಕರಣಗೊಂಡಂತಾಗಿದೆ. ಇನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ 3.5 ಕಿ.ಮೀ. ಘಾಟಿ ರಸ್ತೆ ಕಾಂಕ್ರಿಟೀಕರಣ ಬಾಕಿ ಇದೆ.
ಇದನ್ನೂ ಓದಿ; ಒಳಮೀಸಲಾತಿ ಕಿಚ್ಚು: ತರ್ಲಘಟ್ಟ ತಾಂಡಾದಲ್ಲಿ ವಿಜಯೇಂದ್ರಗೆ ಪ್ರತಿಭಟನೆಯ ಸ್ವಾಗತ