ಮಾಸ್ಕ್ ಹಾಕದೆ ಹಾಗು ಸಾಮಾಜಿಕ ಅಂತ ಕಾಪಾಡದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸೋಮವಾರದ ಸಂಜೆ ಉಡುಪಿಯ ಸಂತೆಕಟ್ಟೆ ಬಳಿ ಬಸ್ ಅಡ್ಡಗಟ್ಟಿ ತಪಾಸಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಬಸ್ ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇದ್ದವರನ್ನು ಕೆಳಗೆ ಇಳಿಸಿದ್ದರು ಅಲ್ಲದೆ ವಿಪರೀತ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಬಸ್ ಚಾಲಕ ಹಾಗು ನಿರ್ವಾಹಕರಗೆ ಕ್ಲಾಸ್ ತೆಗೆದುಕೊಂಡಿದ್ದರು. ಬಸ್ ನಲ್ಲಿ ಎಷ್ಟು ಸೀಟ್ ಇರುತ್ತದೆಯೋ ಅಷ್ಟು ಮಂದಿ ಮಾತ್ರ ಪ್ರಯಾಣಿಸಬೇಕೆಂದು ಹೇಳಿ ಬಸ್ ನಲ್ಲಿ ನಿಂತಿದ್ದ ವಿಧ್ಯಾರ್ಥಿಗಳನ್ನು ಹಾಗು ಕೆಲ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದರು. ಡಿಸಿ ಜಗದೀಶ್ ರ ಈ ಕ್ರಮಕ್ಕೆ ವಿಧ್ಯಾರ್ಥಿನಿಯರಿಂದ ಹಾಗೂ ಸಾರ್ವಜನಿಕರಿಂದ ಬಾರೀ ಅಕ್ರೋಶ ವ್ಯಕ್ತವಾಗಿದೆ. ಈ ಕುರಿತು ವಿಧ್ಯಾರ್ಥಿನಿಯೊಬ್ಬಳು ಮಾತನಾಡಿದ ವೀಡಿಯೋ ಈಗ ಎಲೆಡೆ ವೈರಲ್ ಆಗಿದ್ದು, ‘ಡಿಸಿ ಅವರು ನಮ್ಮನ್ನು ಬಸ್ ನಿಂದ ಇಳಿಸಿ ಹೋಗಿದ್ದಾರೆ ಆದರೆ ನಮಗೆ ಈಗ ಮನೆಗೆ ತೆರಳಲು ಬಸ್ ಇಲ್ಲ, ಅರ್ಧಗಂಟೆಯ ಅಂತರದಲ್ಲಿ ಬಸ್ ಗಳಿದ್ದು ಎಲ್ಲಾ ಬಸ್ ಗಳು ಕೂಡ ಜನರಿಂದ ತುಂಬಿರುತ್ತವೆ, ನಮಗೆ ಈಗ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದೆ. ಡಿಸಿ ಅವರ ಈ ಕ್ರಮ ಸರಿ ಇಲ್ಲ ಎಂದಿದ್ದಾರೆ.
ವಿಧ್ಯಾರ್ಥಿನಿ ಮಾತನಾಡಿದ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದ್ದು ಕೇವಲ ಬಡವರ ಮೇಲೆ, ವಿಧ್ಯಾರ್ಥಿಗಳ ಮೇಲಷ್ಟೇ ಡಿಸಿಯವರ ದರ್ಪ ರಾಜಕೀಯ ಸಮಾವೇಶದಲ್ಲಿ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದವರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಧ್ಯೆಯೇ ಸರ್ಕಾರ ವಿಧ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದೆ. ಬಸ್ ನಲ್ಲಿ ಸಿಟ್ಟಿಂಗ್ ನಲ್ಲಿ ಮಾತ್ರ ಪ್ರಯಾಣಿಸಬೇಕೆಂಬುದು ಎಷ್ಟು ಸರಿ, ಇತ್ತ ಕೆಎಸ್ಸಾರ್ಟಿಸಿ ಬಸ್ ಗಳು ಕೂಡ ರಸ್ತೆಗಿಳಿಯುತ್ತಿಲ್ಲ ಇಂತಹ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಬೇಕಾಗಿದ್ದ ಜಿಲ್ಲಾಡಳಿತವೇ ವಿಧ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆಯುಂಟುಮಾಡುತ್ತಿದೆ.
– ಹೆಸರು ಹೇಳಲಿಚ್ಚಿಸದ ವ್ಯಕ್ತಿ
ಜನಸಾಮಾನ್ಯರಿಗೊಂದು ನ್ಯಾಯ, ರಾಜಕೀಯ ಮುಖಂಡರಿಗೊಂದು ನ್ಯಾಯ.

ಈ ಹಿಂದೆ ಮಂಗಳೂರು ಜಿಲ್ಲಾಧಿಕಾರಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವನಿಗೆ ಮಾಸ್ಕ್ ಹಾಕಿಲ್ಲವೆಂದು ಕುತ್ತಿಗೆ ಪಟ್ಟಿ ಹಿಡಿದು ದರ್ಪ ಮೆರೆದ ವೀಡಿಯೋವೊಂದು ಆಕ್ರೋಶಕ್ಕೊಳಗಾಗಿತ್ತು. ಇತ್ತೀಚಿಗೆ ಕಟೀಲಿನ ಬಸ್ ತುಂಗುದಾಣದ ಉದ್ಘಾಟನೆ ಕಾರ್ಯಕ್ರಮವೊಂದರಲ್ಲಿ ಸಂಸದ ನಳೀನ್ ಕುಮಾರ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಮಾಸ್ಕ್ ಧರಿಸಿದೆ, ಸಾಮಾಜಿಕ ಅಂತ ಕಾಯ್ದುಕೊಳ್ಳದೆ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೊಳಗಾಗಿದ್ದು ಬಡವರಿಗೆ, ಸಾಮಾನ್ಯರಿಗೆ ಒಂದು ನ್ಯಾಯವಾದರೆ ರಾಜಕೀಯ ಮುಖಂಡಿರಿಗೇ ಒಂದು ನ್ಯಾಯವೆಂಬ ಮಾತುಗಳು ಕೇಳಿಬರುತ್ತಿವೆ.