ಬೆಂಗಳೂರು: ಅತಿಯಾದ ಮಳೆಯಿಂದ ತೊಂದರೆಗೀಡಾದ ಸಂತ್ರಸ್ತ ಜನರ ನೆರವಿಗೆ ಸಹಾಯ ಮಾಡುವಂತೆ ರಾಜ್ಯಸರ್ಕಾರ ತುರ್ತು ಪರಿಹಾರವನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಅಪಾರವಾದ ಹಾನಿ ನಷ್ಟ ಉಂಟಾಗಿದೆ ಅನೇಕ ಜನರು ಮನೆಯನ್ನು ಕಳೆದುಕೊಂಡು ಬೀದಿಗೆ ಬಂದು ನಿತ್ತಿದ್ದಾರೆ, ಅಲ್ಲದೇ ಸಾವಿರಾರು ಹೆಕ್ಟೇರ್ ಬೆಳೆದ ಬೆಳೆಗಳು ನಾಶವಾಗಿ ಹೋಗಿದೆ.
ರಾಜ್ಯದಲ್ಲಿ ಮಳೆಯಿಂದ ಬೆಳೆಗಳನ್ನು ಮನೆಗಳನ್ನು. ಕಳೆದುಕೊಂಡ ಸಂತ್ರಸ್ತರಿಗೆ ನೇರವಾಗುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿ ರೈತರ ಹಾಗೂ ಸಮಸ್ತ ಜನರ ನೆರವಿಗಾಗಿ ರಾಜ್ಯಸರ್ಕಾರ 418.72 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.
ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಪರಿಹಾರವನ್ನು ನೀಡುವಂತೆ ಆದೇಶವನ್ನು ಹೊರಡಿಸಿದೆ.