Monday, December 11, 2023
Homeಇತರೆಒಂದು ಗಂಟೆ ಹಾವಿನ ಜೊತೆ ಚೆಲ್ಲಾಟ ಆಡಿದ, ಕೊನೆಗೆ ಅದೇ ಹಾವು ಕಚ್ಚಿ ಸತ್ತ: ವೀಡಿಯೋ...

ಒಂದು ಗಂಟೆ ಹಾವಿನ ಜೊತೆ ಚೆಲ್ಲಾಟ ಆಡಿದ, ಕೊನೆಗೆ ಅದೇ ಹಾವು ಕಚ್ಚಿ ಸತ್ತ: ವೀಡಿಯೋ ವೈರಲ್

ಯಾದಗಿರಿ: ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ವೃದ್ಧರೊಬ್ಬರು ಹಿಡಿಯಲು ಹೋಗಿ ಅದರಿಂದ ಕಚ್ಚಿಸಿಕೊಂಡು ಸಾವನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋಡಿಹಾಳ ಗ್ರಾಮದಲ್ಲಿ ನಡೆದಿದ್ದು ಮೃತಪಟ್ಟ ವೃದ್ಧ ಬಸವರಾಜ್ ಪೂಜಾರ್ ಎಂಬ ಮಾಹಿತಿ ಲಭಿಸಿದೆ.

ಊರಿನಲ್ಲಿ ಯಾವ ಸ್ಥಳದಲ್ಲಿ ಹಾವು ಕಂಡು ಬಂದರೂ ಅದನ್ನು ಹಿಡಿದು ಕಾಡಿಗೆ ಬಿಡುತ್ತಿದ್ದ ವೃದ್ಧ ಈ ಹಿಂದೆ 300 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಬಿಟ್ಟು ಬಂದಿದ್ದರು ಆದರೆ ಈ ಬಾರಿ ಹಾವಿನ ವಿಷಕ್ಕೆ ಬಲಿಯಾಗಿದ್ದಾರೆ.

ಸುಮಾರು 6 ಅಡಿ ಉದ್ದ ಇದ್ದ ಹಾವನ್ನು ಹಿಡಿದು ಅದರ ಜೊತೆ ಒಂದು ಗಂಟೆಗೂ ಅಧಿಕ ಹೊತ್ತು ಚೆಲ್ಲಾಟ ಆಡಿದರು, ಇದರಿಂದ ಕುಪಿತಗೊಂಡ ಹಾವು ಸಿಕ್ಕ ಸಿಕ್ಕ ಕಡೆ ಕಚ್ಚಿದೆ. ಹಾವಿನ ಆಕಾರ ಗಾತ್ರ ದೊಡ್ಡದಿದ್ದರಿಂದ ಅವರು ಹಿಡಿದುಕೊಂಡಿದ್ದ ಹಿಡಿತ ತಪ್ಪಿ ಆ ಹಾವಿನಿಂದ 5 ಬಾರಿ ಕಚ್ಚಿಸಿಕೊಂಡು ಹಾವಿನ ವಿಷಕ್ಕೆ ಸಾವಿಗೀಡಾಗಿದ್ದಾರೆ.

ವಡಗೇರಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Most Popular

Recent Comments