Friday, June 9, 2023
Homeರಾಜಕೀಯ" ಜನಪೀಡಕ ಸರ್ಕಾರ " ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ ಸಿದ್ದರಾಮಯ್ಯ

” ಜನಪೀಡಕ ಸರ್ಕಾರ ” ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಬೆಂಗಳೂರು: ಸತತ ಎರಡು ವರ್ಷದಿಂದ ಆಡಳಿತದಲ್ಲಿರುವಂತಹ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ಸರ್ಕಾರ ಗುರುವಾರ ” ಜನಪೀಡಕ ಸರ್ಕಾರ ” ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಭ್ರಷ್ಟಾಚಾರ, ಅದಕ್ಷತೆ, ಆರಾಜಕತೆ, ದುರಾಡಳಿತ ಇದು ಬಿಜೆಪಿಯ ಎರಡು ವರ್ಷದ ಸಾಧನೆಗಳು ಎಂದು ಟೀಕಿಸಿದೆ.

ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ನಿವಾಸದಲ್ಲಿ “ಜನಪೀಡಕ ಸರ್ಕಾರ” ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಮಾಡಿರುವಂತಹ ಎರಡು ವರ್ಷದ ಸಾಧನೆಯೆಂದರೆ ಭ್ರಷ್ಟಾಚಾರ, ಅದಕ್ಷತೆ, ಅರಾಜಕತೆ, ದುರಾಡಳಿತ. ಆದರೇ ಅವರು ನಡೆಸಿರುವುಂತಹ ಅಭಿವೃದ್ಧಿ ಕೆಲಸ ಶೂನ್ಯ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನೂತನ ಮುಖ್ಯಮಂತ್ರಿಯನ್ನಾಗಿ ಬಸವರಾಜ ಬೊಮ್ಮಾಯಿಯವರನ್ನು ಯಡಿಯೂರಪ್ಪನವರೇ ನೇಮಿಸಿದ್ದು. ಇದರಿಂದ ಸರ್ಕಾರದಲ್ಲಿ ಬದಲಾವಣೆಯೇನು ಆಗುವುದಿಲ್ಲ. ಶರಣಾಗತಿ ಬಸವರಾಜ ಬೊಮ್ಮಾಯಿಯವರಿಗೆ ಅನಿವಾರ್ಯವಾಗಿದೆ. ಅವರಿಗೇ ಕೆಲಸ ಕೊಟ್ಟಿದ್ದೇ ಯಡಿಯೂರಪ್ಪ. ಹೀಗಾಗಿ ಯಡಿಯೂರಪ್ಪ ನವರ ಮಾತಿನಂತೆಯೇ ಇರಬೇಕಾಗುತ್ತದೆ ಎಂದು ಹೇಳಿದರು.

ಯಡಿಯೂರಪ್ಪ ನವರು 2 ವರ್ಷ ಸರ್ಕಾರ ನಡೆಸಿದ್ದೇನೆ ಎಂದು ಸಂಭ್ರಮದ ದಿನ ಆಚರಿಸಿ ರಾಜೀನಾಮೆಯನ್ನು ನೀಡಿ. ರಾಜ್ಯವನ್ನು ಸಂಕಷ್ಟದ ದಿನದಲ್ಲಿ ಅಭಿವೃದ್ಧಿಯೆಡೆಗೆ ಕೊಂಡೊಯ್ದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಎಂದು ಯಡಿಯೂರಪ್ಪನವರನ್ನು ಟೀಕಿಸಿದರು.

2018 ರಲ್ಲಿ ಸರ್ಕಾರದಲ್ಲಿ ಯಾರಿಗೂ ಬಹುಮತ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ದೊಡ್ಡ ಪಕ್ಷ ಆಗಿದ್ದರಿಂದ ಬಿ.ಎಸ್ ಯಡಿಯೂರಪ್ಪ ನವರಿಗೆ ಸರ್ಕಾರ ರಚಿಸುವಂತಹ ಅವಕಾಶವು ಬಂದಿತು . ಅವರಿಗೆ ನೀಡಿದಂತಹ ಅವಕಾಶದಲ್ಲಿ ಅವರು ವಿಫಲವಾದಾಗ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿತು. ಆದರೆ ಅದನ್ನು ಬೀಳಿಸಿ ಯಡಿಯೂರಪ್ಪನವರು ಪುನಃ ವಾಮಮಾರ್ಗದಲ್ಲಿ ಅನೈತಿಕ ಸರ್ಕಾರವನ್ನು ರಚಿಸಿದರು ಎಂದು ಸಿದ್ದರಾಮಯ್ಯನವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Most Popular

Recent Comments