ಮಂಡ್ಯ: ರಾಷ್ಟೀಯ ಸ್ವಯಂಸೇವಕ ಸಂಘದಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೆಚ್. ಡಿ. ಕುಮಾರಸ್ವಾಮಿ ಯವರಿಗೆ ಆರ್ ಎಸ್ ಎಸ್ ಶಿಬಿರಕ್ಕೆ ಬರಲು ಅಹ್ವಾನವನ್ನು ಕಳುಹಿಸಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಸೋಮನಹಳ್ಳಿ ವಿದ್ಯಾಸಂಸ್ಥೆಯಲ್ಲಿ ಅ.17ರಿಂದ ಏಳು ದಿನಗಳ ಕಾಲ ಆರ್ಎಸ್ಎಸ್ ಪ್ರಾಥಮಿಕ ಶಿಕ್ಷಾ ವರ್ಗ ಶಿಬಿರ ನಡೆಯಲಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರದಲ್ಲಿ ಪಾಲ್ಗೊಂಡು ಆರ್ಎಸ್ಎಸ್ನ ಮಹತ್ವವನ್ನು ತಿಳಿದುಕೊಳ್ಳಿ. ಆರ್ಎಸ್ಎಸ್ ಶಿಬಿರದಲ್ಲಿ ಸಂಸ್ಕಾರದ ಬಗ್ಗೆ ಹೇಳಿಕೊಡಲಾಗುತ್ತದೆ. ಏಳು ದಿನಗಳಲ್ಲಿ ನಿಮ್ಮನ್ನು ಪರಿಪೂರ್ಣವಾಗಿ ಗಟ್ಟಿಗೊಳಿಸಿ ಈ ದೇಶಕ್ಕೆ ಹಾಗೂ ಸಮಾಜಕ್ಕೆ ನಿಮ್ಮನ್ನು ಆರ್ಎಸ್ಎಸ್ ಅರ್ಪಣೆ ಮಾಡುತ್ತದೆ ಎಂದು ಪತ್ರಮುಖೇನ ಕರೆಯಲಾಗಿದೆ.
ಶಿಬಿರಕ್ಕೆ ಬರುವಾಗ ತಟ್ಟೆ, ಲೋಟ, ಬೆಡ್ಶೀಟ್, ಜಮಕಾನ ಹಾಗೂ ಎರಡು ಜೊತೆ ಬಟ್ಟೆ ತೆಗೆದುಕೊಂಡು ಬನ್ನಿ. ಅದರಲ್ಲೂ ಆರ್ಎಸ್ಎಸ್ ಗಣವೇಷದಲ್ಲಿ ಶಿಬಿರದಲ್ಲಿ ಪಾಲ್ಗೊಂಡು, ಬಳಿಕ ಆರ್ಎಸ್ಎಸ್ ಬಗ್ಗೆ ಮಾತನಾಡಿ ಎಂದು ಆರ್ಎಸ್ಎಸ್ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಇಬ್ಬರೂ ಮಾಜಿ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆದಿದ್ದಾರೆ.