ಬೆಂಗಳೂರು: ರೈತರ ಸರ್ಕಾರ ಎಂದು ಹೇಳಿಕೊಂಡು ದೇಶದ ಮತ್ತು ರಾಜ್ಯದ ರೈತರಿಗೆ ಟೋಪಿ ಹಾಕುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಕಷ್ಟವನ್ನು ಆಲಿಸಿದ್ದೇನೆ. ರೈತರು ಬೆಳೆದಂತಹ ಬೆಳೆಗಳು ಅಕಾಲಿಕ ಮಳೆಯಿಂದ ಸಂಪೂರ್ಣವಾಗಿ ನಾಶವಾಗಿ ಹೋಗಿದೆ.
ಸರ್ಕಾರ ರೈತರ ಕಡೆ ಗಮನ ಹರಿಸಿ ಬೆಳೆನಷ್ಟದ ಸಮೀಕ್ಷೆಯನ್ನು ನಡೆಸಿ ಅವರಿಗೆ ಪರಿಹಾರವನ್ನು ನೀಡಬೇಕಿತ್ತು ಆದರೆ ಇಲ್ಲಿಯವರೆಗೂ ಜಿಲ್ಲಾ ಉಸ್ತುವಾರಿ ಸಚಿವರು, ಮಂತ್ರಿಗಳು, ಅಧಿಕಾರಿಗಳು ಸ್ಥಳಕ್ಕೆ ಬಂದು ಅವರ ಸಂಕಷ್ಟವನ್ನು ಆಲಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ಹೇಳಿದರು.
ರಾಜ್ಯದ ಬಿಜೆಪಿ ಸರ್ಕಾರ ರೈತರ ಸರ್ಕಾರ ಎಂದು ಹೇಳಿಕೊಂಡು ರೈತರಿಗೆ ಟೋಪಿ ಹಾಕುವ ಕೆಲಸವನ್ನು ಬಿಟ್ಟು ರೈತರ ಕಷ್ಟದಲ್ಲಿ ಭಾಗಿಯಾಗಿ ಅವರಿಗೆ ಪರಿಹಾರವನ್ನು ನೀಡಿ ಎಂದು ಹೇಳಿದರು.