ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜಿ.ಟಿ ದೇವೇಗೌಡ ಇಬ್ಬರೂ ಲವ್ ಬರ್ಡ್ಸ್ ಇದ್ದಹಾಗೆ ಇಬ್ಬರಿಗೂ ಯಾವಾಗ ಲವ್ ಆಗುತ್ತೆ, ಯಾವಾಗ ಡಿವೋರ್ಸ್ ಆಗುತ್ತೆ ಅವರಿಗೆ ಗೊತ್ತು ಎಂದು ಸಚಿವ ಎಸ್.ಟಿ. ಸೋಮಶೇಖರ್ ಟೀಕೆ ಮಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂಜೆ ಮಾಡಿದ ತಕ್ಷಣ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲ್ಲ. ಪೂಜೆಯನ್ನು ಮಾಡಿ ಎಲ್ಲರೂ ಮುಖ್ಯಮಂತ್ರಿ ಆಗುವುದಿದ್ದರೆ ಎಲ್ಲರೂ ಪೂಜೆ ಮಾಡಿಸುತ್ತಿದ್ದರು.
ಇಂದಿನ ಕಾಲದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು. ಯಾರು ಕೂಡ ದಡ್ಡರಲ್ಲ ಯಾರಿಗೆ ಮೊದಲು ಮಠವನ್ನು ಹಾಕಬೇಕು, ಯಾರಿಗೆ ಹಾಕಬಾರದು ಎಂದು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಎಲ್ಲರೂ ಮೊದಲು ಬಿಜೆಪಿ ಪಕ್ಷಕ್ಕೆ ಪ್ರಥಮ ಪ್ರಾಶಾಸ್ತ್ಯ ನೀಡುತ್ತಾರೆ ಆದ್ದರಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ನಾವು ಯಾರ ಬಳಿಯೂ ಎರಡನೇ ಪ್ರಾಶಸ್ತ್ಯ ಮಠ ಕೇಳುವುದಿಲ್ಲ, ಮೊದಲ ಅವಕಾಶದಲ್ಲಿಯೇ ಅಧಿಕ ಮತಗಳಿಂದ ಗೆಲ್ಲುತ್ತೇವೆ ಅದೇ ನಮ್ಮ ಗುರಿ ಎಂದರು.