ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ 7 ವರ್ಷವಾಗಿದೆ. ಅಂದಿನಿoದ ದೇಶದಲ್ಲಿ ಅಚ್ಚೇ ದಿನ್ ಬರುತ್ತೆ ಎಂದು ದೇಶದ ರೈತರನ್ನು, ಯುವಕರನ್ನು ದಾರಿತಪ್ಪಿಸಿದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ದೇಶವನ್ನು ಸ್ವರ್ಗ ಮಾಡುವ ಭ್ರಮೆಯನ್ನು ಹುಟ್ಟಿಸಿ 2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದರು ರೈತರನ್ನು, ಯುವಕರನ್ನು ಸಾಮಾನ್ಯ ಜನರ ದಾರಿಯನ್ನು ತಪ್ಪಿಸಿದರು. ಅಚ್ಚೇ ದಿನ್ ಬರುತ್ತೆ ಎಂದರು. ಜನರಲ್ಲಿ ಹೆಚ್ಚಾಗಿ ಆಶಾ ಗೋಪುರವನ್ನು ಕಟ್ಟಿಸಿದರು ಆದರೆ ಈಗ ಏಳು ವರ್ಷ ಆಗಿದೆ.
ದೇಶ ಇಂದು ಅನೇಕ ರೀತಿಯ ಕಷ್ಟವನ್ನು ಎದುರಿಸುವ ಪರಿಸ್ಥಿತಿಯು ನಿರ್ಮಾಣ ಆಗಿದೆ. ದೇಶ ಭಕ್ತಿ, ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ಮೋದಿಯವರು ದಾರಿಯನ್ನು ತಪ್ಪಿಸಿದರು. ಬಿಜೆಪಿ ಯಾವತ್ತೂ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟವನ್ನು ಮಾಡಿಲ್ಲ. ಅವರಿಗೆ ದೇಶ ಭಕ್ತಿಯ ಕೊರತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿ 224 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಆದರೆ ನಾನು ಯಾರನ್ನೂ ನಮ್ಮ ಪಕ್ಷಕ್ಕೆ ಆಹ್ವಾನವನ್ನು ನೀಡಿಲ್ಲ. ಜಿಟಿ ದೇವೇಗೌಡ ಮಾತ್ರ ಸಂಪರ್ಕ ಮಾಡಿದ್ದಾರೆ ಎಂದು ಹೇಳಿದರು.