- SHORT BULLET NEWS: rain report: ಚಿಕ್ಕಮಗಳೂರು ಜಿಲ್ಲೆಯ ಹವಾಮಾನ ವರದಿ
- nr pura: ನಾಯಿ ನುಂಗಿ ನರಳುತ್ತಿದ್ದ 15 ಅಡಿ ಉದ್ದದ ಬೃಹತ್ ಹೆಬ್ಬಾವು
- amarnath yatra: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್
- ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಸೋರುತಿರುವ ಶಾಲೆ ಮಳಿಗೆ
- cricket betting: ಬೆಟ್ಟಿಂಗ್ ದಂಧೆಗೆ ಕ್ರಿಕೆಟ್ ಕ್ರೀಡಾಪಟು ಬಲಿ
- internet problem: ಕೊಟ್ಟಿಗೆಹಾರ: ಗ್ರಾಮೀಣ ಭಾಗದ ಅಂಚೆ ಕಚೇರಿಯಲ್ಲಿ ಇಂಟರ್ನೆಟ್ ಸಮಸ್ಯೆ
- ಮಿಸ್ ಕಾಲ್ ಮಾಡಿ ಏಕರೂಪ ನಾಗರಿಕ ಸಂಹಿತೆಗೆ ಬೆಂಬಲಿಸಿ ಎಂಬ ವೈರಲ್ ಸಂದೇಶದ ಸತ್ಯಾಸತ್ಯತೆ ಏನು?
- ಮೂಡಿಗೆರೆ: ದೇವರಮನೆ ಗುಡ್ಡದಲ್ಲಿ ಯುವಕನ ಕೊಲೆ ಮಾಡಿ ಶವ ಎಸೆದ ಪ್ರಕರಣ
- ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೊ ಕಳ್ಳತನ
- ಕಳಸ; ಗ್ಯಾಸ್ ಸಿಲಿಂಡರ್ ಸೋರಿಕೆ; ಮನೆಗೆ ಹಾನಿ
- ಕೊಪ್ಪ: ಆನೆ ಸಂಚಾರ; ಆತಂಕದಲ್ಲಿ ಗ್ರಾಮಸ್ಥರು
- ಕಳಸ: ರಸ್ತೆ ಇಲ್ಲದೆ ರೋಗಿಯನ್ನ ಜೋಳಿಗೆಯಲ್ಲಿ ಹೊತ್ತು ತಂದ ಜನ
- ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಖಾತೆಗೆ ಹಣ ಜಮಾ;ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಅಂದ್ರೆ ಸಿಗಲ್ಲ ಈ ಆಫರ್
- ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕನ್ನಡದ ನ್ಯೂಸ್ ಚಾನೆಲ್ ನಲ್ಲಿ ಕಾಣಿಸಿಕೊಂಡ AI ಆ್ಯಂಕರ್
- ರಘು ಸಕಲೇಶಪುರ ಸೇರಿದಂತೆ ಮೂರು ಜನರಿಗೆ ನಿರೀಕ್ಷಣಾ ಜಾಮೀನು ನೀಡಿದ ನ್ಯಾಯಾಲಯ
- ಚಿಕ್ಕಮಗಳೂರಿನಲ್ಲಿ ಹ್ಯುಂಡೈ ಎಕ್ಸ್ಟರ್ ಕಾರು ಲಾಂಚ್
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-13.07.2023
- ಅನ್ನ ಭಾಗ್ಯ ಯೋಜನೆ:ಅಕ್ಕಿ ಜೊತೆ ನಿಮಗೂ ಹಣ ಬಂತಾ?.ಇನ್ನೂ ಬಂದಿಲ್ವಾ;ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿ?
- ಇಂದಿನ ಅಡಿಕೆ ಮಾರುಕಟ್ಟೆ ಹೇಗಿದೆ | ಬೆಟ್ಟೆ, ಗೊರಬಲು, ಸರಕು, ಇಡಿ | 13-07-2023
- ಚಿಕ್ಕಮಗಳೂರು ಜಿಲ್ಲೆಯ ಹವಾಮಾನ ವರದಿ-12.07.2023; ನಿಮ್ಮ ತಾಲೂಕಿನಲ್ಲಿ ಎಷ್ಟು ಮಳೆ ಆಗಿದೆ ಎಂದು ಇಲ್ಲಿ ತಿಳಿಯಿರಿ..
ಚಿಕ್ಕಮಗಳೂರು: ಅಂಗಡಿಯಲ್ಲಿದ್ದ 40 ಕೆ.ಜಿ. ಟೊಮೆಟೊ ಕಳ್ಳತನ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಟೊಮೆಟೊ ಹಣ್ಣಿನ ದರ ಹೆಚ್ಚಳವಾದ ಬೆನ್ನಲ್ಲೇ ನಗರದ ತರಕಾರಿ ಅಂಗಡಿಯೊಂದರಿಂದ ಟೊಮೆಟೊ ಕಳವಾದ ಬಗ್ಗೆ ದೂರು ದಾಖಲಾಗಿದೆ. ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮಾಟೋ ಇದ್ದ ಎರಡು ಟ್ರೇ ಕಳ್ಳತನವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮೆಟೊ ಕಳ್ಳತನವಾಗಿದೆ.
ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನ ಅಂಗಡಿಯಲ್ಲಿ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟೊಮೆಟೊ ಇರಲಿಲ್ಲ. ಆಗ ಅಂಗಡಿಯ ಟಾರ್ಪಲ್ ಸರಿಸಿರುವುದು ಬೆಳಕಿಗೆ ಬಂದಿದೆ. ನದೀಂ ಟೊಮೆಟೊ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳಸ :ಅವೈಜ್ಞಾನಿಕ ಕಾಮಗಾರಿಯಿಂದ ಕೆಸರುಮಯವಾದ ರಸ್ತೆ, ತುರ್ತು ಕ್ರಮಕ್ಕೆ ಒತ್ತಾಯ
ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡ್ಲಾರ್ ಮಕ್ಕಿ ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ರಸ್ತೆ ಕೆಸರಮಯವಾಗಿದ್ದು ಓಡಾಡಲು ಕಷ್ಟವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
2 ತಿಂಗಳ ಹಿಂದೆ ಜಲಜೀವನ್ ಸ್ಕೀಮ್ ಅಡಿಯಲ್ಲಿ ರಸ್ತೆ ಬದಿಯಲ್ಲೇ ಪೈಪ್ ಅಳವಡಿಸಿ ಆ ಮಣ್ಣನ್ನು ರಸ್ತೆಗೆ ಹಾಕಿದ್ದರು. ಬಳಿಕ ಅದನ್ನು ಸರಿಯಾಗಿ ಡೋಸಿಂಗ್ ಮಾಡದ ಹಿನ್ನೆಲೆಯಲ್ಲಿ ಇದೀಗ ಆ ರಸ್ತೆಯಲ್ಲಿ ಜನರು ಓಡಾಡಲು ಹರಸಾಹಸ ಪಡುವಂತಾಗಿದೆ, ಅತಿಯಾದ ಮಳೆಯ ಕಾರಣದಿಂದ ಓಡಾಡುವುದೇ ಸಮಸ್ಯೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಪ್ರೀತಮ್ ಹೆಬ್ಬಾರ್ ಒತ್ತಾಯಿಸಿದ್ದಾರೆ.