ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಬಸ್ ತಡವಾಗಿ ಬಂದಿದ್ದಕ್ಕೆ ರೊಚ್ಚಿಗೆದ್ದ ಮಹಿಳೆಯರಿಂದ ಬಸ್ ತಡೆದು ಗಲಾಟೆ ಮಾಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹಾಂಡ್ ಪೋಸ್ಟ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ; ಚಿಕ್ಕಮಗಳೂರು: ಟ್ರೆಕ್ಕಿಂಗ್ ಗೆಂದು ತೆರಳಿದ್ದ 27ರ ಯುವಕ ಹೃದಯಾಘಾತದಿಂದ ಸಾವು
ನಿತ್ಯ ಬೇಲೂರಿನಿಂದ ಮೂಡಿಗೆರೆಗೆ ಕೆಲಸಕ್ಕಾಗಿ ಮಹಿಳೆಯರು ಬರುತ್ತಿದ್ದರು. ವಾಪಸ್ ಬೇಲೂರಿಗೆ ತೆರಳಲು ಸಂಜೆ 5 ಗಂಟೆಯಿಂದ ಮಹಿಳೆಯರು ಕಾದಿದ್ದು, ರಾತ್ರಿಯಾದ್ರು ಬಸ್ ಬಾರದ ಹಿನ್ನೆಲೆ ರೊಚ್ಚಿಗೆದ್ದ ಮಹಿಳೆಯರಿಂದ ಬಸ್ ಬರುತ್ತಿದ್ದಂತೆ ಅಡ್ಡಲಾಗಿ ನಿಂತು ಮಹಿಳಾ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪೀರಿಯಡ್ಸ್ ಆಗಿರೋ ಡಾಕ್ಟರ್ ಹತ್ರ ಸರ್ಜರಿ ಮಾಡಿಸಿಕೊಳ್ತೀರಾ ಇಲ್ವಾ?’
- ಒಂದೇ ದಿನ ನೂರಾರು ಫುಲ್ ಹೆಲ್ಮೇಟ್ ಕಳ್ಳತನ
- ಏರುತ್ತಿದೆ ಕಾಫಿ ಬೆಲೆ, ಬೆಳೆಗಾರರಿಗೆ ಸಿಹಿ ಸುದ್ದಿ, ಗ್ರಾಹಕರಿಗೆ ಕಹಿ ಸುದ್ದಿ
ಹಾಫ್ ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರರಿಗೆ ದಂಡ ಹಾಕಿ ಹೆಲ್ಮೆಟ್ ಸೀಜ್ ಹಿನ್ನೆಲೆ; ಒಂದೇ ದಿನ ನೂರಾರು ಫುಲ್ ಹೆಲ್ಮೇಟ್ ಕಳ್ಳತನ
ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ಹಾಫ್ ಹೆಲ್ಮೆಟ್ ಹಾಕಿಕೊಂಡು ಬೈಕ್ ಚಾಲನೆ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದು ಒಂದಡೆಯಾದರೇ, ಮತ್ತೊಂದಡೆ ಫುಲ್ ಹೆಲ್ಮೆಟ್ ಗಳು ಕಳ್ಳತನವಾಗುತ್ತಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಇದನ್ನೂ ಓದಿ; ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ವರ್ಗಾವಣೆಗೆ ಮಹಿಳೆ ಕಣ್ಣೀರು
ಇದನ್ನೂ ಓದಿ; ದ್ವಿಚಕ್ರ ವಾಹನ ಸವಾರರಿಗೆ ಕಾಫಿನಾಡ ಪೊಲೀಸರ ಆರೋಗ್ಯ ಪಾಠ
ಹಾಫ್ ಹೆಲ್ಮೆಟ್ ಹಾಕಿಕೊಂಡು ಬೈಕ್ ಚಾಲನೆ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಹಾಫ್ ಹೆಲ್ಮೆಟ್ ಸೀಜ್ ಮಾಡುತ್ತಿದ್ದು, ಜೊತೆಗೆ ದಂಡ ಹಾಕುತ್ತಿದ್ದಾರೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಫುಲ್ ಹೆಲ್ಮೆಟ್ ಗಳ ಕಳ್ಳತನಗಳು ಜಾಸ್ತಿಯಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ; ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶ ಕಳಪೆ; ಆಡಳಿತ ಮಂಡಳಿ ಕೃಷಿ ಇಲಾಖೆಗೆ ದೂರು
ಪೊಲೀಸರ ಫೈನ್ ನಿಂದ ತಪ್ಪಿಸಿಕೊಳ್ಳಲು ಕೆಲ ಬೈಕ್ ಸವಾರರು ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಬೈಕಿನಲ್ಲಿದ್ದ ಫುಲ್ ಹೆಲ್ಮೆಟ್ ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಒಂದೇ ದಿನ ನಗರದಲ್ಲಿ ನೂರಾರು ಹೆಲ್ಮೆಟ್ ಗಳ ಕಳ್ಳತನವಾಗಿವೆ. ಹೆಲ್ಮೆಟ್ ಕಳ್ಳರ ಕೈ ಚಳಕ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ. ನಗರದ m.g ರೋಡ್, k.m ರೋಡ್,ig ರೋಡ್ ನಲ್ಲಿ ಹೆಚ್ಚು ಕಳ್ಳತನವಾಗುತ್ತಿದೆ.