Sunday, September 24, 2023
Homeಮಲೆನಾಡುಕೊಡಗುಕೊಡಗು: ಜಿಲ್ಲಾ ಕಾಂಗ್ರೆಸ್ ಹಿರಿಯ ರಾಜಕಾರಣಿ ಎಸ್‌ ಎನ್‌ ರಾಜಾರಾವ್ ನಿಧನ

ಕೊಡಗು: ಜಿಲ್ಲಾ ಕಾಂಗ್ರೆಸ್ ಹಿರಿಯ ರಾಜಕಾರಣಿ ಎಸ್‌ ಎನ್‌ ರಾಜಾರಾವ್ ನಿಧನ

ಕೊಡಗು: (ನ್ಯೂಸ್ ಮಲ್ನಾಡ್ ವರದಿ) ವಿಧಾನಸಭಾ ಚುನಾವಣೆ ಹೊತ್ತಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಗೆ ಆಘಾತದ ಘಟನೆ ನಡೆದಿದೆ. ಕೊಡಗು ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡ ಎಸ್.ಎನ್ ರಾಜಾರಾವ್ ನಿಧನರಾಗಿದ್ದಾರೆ.

ಇದನ್ನೂ ಓದಿ; ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ತಡರಾತ್ರಿ ಎಸ್.ಎನ್ ರಾಜಾರಾವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಕೊಡಗು ಕಾಂಗ್ರೆಸ್ ನಲ್ಲಿ ಹಿರಿಯ ರಾಜಕಾರಣಿಯಾಗಿದ್ದರು. ಈ ಹಿಂದೆ ಕೊಡಗು ಜಿಲ್ಲಾ ಪಂಚಾಯತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ರಾಜಾರಾವ್ ಅವರು ಪ್ರಸ್ತುತ ಕೊಡುಗು ಜಿಲ್ಲಾ ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜಾರಾವ್ ಹೃದಯಾಘಾತದಿಂದ ಕೊನೆ ಉಸಿರೆಳೆದ ಸುದ್ದಿ ತಿಳಿದು ಕಾರ್ಯಕರ್ತರು ಮುಖಂಡರು ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.

ಮೂಡಿಗೆರೆ: ಒಂದೇ ಪಾರ್ಟಿಯಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕೆ.. B B ನಿಂಗಯ್ಯ ಹೇಳಿದ್ದೇನು?

ಮೂಡಿಗೆರೆ: ಇತ್ತೀಚಿಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಮೂಲ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತವಾಗಿತ್ತು. ಮುಂದುವರೆದ ಭಾಗವಾಗಿ ಈಗ ಬಿಬಿ ನಿಂಗಯ್ಯ ಕೂಡ ನಾನು ಜೆಡಿಎಸ್ ನಿಂದ ಸ್ಪರ್ಧಿಸುತ್ತೇನೆ ಎನ್ನುವುದರ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ಇದನ್ನೂ ಓದಿ; ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ

ಬಿಜೆಪಿ ಘೋಷಿಸಿದ ಎರಡನೇ ಪಟ್ಟಿಯಲ್ಲಿ ಮೂಡಿಗೆರೆ ಬಿಜೆಪಿ ಹಾಲಿ ಶಾಸಕರಾಗಿದ್ದ ಎಂ ಪಿ ಕುಮಾರಸ್ವಾಮಿ ಅವರಿಗೆ ಕೈ ತಪ್ಪಿತ್ತು. ಕುಮಾರಸ್ವಾಮಿ ಬದಲಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಘೋಷಿಸಿತ್ತು. ಇದಾದ ಬಳಿಕ ಎಂ ಪಿ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಬಿಜೆಪಿ ಟಿಕೆಟ್ ತಪ್ಪಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಆದರೆ ಈಗ ಕ್ಷೇತ್ರದಲ್ಲಿ ಎಂ ಪಿ ಕುಮಾರಸ್ವಾಮಿ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಜೆಡಿಎಸ್ ಈ ಹಿಂದೆ ಮಾಜಿ ಸಚಿವ ಬಿಬಿ ನಿಂಗಯ್ಯ ಅವರ ಹೆಸರು ಘೋಷಣೆ ಮಾಡಿತ್ತು, ಅದರೆ ಎಂ ಪಿ ಕುಮಾರಸ್ವಾಮಿ ಸೇರ್ಪಡೆ ಬಳಿಕ ಅವರಿಗೆ ಟಿಕೆಟ್ ಘೋಷಿಸಿ ಬಿ ಫಾರಂ ನೀಡಿದೆ. ಆದರೆ ಇಷ್ಟಕ್ಕೇ ನಿಲ್ಲದ ಟಿಕೆಟ್ ಗೊಂದಲ ಈಗ ಹೊಸ ತಿರುವು ಪಡೆದುಕೊಂಡಿದೆ. ಮಾಜಿ ಶಾಸಕ ಈ ಹಿಂದೆ ಜೆಡಿಎಸ್ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿದ್ದ ಬಿಬಿ ನಿಂಗಯ್ಯ ಈಗ ತಾನೂ ಜನತಾದಳ ದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದು ಇದೇ 19ರಂದು ನಾಮಪತ್ರ ಸಲ್ಲಿಸಲ್ಲಿದ್ದೇನೆ ಎಂದಿದ್ದಾರೆ. ಇತ್ತ ಎಂ ಪಿ ಕುಮಾರಸ್ವಾಮಿ ಕೂಡ ನಾನು ಈ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದು, ಜನತೆ ಆಶೀರ್ವಾದ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ; ಕಡೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ

ಮೂಲ ಕಾರ್ಯಕರ್ತರಿಂದ ಎಂಪಿಕೆಗೆ ವಿರೋಧ

ಜೆಡಿಎಸ್ ನ ಮೂಲ ಕಾರ್ಯಕರ್ತರು ಹಾಗೂ ಮುಖಂಡರು ಮಾಜಿ ಶಾಸಕ ಬಿಬಿ ನಿಂಗಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದು ಬಿಬಿ ನಿಂಗಯ್ಯ ಹೀಗಾಗಿ ಜೆಡಿಎಸ್ ನ ವರಿಷ್ಠರು ಮತ್ತೊಮ್ಮೆ ಪರಿಶೀಲನೆ ನಡೆಸಿ ಬಿಬಿ ನಿಂಗಯ್ಯ ಅವರನ್ನೇ ಕಣಕ್ಕಿಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಹೀಗಾಗದಿದ್ದಲ್ಲ ನಾವು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಮೂಡಿಗೆರೆ ಕ್ಷೇತ್ರ ಮತ್ತೆ ಜೆಡಿಎಸ್ ಗೆ ತಲೆನೋವಾದಂತಾಗಿದೆ.

ಇದನ್ನೂ ಓದಿ; ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್ ವಶಕ್ಕೆ

ಜೆಡಿಎಸ್ ನಿಂದ ದ್ವಂದ್ವ ನಿಲುವು

ಇತ್ತೀಚಿಗೆ ಕಡೂರಿನಲ್ಲಿ ಕೂಡ ಜೆಡಿಎಸ್ ಇದೇ ದ್ವಂದ್ವ ನಿಲುವು ತೋರಿತ್ತು. ಮೊದಲ ಪಟ್ಟಿಯಲ್ಲಿ ಕಡೂರಿನ ಅಭ್ಯರ್ಥಿಯಾಗಿ ಸಿ ಎಂ ಧನಂಜಯ ಅವರ ಹೆಸರು ಘೋಷಣೆಯಾಗಿತ್ತು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್ ವಿ ದತ್ತಾ ಕೈ ಟಿಕೆಟ್ ಸಿಗದ ಪರಿಣಾಮ ಮರಳಿ ಜೆಡಿಎಸ್ ಸೇರ್ಪಡೆಯಾಗಿದ್ದರು. ದತ್ತಾ ಪಕ್ಷಕ್ಕೆ ವಾಪಾಸ್ ಮರಳುತ್ತಿದ್ದಂತೆ ಸಿಎಂ ಧನಂಜಯ್ ಗೆ ಟಿಕೆಟ್ ಕ್ಯಾನ್ಸಲ್ ಮಾಡಿ ದತ್ತಾ ಅವರ ಹೆಸರು ಘೋಷಿಸಿತ್ತು. ಇಲ್ಲೂ ಕೂಡ ಸಿಎಂ ಧನಂಜಯ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು.

Most Popular

Recent Comments