Monday, December 11, 2023
Homeಮಲೆನಾಡುಮನೆಯಲ್ಲೇ ಗಾಂಜಾ ಬೆಳೆದು ಮಾರಾಟ; ಐವರು MBBS ವಿದ್ಯಾರ್ಥಿಗಳು ಅರೆಸ್ಟ್‌

ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ; ಐವರು MBBS ವಿದ್ಯಾರ್ಥಿಗಳು ಅರೆಸ್ಟ್‌

ಶಿವಮೊಗ್ಗ; (ನ್ಯೂಸ್ ಮಲ್ನಾಡ್ ವರದಿ) ಎಂಬಿಬಿಎಸ್ ವಿದ್ಯಾರ್ಥಿಗಳು ವಾಸವಿದ್ದ ಮನೆಯಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇದನ್ನೂ ಓದಿ; ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಶೃಂಗೇರಿಯ ಯುವಕ

ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಖಯ್ಯಂ, ಅರ್ಪಿತಾ, ವಿಘ್ನರಾಜ್, ವಿನೋದ್ ಕುಮಾರ್, ಪಾಂಡಿದೊರೈ ಬಂಧಿತ ಆರೋಪಿಗಳಾಗಿದ್ದಾರೆ. ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಮೂವರೂ ಬಾಡಿಗೆ ಮನೆ ಪಡೆದಿದ್ದರು.

ಇದನ್ನೂ ಓದಿ; ಚಿಕ್ಕಮಗಳೂರು: ನಾನು ಯಾವುದೇ ರೇಸ್ ನಲ್ಲಿ ಇಲ್ಲ; ಯಾವ ಹುದ್ದೆಯ ಆಕಾಂಕ್ಷಿಯೂ ಅಲ್ಲ- ಸಿ.ಟಿ ರವಿ

ಇದೇ ಮನೆಯಲ್ಲಿ ಹೂವಿನ ಪಾಟ್‌ಗಳನ್ನು ತಂದು ಅದರಲ್ಲಿ ಗಾಂಜಾ ಬೆಳೆದಿದ್ದರು. ಅದನ್ನು ಟೇಬಲ್ ಫ್ಯಾನ್ ಬಳಸಿ ಅದರ ಗಾಳಿಯಿಂದ ಒಣಗಿಸುತ್ತಿದ್ದರು. ಅನಂತರ ಪ್ಯಾಕೆಟ್‌ಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಪಾಂಡಿದೊರೈ ಹಾಗೂ ವಿನೋದ್ ಕುಮಾರ್ ಎಂಬುವವರು ಇವರ ಬಳಿ ಗಾಂಜಾ ಖರೀದಿ ಮಾಡಲು ಹೋಗಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಬಂಧಿತರಿಂದ ಆರು ಸಾವಿರ ರೂಪಾಯಿ ಮೌಲ್ಯದ ಹಸಿ ಗಾಂಜಾ, ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಒಣ ಗಾಂಜಾ, ಮೂವತ್ತು ಸಾವಿರ ರೂಪಾಯಿ ಬೆಲೆಯ ಚರಸ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇರೆ ಬೇರೆ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಇವರು ಇಲ್ಲಿ ಎಂಬಿಬಿಎಸ್ ಮಾಡುತ್ತಿದ್ದರು. ವೈಭವದ ಜೀವನಕ್ಕಾಗಿ ಗಾಂಜಾ ಬೆಳೆಯುತ್ತಿದ್ದರು ಎಂದು ತಿಳಿದುಬಂದಿದೆ.

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಶೃಂಗೇರಿಯ ಯುವಕ; ನ್ಯೂಸ್ ಮಲ್ನಾಡ್ ನೊಂದಿಗೆ ಲೆಫ್ಟಿನೆಂಟ್ ಪ್ರಜ್ವಲ್ ಮಾತು

ಶೃಂಗೇರಿ: (ನ್ಯೂಸ್ ಮಲ್ನಾಡ್ ವಿಶೇಷ ಸಂದರ್ಶನ) ಅತ್ಯಂತ ಕಿರಿಯ ವಯಸ್ಸಿಗೆ ಭಾರತೀಯ ಸೇನೆಯ ಅತ್ಯುನ್ನತ ಹುದ್ದೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಪ್ರಜ್ವಲ್ ಆಯ್ಕೆಯಾಗಿದ್ದಾರೆ.

ಸೇನೆಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ. ಇತ್ತೀಚಿನ ದಿನದಲ್ಲಿ ಸಾಮಾನ್ಯ ಸೈನಿಕ (soldier gd) ಹುದ್ದೆಗೆ ಕೇವಲ 200 ಪೋಸ್ಟ್ ಗೆ 20 ರಿಂದ 30 ಸಾವಿರದಷ್ಟು ಅಪ್ಲಿಕೇಶನ್ ಗಳು ಬರುತ್ತಿವೆ. ಹೀಗಿರುವಾಗ ಅಫೀಸರ್ ಹುದ್ದೆಗೇರಲು ಎಷ್ಟು ಕಠಿಣ ಪರಿಶ್ರಮ ಬೇಕು ಎನ್ನುವುದು ಊಹಿಸಲು ಅಸಾಧ್ಯ. ಮಲೆನಾಡು ಭಾಗದಿಂದ ಸೇನೆ, ಅರೆಸೇನಾಪಡೆ ಅಥವಾ ಪೊಲೀಸ್ ಇಲಾಖೆಗೆ ಹೋಗುವವರು ವಿರಳ. ಅಂತಹದ್ದರ ನಡುವೆ ಶೃಂಗೇರಿಯ ಕಿರಿಯ ಸಾಧಕ ಪ್ರಜ್ವಲ್ ಇಂದು ima (ಇಂಡಿಯನ್ ಮಿಲಿಟರಿ ಅಕಾಡೆಮಿ) ಮೂಲಕ ಭಾರತೀಯ ಭೂಸೇನೆಯ ಆರ್ಟಿಲರಿ ರೆಜಿಮೆಂಟ್ ಗೆ ಲೇಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಸೇನೆಯಲ್ಲಿನ ಕಠಿಣ ನಿಯಮ, ಭದ್ರತಾ ದೃಷ್ಟಿಯಿಂದ ನಮಗೆ ಅವರ ಸಂದರ್ಶನ ಮಾಡಲು ಅಸಾಧ್ಯ. ಹೀಗಾಗಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿರುವ ಲೆ. ಪ್ರಜ್ವಲ್ ಅವರೊಂದಿಗೆ ಫೋನ್ ಕಾಲ್ ಇಂಟರ್ವ್ಯೂ ಮಾಡಿದ್ದು, ನೀವು ಇಲ್ಲಿ ಓದಬಹುದು..

ಇದನ್ನೂ ಓದಿ; ಚಿಕ್ಕಮಗಳೂರು: ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣ

ನ್ಯೂಸ್ ಮಲ್ನಾಡ್: ನಿಮ್ಮ ಹಿನ್ನಲೆ ಏನು, ನಿಮ್ಮ ವಿದ್ಯಾಭ್ಯಾಸ ಇದರ ಕುರಿತಂತೆ ತಿಳಿಸಬಹುದೆ?
ಲೆ. ಪ್ರಜ್ವಲ್: ನಮ್ಮ ಊರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ. ಪ್ರಸ್ತುತ ನಮ್ಮ ಕುಟುಂಬ ಮೈಸೂರಿನಲ್ಲಿ ವಾಸವಿದ್ದೇವೆ. ನಮ್ಮ ತಂದೆ ಶಿವಸ್ವಾಮಿ ಹಾಗೂ ತಾಯಿ ಮಂಜುಳಾ. 10ನೇ ತರಗತಿ ವರೆಗಿನ ವಿಧ್ಯಾಭ್ಯಾಸವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದುಕೊಂಡೆ. ಆನಂತರ ಉಜಿರೆಯ ಎಸ್ ಡಿ ಎಮ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದೆ. ಬಳಿಕ bsc ಪದವಿಯನ್ನು ಮೈಸೂರಿನ ಯುವರಾಜ ಕಾಲೇಜು ಹಾಗೂ msc ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡೆ. ಕಾಲೇಜು ದಿನಗಳಲ್ಲಿ 3 ಕರ್ನಾಟಕ ನಾವೆಲ್ ಯುನಿಟ್ (ಎನ್ ಸಿಸಿ) ಯಲ್ಲಿ c ಸರ್ಟಿಫಿಕೇಟ್ ಪಡೆದುಕೊಂಡೆ.

ನ್ಯೂಸ್ ಮಲ್ನಾಡ್: ಸೇನೆ ಸೇರುತ್ತೇನೆ ಎಂದಾಗ ಮನೆಯವರ ರಿಯಾಕ್ಷನ್ ಹೇಗಿತ್ತು?
ಲೆ. ಪ್ರಜ್ವಲ್: ನಾನು ಎಂಟನೇ ತರಗತಿ ಓದುವಾಗ ಡಿಫೆನ್ಸ್ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಅಲ್ಲಿಂದಲೂ ನಾನು ನನ್ನ ಫ್ಯಾಷನ್ ನ ಫಾಲೋ ಮಾಡಲು ಪ್ರಾರಂಭಿಸಿದೆ. ನಂತರ ತಂದೆಗೆ ಸೇನೆಯ ಕುರಿತ ಆಸಕ್ತಿ ಬಗ್ಗೆ ತಿಳಿಸಿದೆ. ಅವರು ಆರೆಸ್ಸೆಸ್ ನಲ್ಲಿ ಸ್ವಯಂಸೇವಕರಾಗಿ ಜೀವನದಲ್ಲಿಯೂ ಶಿಸ್ತು, ದೇಶಭಕ್ತಿ, ಸೇನೆಯ ಕುರಿತಂತೆ ಸಾಕಷ್ಟು ಅಭಿಮಾನ ಹೊಂದಿದ್ದರು. ಹಾಗಾಗಿ ಅವರು ನನ್ನ ಸೇನೆ ಸೇರುವ ಹಂಬಲಕ್ಕೆ ಬೆನ್ನೆಲುಬಾಗಿ ನಿಂತರು. ನಮ್ಮ ತಾಯಿಗೆ ಈ ಸೇನಾ ಕ್ಷೇತ್ರದ ಕುರಿತಂತೆ ಅಷ್ಟೇನು ತಿಳುವಳಿಕೆ ಇರಲಿಲ್ಲ. ಮೂಲತಃ ಮಲೆನಾಡು ಭಾಗದವರಾಗಿದ್ದರಿಂದ ಅವರಿಗೆ ಸ್ವಲ್ಪ ಹಿಂಜರಿಕೆ ಇತ್ತು. ಆದರೆ ಈಗ ಅವರಿಗೆ ನನ್ನ ಸಾಧನೆ ಬಗ್ಗೆ ಹೆಮ್ಮೆಯಿದೆ

ಇದನ್ನೂ ಓದಿ; ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ -23.06.2023

ನ್ಯೂಸ್ ಮಲ್ನಾಡ್: ima ಮೂಲಕ ಸೇನೆಗೆ ಎಂಟ್ರಿ ಆಗೋದು ಹೇಗೆ?
ಲೆ. ಪ್ರಜ್ವಲ್: ota ಹಾಗೂ ima ಮೂಲಕ ಸೇನೆಯ ಆಫೀಸರ್ ಹುದ್ದೆಗೆ ಎಂಟ್ರಿ ಆಗಬಹುದು. ಆದರೆ ಫಿಸಿಕಲ್, ಮೆಡಿಕಲ್ ಜೊತೆಗೆ ಜ್ಞಾನವೂ ಅಗತ್ಯ. ನಾನು tgc (technical graduate course) ಮೂಲಕ ಎಂಟ್ರಿಯಾದೆ. ಬಳಿಕ ಒಂದು ವರ್ಷಗಳ ಕಾಲ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ima) ಕಠಿಣ ತರಬೇತಿ ಪಡೆದೆ. ಆ ನಂತರ ಆರ್ಟಿಲರಿ ರೆಜಿಮೆಂಟ್ (artillery regiment) ಗೆ ಆಯ್ಕೆ ಮಾಡಿಕೊಂಡೆ. ಸೇನೆ ಸೇರಲು ಸಾಕಷ್ಟು ದಾರಿಗಳಿವೆ. ವಿದ್ಯಾರ್ಹತೆ, ವಯಸ್ಸಿನ ಜೊತೆಗೆ ಪರಿಶ್ರಮ ಅಗತ್ಯ.

ನ್ಯೂಸ್ ಮಲ್ನಾಡ್: ಟ್ರೈನಿಂಗ್ ದಿನಗಳು ಹೇಗಿದ್ದವು? ಅತ್ಯಂತ ragda ಅನ್ಸಿದ್ದು ಹಾಗೂ ಖುಷಿ ನೀಡಿದ ವಿಷಯಗಳು ಯಾವ್ದು?
ಲೆ. ಪ್ರಜ್ವಲ್: ಟ್ರೈನಿಂಗ್ ಅಂತ ಬಂದಾಗ ಎಲ್ಲವನ್ನೂ ಎಂಜಾಯ್ ಮಾಡಿಯೇ ಕಲಿಯುತ್ತೇವೆ. ನನಗೆ ಬೆಳಗ್ಗಿನ pt ಅತ್ಯಂತ ಖುಷಿ ಕೊಡ್ತಿತ್ತು. ಟ್ರೈನಿಂಗ್ ನ ಯಾವುದೇ ವಿಷಯವೂ ನನಗೆ ragda (ರಗಡಾ) ಅನ್ನಿಸುತ್ತಿರಲಿಲ್ಲ. ಟ್ರೈನಿಂಗ್ ಮುಗಿಯುವಾಗ ಎಲ್ಲರು ಎಲ್ಲಾ ವಿಷಯದಲ್ಲೂ ಪರಿಪೂರ್ಣರಾಗಿರುತ್ತಾರೆ. ನಾನು ಶುದ್ಧ ಸಸ್ಯಹಾರಿ ಮನೆಯ ಹಿನ್ನಲೆಯಿಂದ ಬಂದವನು. ಸೇನೆ ನಿಮಗೆ ಯಾವುದನ್ನು ಒತ್ತಾಯ ಮಾಡುವುದಿಲ್ಲ. ಅದು ಆಹಾರದ ವಿಷಯದಲ್ಲಾಗಲಿ ಅಥವಾ ಡ್ರಿಂಗ್ಸ್ ವಿಚಾರವಾಗಲಿ ನಿಮಗೆ ಏನು ಇಷ್ಟವಿದೆಯೋ ಅದನ್ನು ಸ್ವೀಕರಿಸಬಹುದು. ಆದರೆ ದೇಹ ಫಿಟ್ ಆಗಿರಿಸಿಕೊಳ್ಳುವುದು ಅಗತ್ಯ. ನನ್ನ ಕೋರ್ಸ್ ಮೇಟ್ ಗಳು ಅನೇಕರು ವೆಜಿಟೇರಿಯನ್ ಆಗಿದ್ದರು. ಹಾಗಾಗಿ ಆಹಾರ ಪದ್ದತಿ ನಿಮಗೆ ಕಾರಣವಾಗಬಾರದು.

ನ್ಯೂಸ್ ಮಲ್ನಾಡ್: ಸೇನೆಗೆ ಸೇರುವವರಿಗೆ ಹಾಗೂ ಇಂದಿನ ಯುವಕರಿಗೆ ನಿಮ್ಮ ಮೋಟಿವೇಶನ್ ಏನು?

ಲೆ. ಪ್ರಜ್ವಲ್: ದೇಶ ಸೇವೆ ಎಂದರೆ ಕೇವಲ ಸೇನೆಗೆ ಸೇರುವುದು ಮಾತ್ರ ಎಂದು ನಾನು ಹೇಳುವುದಿಲ್ಲ. ಅದಕ್ಕೆ ಸಾಕಷ್ಟು ದಾರಿಗಳಿವೆ. ನಿಮ್ಮ ಮನಸ್ಸಿಗೆ ಏನು ಖುಷಿ ನೀಡುತ್ತದೆಯೋ ಆ ಕೆಲಸವನ್ನು ನೀವು ಆಯ್ಕೆ ಮಾಡಿಕೊಳ್ಳಿ. ಯಾಕೆಂದರೆ ನಿಮಗೆ ಇಷ್ಟ ಇಲ್ಲದ ಅಥವಾ ನಿಮ್ಮ ಪ್ಯಾಷನ್ ಅಲ್ಲದ ಕೆಲಸಕ್ಕೆ ನಿಮಗೆ ಇಷ್ಟವಿಲ್ಲದೆ ಯಾರದೋ ಒತ್ತಾಯಕ್ಕೆ ಮಣಿದು ಹೋದರೆ ಮುಂದೆ ಅದು ನಿಮಗೆ ಕಷ್ಟವಾಗಬಹುದು. ನಿಮ್ಮ ಪ್ಯಾಷನ್ ಗೆ ಸೂಕ್ತವಿರುವ ಕೆಲಸ ಮಾಡಿದರೆ ಅದು ನಿಮಗೆ ಖುಷಿ ನೀಡುತ್ತೆ. ನೀವೇನಾದರೂ ಸೇನೆಗೆ ಸೇರಬೇಕು ಅಂತಿದ್ದೀರಾ ಅಂದ್ರೆ always welcome. ‘live a life less ordinary’ ಎಂದು ಸೇನೆಯಲ್ಲಿ ಹೇಳುವಂತೆ ಇಲ್ಲಿ ನಿಮಗೆ ಪ್ರತಿ ದಿನವೂ ಹೊಸ ಅನುಭವ ಸಿಗುತ್ತದೆ.

ಮಲೆನಾಡು ಭಾಗದಲ್ಲಿ ಸೇನೆ ಸೇರಿದಂತೆ uniformed service ಗೆ ಹೋಗುವವರ ಸಂಖ್ಯೆ ಅತಿ ಕಡಿಮೆ‌. ಹೀಗಾಗಿ ಲೆ‌. ಪ್ರಜ್ವಲ್ ಅವರಿಂದ ಯುವಕರಿಗೆ ಒಂದಿಷ್ಟು ಪ್ರೇರಣೆ ಸಿಗಲಿ ಎನ್ನುವುದು ನ್ಯೂಸ್ ಮಲ್ನಾಡ್ ನ ಉದ್ದೇಶವಾಗಿತ್ತು.

Most Popular

Recent Comments