Thursday, June 8, 2023
Homeರಾಜ್ಯರಾಜ್ಯಾದ್ಯಂತ ಆಗಸ್ಟ್ 23 ರಿಂದ ಶಾಲೆ ಪುನಾರಂಭ : ಶಿಕ್ಷಕರಿಗೆ ಮತ್ತು ಪೋಷಕರಿಗೆ ಕಿವಿಮಾತು ಹೇಳಿದ...

ರಾಜ್ಯಾದ್ಯಂತ ಆಗಸ್ಟ್ 23 ರಿಂದ ಶಾಲೆ ಪುನಾರಂಭ : ಶಿಕ್ಷಕರಿಗೆ ಮತ್ತು ಪೋಷಕರಿಗೆ ಕಿವಿಮಾತು ಹೇಳಿದ ಬೊಮ್ಮಾಯಿ

ಬೆಂಗಳೂರು: ಮುಂದಿನ ಸೋಮವಾರ ಆ.23 ರಾಜ್ಯಾದ್ಯಂತ 9 ರಿಂದ 12 ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿವೆ. ಈ ಸಂದರ್ಭದಲ್ಲಿ ಶಾಲೆಗಳ ಆರಂಭಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿoದು ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಯವರು ಸರ್ಕಾರ ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಯಾವ ರೀತಿ ಕರೆತರಬೇಕು, ತರಗತಿಯಲ್ಲಿ ಯಾವ ರೀತಿ ಕೂರಿಸಬೇಕು, ಮಕ್ಕಳು ಶಾಲೆಯಲ್ಲಿ ಯಾವ ರೀತಿ ಇರಬೇಕು, ಶಿಕ್ಷಕರು ಯಾವ ರೀತಿ ಮುಂಜಾಗ್ರತಾ ಕೊರೋನಾ ನಿಯಮಗಳನ್ನು ಪಾಲಿಸಬೇಕೆಂದು ನಿರ್ದೇಶನವನ್ನು ನೀಡಲಾಗಿದೆ. ಪಾಲಕರ ಅನುಮತಿಯನ್ನು ಪಡೆಯದೆ ಶಾಲೆಗೆ ಬರಬಾರದು ಎಂದು ಹೇಳಿದ್ದಾರೆ.

ಸೋಮವಾರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವಂತಹ ನಾಗೇಶ್ ಅವರ ಜೊತೆ ಬೆಂಗಳೂರು ಮತ್ತು ಕೆಲವು ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಅವರು ನಿರ್ವಹಿಸುತ್ತಿರುವಂತಹ ಕ್ರಮಗಳನ್ನು ಗಮನಿಸುತ್ತೇನೆ. ಕೋವಿಡ್ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮಕ್ಕಳು ಶಾಲೆಗೆ ಬಂದು ಕಲಿಯಬೇಕು, ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಹೋಗಿಲ್ಲ, ನಿಧಾನವಾಗಿ ಅವರು ತಮ್ಮನ್ನು ತಾವು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಶಾಲೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಕ್ಕಳ ಪೋಷಕರು ನಿರ್ಲಕ್ಷ್ಯವನ್ನು ತೋರದೆ ಹಿಂಜರಿಯದೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಮಕ್ಕಳ ಆರೋಗ್ಯದ ಬಗ್ಗೆ ಗಮನವನ್ನು ಹರಿಸುತ್ತಿರಬೇಕು, ಶಾಲೆಗೆ ಹೋಗಿ ಬಂದ ಮೇಲೆ ಮಕ್ಕಳ ಮೇಲೆ ನಿಗಾ ಇರಿಸಿ ಎಂದು ಮುಖ್ಯಮಂತ್ರಿ ಪೋಷಕರಿಗೆ ಕಿವಿಮಾತನ್ನು ಹೇಳಿದ್ದಾರೆ.

Most Popular

Recent Comments