Tuesday, November 28, 2023
Homeರಾಜ್ಯಶಾಲೆಗಳ ಆವರಣದಲ್ಲಿ ಹಾದು ಹೋಗಿರುವ ಎಲ್ಲಾ ಹೈ-ಟೆನ್ಶನ್ ಲೈನ್ ಗಳನ್ನು ತೆರವುಗೊಳಿಸಲು ಆಗ್ರಹ: ಶಿಕ್ಷಣ...

ಶಾಲೆಗಳ ಆವರಣದಲ್ಲಿ ಹಾದು ಹೋಗಿರುವ ಎಲ್ಲಾ ಹೈ-ಟೆನ್ಶನ್ ಲೈನ್ ಗಳನ್ನು ತೆರವುಗೊಳಿಸಲು ಆಗ್ರಹ: ಶಿಕ್ಷಣ ಸಚಿವ ಬಿಸಿ ನಾಗೇಶ್

ತುಮಕೂರು: ಶಾಲಾ ಆವರಣದ ಪಕ್ಕದಲ್ಲಿ ಹಾದುಹೋಗುವ ಎಲ್ಲಾ ಹೈ ಟೆನ್ಷನ್ ಲೈನ್ ಗಳನ್ನು ತೆರವುಗೊಳಿಸುವಂತೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಾಗೇಶ್ ರವರು, ಸ್ವಾತಂತ್ರ‍್ಯ ದಿನಾಚರಣೆಯ ದಿನ ಬೆಳಗ್ಗೆ ಧ್ವಜದ ಕಂಬವನ್ನು ನೆಡುವ ಸಂದರ್ಭದಲ್ಲಿ 10 ನೇ ತರಗತಿ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟು ಮತ್ತಿಬ್ಬರು ಬಾಲಕರು ಗಾಯಗೊಂಡಿರುವoತಹ ಘಟನೆಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಶಾಲೆಯ ಆವರಣದಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೈ ಟೆನ್ಷನ್ ಲೈನ್ ನನ್ನು ತೆರವುಗೊಳಿಸುವಂತೆ ಸೂಚಿಸಲಾಗಿದ್ದು ತೀರಾ ಅನಿವಾರ್ಯವಿದ್ದರೆ ಕೇಬಲ್ ಅಳವಡಿಸಬೇಕೆಂದು ವಿದ್ಯುತ್ ಇಲಾಖೆಗೆ ಸೂಚಿಸಲಾಗಿದೆ ತುಮಕೂರಿನ ಶಾಲೆಯೊಂದರಲ್ಲಿ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವಂತಹ ಘಟನೆ ನಿಜಕ್ಕೂ ದುರದೃಷ್ಟಕರವಾಗಿದೆ.

ವರ್ಷದ ಹಿಂದೆ ಇಲ್ಲಿನ ಗ್ರಾಮಸ್ಥರು ಈ ವಿಷಯದ ಬಗ್ಗೆ ಸಂಬoಧಪಟ್ಟ ಇಲಾಖೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೆಲಸವನ್ನು ಮಾಡಿಸಿರಲಿಲ್ಲ ಎನ್ನುವುದು ಮತ್ತೊಂದು ದುಃಖದ ಸಂಗತಿ ಎಂದು ಹೇಳಿದರು.

Most Popular

Recent Comments