Friday, June 9, 2023
Homeಇತರೆಬ್ರಿಟಿಷರ ಎದುರು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲು ಸಾವರ್ಕರ್ ಗೆ ಹೇಳಿದ್ದು ಗಾಂಧೀಜಿ : ರಾಜನಾಥ್ ಸಿಂಗ್

ಬ್ರಿಟಿಷರ ಎದುರು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲು ಸಾವರ್ಕರ್ ಗೆ ಹೇಳಿದ್ದು ಗಾಂಧೀಜಿ : ರಾಜನಾಥ್ ಸಿಂಗ್

ನವದೆಹಲಿ : “ಹಿಂದುತ್ವದ ಐಕಾನ್‌ ಆದ ವೀರ ಸಾರ್ವಕರ್‌ ಅಂಡಮಾನ್‌ ಜೈಲಿನಲ್ಲಿ ಇದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸುವಂತೆ ಸಾವರ್ಕರ್‌ಗೆ ಹೇಳಿದ್ದು ಮಹಾತ್ಮ ಗಾಂಧಿಜಿ,” ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಾವರ್ಕರ್ ಕುರಿತಾದ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, “ಸಾವರ್ಕರ್‌ಗೆ ಬ್ರಿಟಿಷರ ಮುಂದೆ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಲು ಹೇಳಿದವರು ಗಾಂಧೀಜಿ ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರ್‌ ನೀಡಿದ ಕೊಡುಗೆಯನ್ನು ಕೆಲವು ಸಿದ್ಧಾಂತವನ್ನು ಅನುಸರಿಸುವವರು ನಿಂದಿಸಿದ್ದಾರೆ. ಅದನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ” ಎಂದರು.

ಸಾರ್ವಕರ್‌ ಜೀವನದ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕೂಡಾ ಹಾಜರಿದ್ದರು. ಮೋಹನ್‌ ಭಾಗವತ್‌ ಮಾತನಾಡಿ, “ಸಾವರ್ಕರ್‌ ನೇರವಾಗಿ ಮಾತನಾಡುತ್ತಿದ್ದ ಕಾರಣದಿಂದಾಗಿ ಅವರನ್ನು ತಪ್ಪಾಗಿ ತಿಳಿಯಲಾಗಿದೆ. ಆದರೆ ಎಲ್ಲಾ ಭಾರತೀಯರು ಆ ಸಂದರ್ಭದಲ್ಲಿ ಸಾವರ್ಕರ್‌ನಂತೆ ಕಠಿಣವಾಗಿ, ನೇರವಾಗಿ ಮಾತನಾಡಿದ್ದರೆ ಈಗ ದೇಶವು ವಿಭಜನೆ ಆಗುತ್ತಿರಲಿಲ್ಲ,” ಎಂದು ಹೇಳಿದರು.

“ಸಾರ್ವಕರ್‌ ವಿರು‌ದ್ಧವಾಗಿ ಹಲವಾರು ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. ಬ್ರಿಟಿಷ್‌ ಸರ್ಕಾರದ ಮುಂದೆ ಸಾರ್ವಕರ್‌ ಎರಡು ಬಾರಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಪದೇ ಪದೇ ಹೇಳಲಾಗುತ್ತದೆ. ಆದರೆ ನಿಜವಾಗಿ ಸಾರ್ವಕರ್‌ ತನ್ನ ಬಿಡುಗಡೆಗಾಗಿ ಈ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿಲ್ಲ. ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳು ಕ್ಷಮಾದಾನ ಅರ್ಜಿಯನ್ನು ಸಲ್ಲಿಕೆ ಮಾಡಬಹುದು,” ಎಂದು ರಕ್ಷಣಾ ಸಚಿವರು ಹೇಳಿದರು.

“ಮಹಾತ್ಮ ಗಾಂಧಿಜಿ ಅವರು ಸಾರ್ವಕರ್‌ ಬಳಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲು ಹೇಳಿದರು. ಸಾರ್ವಕರ್‌ ಜೀ ಯವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ಮಹಾತ್ಮಗಾಂಧಿ ಮನವಿಯನ್ನು ಮಾಡಿದ್ದರು” ಎಂದಿದ್ದಾರೆ.

“ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ದೇಶದ ಜನರಿಗೆ ಸಾರ್ವಕರ್‌ ಪ್ರೇರಣೆಯನ್ನು ನೀಡಿದರು. ಸಾರ್ವಕರ್‌ ಮಹಿಳಾ ಹಕ್ಕುಗಳು ಸೇರಿದಂತೆ ಇತರ ಸಾಮಾಜಿಕ ಸಮಸ್ಯೆಗಳ ನಡುವೆ ಅಸ್ಪೃಶ್ಯತೆಯ ವಿರುದ್ಧ ಆಂದೋಲನವನ್ನು ಮಾಡಿದರು. ಆದರೆ ಇಂದು ಸಾರ್ವಕರ್‌ ಅವರು ದೇಶದ ಸಾಂಸ್ಕೃತಿಕ ಏಕತೆಗಾಗಿ ನೀಡಿದ ಕೊಡುಗೆಯನ್ನು ಕಡೆಗಣಿಸಲಾಗುತ್ತಿದೆ. 2003 ರಲ್ಲಿ ಸಾವರ್ಕರ್ ಅವರ ಚಿತ್ರವನ್ನು ಸಂಸತ್ತಿನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ರಾಜಕೀಯ ಪಕ್ಷಗಳು ಇದನ್ನು ವಿರೋಧ ಮಾಡಿದ್ದವು ಎಂದು ಹೇಳಿದರು.

ಸಾವರ್ಕರ್ ರವರನ್ನು ನಾಝಿ ಅಥವಾ ಫಾಸಿಸ್ಟ್‌ ಎಂದು ಟೀಕೆ ಮಾಡುವುದು ಕೂಡಾ ಸರಿಯಲ್ಲ. “ನಿಜ ಸಂಗತಿ ಎಂದರೆ ಸಾರ್ವಕರ್‌ ಹಿಂದುತ್ವದ ಮೇಲೆ ನಂಬಿಕೆ ಇದ್ದವರು. ಆದರೆ ನಿಜವಾಗಿ ಸಾರ್ವಕರ್‌ ವಾಸ್ತವವಾದಿ. ಜನರಲ್ಲಿ ಏಕತೆ ಇರಬೇಕಾದರೆ ಸಂಸ್ಕೃತಿಯಲ್ಲಿಯೂ ಏಕತೆ ಇರಬೇಕು, ಒಂದೇ ರೀತಿಯ ಸಂಸ್ಕೃತಿ ಇರಬೇಕು ಎಂದು ಸಾವರ್ಕರ್‌ ನಂಬಿದ್ದರು,” ಎಂದು ತಿಳಿಸಿದರು.

Most Popular

Recent Comments