Wednesday, November 29, 2023
Homeಮಲೆನಾಡುಚಿಕ್ಕಮಗಳೂರುಅನಧಿಕೃತ ಗೊಬ್ಬರ ಉತ್ಪಾದಕ ಕಂಪನಿಗಳಿಂದ ಕಳಪೆ ಗುಣಮಟ್ಟದ ಸಾವಯವ ಗೊಬ್ಬರ ಮಾರಾಟ

ಅನಧಿಕೃತ ಗೊಬ್ಬರ ಉತ್ಪಾದಕ ಕಂಪನಿಗಳಿಂದ ಕಳಪೆ ಗುಣಮಟ್ಟದ ಸಾವಯವ ಗೊಬ್ಬರ ಮಾರಾಟ

ಕೆಲವು ಅನಧಿಕೃತ ಗೊಬ್ಬರ ಉತ್ಪಾದಕ ಕಂಪನಿಗಳು ಕಳಪೆ ಗುಣಮಟ್ಟದ ಸಾವಯವ ಗೊಬ್ಬರ, ಬೇವಿನ ಹಿಂಡಿ, ಹಸಿರೇಲೆ ಗೊಬ್ಬರ ಬೀಜಗಳು ಹಾಗೂ ಜೈವಿಕ ಗೊಬ್ಬರಗಳು ಇನ್ನೀತ್ತರ ಕೃಷಿಗೆ ಸಂಬಂಧ ಪಟ್ಟ ಪರಿಕರಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿರುತ್ತದೆ.

ಇದನ್ನೂ ಓದಿ; ಹಿಟ್‌ ಅಂಡ್‌ ರನ್‌; ತಪ್ಪಿದ ಭಾರಿ ಅನಾಹುತ

ಇದನ್ನೂ ಓದಿ; ವಿದ್ಯುತ್‌ ತಂತಿ ತಗುಲಿ ಕಾಡಾನೆ ಸಾವು

ಅನಧಿಕೃತ ಗೊಬ್ಬರ ಉತ್ಪಾದಕ ಕಂಪನಿಗಳು ರೈತರ ಜಮೀನು ಅಥವಾ ಮನೆಗೆ ನೇರವಾಗಿ ಸಂಪರ್ಕ ಮಾಡಿ ಕಳಪೆ ಗುಣಮಟ್ಟದ ಪರಿಕರಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಂತಹವರ ಮಾಹಿತಿ ದೊರೆತಲ್ಲಿ ಸಹಾಯಕ ಕೃಷಿ ನಿರ್ದೇಶಕರ ಸಂಪರ್ಕ ಸಂಖ್ಯೆ 9483400044 ಗೆ ನೇರವಾಗಿ ಕರೆ ಮಾಡಿ ದೂರನ್ನು ನೀಡುವಂತೆ ಕೋರಿದ್ದಾರೆ. ಹಾಗೂ ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಎಲ್ಲಾ ರೈತ ಬಾಂಧವರು ಅಧಿಕೃತ ಮಾರಾಟ ಪರವಾನಗಿ ಹೊಂದಿರುವ ಕೃಷಿ ಪರಿಕರ ಮಳಿಗೆಗಳಲ್ಲಿ ಕೃಷಿಪರಿಕರಗಳನ್ನು ಮಾತ್ರ ಖರೀದಿಸಿ, ಅಧಿಕೃತ ಮಾರಾಟ ಪರವಾನಗಿ ಇಲ್ಲದೆ ಯಾವುದೇ ರೀತಿಯ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ನಿಶಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ; ಸಂಸತ್ ಭವನದ ಉದ್ಘಾಟನೆಗೆ ಶೃಂಗೇರಿ ಪೀಠದ ಪುರೋಹಿತರು

ನಾನು ಕಾಂಗ್ರೆಸ್ ಶಾಸಕನಾಗಿರಬಹುದು ಆದರೆ ನಾನೊಬ್ಬ ಸಂಘದ ಸ್ವಯಂಸೇವಕ ಎನ್ನಲು ಹೆಮ್ಮೆಯಿದೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಾನೊಬ್ಬ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಶಾಸಕ ಎಚ್. ಡಿ ತಮ್ಮಯ್ಯ ಹೇಳಿದ್ದಾರೆ.

ಇದನ್ನೂ ಓದಿ; ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್

ನಗರದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮಿತಿಯಲ್ಲಿ ಕೋದಂಡ ಸ್ವಾಮಿ ದೇವಸ್ಥಾನದ ಸಮಿತಿಯಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವಾಗ ದಾನಿಗಳ ಬಳಿ ಸಂಗ್ರಹಕ್ಕೆ ಹೋಗುತ್ತಿದ್ದ ಸಮಯದಲ್ಲಿ ಅವರು ನೀಡುತ್ತಿದ್ದ 500 ರೂ. ದೊಡ್ಡ ಹಣವಾಗುತ್ತಿತ್ತು. ಇದನ್ನು ಚಂದ ವಸೂಲಿ ಎಂದು ಹೇಳುವುದಿಲ್ಲ ಸಂಘದಲ್ಲಿ ಸಂಗ್ರಹ ಎಂದು ಹೇಳಿಕೊಂಡಿದ್ದಾರೆ. ನಾನು ಬಿಜೆಪಿಯಲ್ಲಿ 15 ರಿಂದ 16 ವರ್ಷ ಕೆಲಸ ಮಾಡಿದ್ದೇನೆ. ಈಗಲೂ ನಾನೊಬ್ಬ ಸಂಘದ (rss) ಸ್ವಯಂ ಸೇವಕ. ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿದ್ದರೂ ಸಂಘದಲ್ಲಿನ ಶಿಸ್ತಿನಿಂದ ನಾನೊಬ್ಬ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.

ನಾನು ಜಾತ್ಯಾತೀತ ವ್ಯಕ್ತಿ, ಜಾತ್ಯಾತೀತ ಶಾಸಕ ಪ್ರಮಾಣ ವಚನ ಸ್ವೀಕರಿಸುವಾಗ ಅದೇ ನಿಟ್ಟಿನಲ್ಲಿ ಸ್ವೀಕರಿಸಿದ್ದೇನೆ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.

Most Popular

Recent Comments