ಮೈಸೂರು : ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಯವರ ವಿರುದ್ಧ ವಾಕ್ಸಮರ ಮುಂದುವರೆಸಿರುವಂತಹ ಸಂಸದ ಪ್ರತಾಪ್ ಸಿಂಹ ಐಎಎಸ್ -ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯಿಸಿದ್ದಾರೆ.
ಐಎಎಸ್ ಹಾಗೂ ಐಪಿಸ್ ಅಧಿಕಾರಿಗಳು ಯಾವುದೇ ರೀತಿಯ ಕೆಲಸಗಳನ್ನು ಮಾಡದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಮೊದಲು ಇಂತಹ ಚಟುವಟಿಕೆಗೆ ಕಡಿವಾಣಹಾಕಬೇಕಿದೆ.
ನಿಜವಾಗಿಯೂ ಅಧಿಕಾರಿಗಳು ಕೆಲಸ ಮಾಡುತ್ತಿದ್ದರೆ ಜಿಲ್ಲೆಯ ಖಾತೆಯಿಂದ ಒಂದು ಅಕೌಂಟ್ ಒಂದನ್ನು ತೆರೆದು ಅದರಲ್ಲಿ ಮಾಹಿಯನ್ನು ಹಾಕಬೇಕು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಯವರಿಗೆ ಮನವಿಯನ್ನು ಮಾಡಿದ್ದಾರೆ.
ಹಾಸನದಲ್ಲಿ ಕೇಂದ್ರ ಸರ್ಕಾರದಿಂದ ರಸ್ತೆ ನಿರ್ಮಾಣ ಮಾಡಬೇಕಾದರೆ ಅಂದಿನ ಜಿಲ್ಲಾಧಿಕಾರಿಯಾಗಿದ್ದವರು ಸಹಾಕಾರ ನೀಡಲೇ ಇಲ್ಲ ಎಂದು ರೋಹಿಣಿ ಸಿಂಧೂರಿ ಯವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿಯನ್ನು ನಡೆಸಿದ್ದಾರೆ