ಮಂಗಳೂರು: ಬೈಕ್ ಸವಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ದರೋಡೆ ಮಾಡುತ್ತಿದ್ದ ಮಂಗಳಮುಖಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಂಗಳಮುಖಿಯನ್ನು ಬೆಂಗಳೂರಿನ ಇ ಜಿ ಪುರದ ಅಭಿಷೇಕ್ ಯಾನೆ ಅನಾಮಿಕ ಎಂದು ಗುರುತಿಸಲಾಗಿದೆ.
ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುವ ಸವಾರರನ್ನು ಟಾರ್ಗೆಟ್ ಮಾಡಿ ಅವರಿಗೆ ಪೆಪ್ಪರ್ ಸ್ಪ್ರೇ ಹೊಡೆದು ಅವರ ಬಳಿ ಇದ್ದ ಹಣ ಒಡವೆಗಳನ್ನು ದರೋಡೆ ಮಾಡುತ್ತಿದ್ದ ಮಂಗಳಮುಖಿಯನ್ನು ಬಂಧಿಸಿದ್ದಾರೆ.
ಗಣೇಶ್ ಎಂಬ ವ್ಯಕ್ತಿ ಬಿ ಎಸ್ ಎನ್ ಎಲ್ ಎಕ್ಸ್ ಚೇಂಜ್ ಸಮೀಪದಲ್ಲಿ ಬೈಕ್ ನಲ್ಲಿ ತೆರಳುತಿದ್ದ ಸಂದರ್ಭದಲ್ಲಿ ಈ ಮಂಗಳಮುಖಿ ರಸ್ತೆಗೆ ಅಡ್ಡ ನಿಂತು ಅವರನ್ನು ತಡೆದು ನಿಲ್ಲಿಸಿದ್ದಾರೆ, ನಂತರ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದಿದ್ದಾರೆ.
ಗಣೇಶ್ ದೂರನ್ನು ಆಧರಿಸಿ ಸವಾರರ ಮೇಲೆ ದಾಳಿಯನ್ನು ನಡೆಸಿ ದರೋಡೆ ಮಾಡುತ್ತಿದ್ದ ಮಂಗಳಮುಖಿಯನ್ನು ಪತ್ತೆಹಚ್ಚಿ ಬಂಧಿಸಿದ ನಗರದ ಪೊಲೀಸರು ಅವರಿಂದ 71 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.