ಮುದ್ದೆಬಿಹಾಳ: ನಗರದ ಹುಡ್ಕೋ ಕಾಲೋನಿಯಲ್ಲಿರುವ ಯೂನಿಯನ್ ಬ್ಯಾಂಕ್ ಎಟಿಎಂ ನಲ್ಲಿ ಲಕ್ಷ ಲಕ್ಷ ಹಣವನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಪ್ರಮುಖ ಆರೋಪಿಗಳಾದ ಮಿಸ್ಮಿತಾ ಹಾಗೂ ಆಕೆಯ ಪ್ರಿಯಕರ ಮಂಜುನಾಥ್, ಬಸವರಾಜ್, ಸುರೇಶ್, ನಾಗರಾಜ್, ವಿಠ್ಠಲ್ ರವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಯೂನಿಯನ್ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಮಿಸ್ಮಿತಾ ಶರಾಭಿ, ಹಾಗೂ ಬ್ಯಾಂಕ್ ನ ಸಿಪಾಯಿ ವಿಠ್ಠಲ್ ರವರು ಪ್ರಮುಖ ಆರೋಪಿಗಳು. ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿದ್ದ ಮಿಸ್ಮಿತಾ ತನ್ನ ಪ್ರಿಯಕರನಿಗೆ ಎಟಿಎಂ ಮಷಿನ್ ನ ಪಾಸ್ ವರ್ಡ್ ನೀಡಿದ್ದಳು ಹಾಗೂ ಸಿಪಾಯಿ ವಿಠ್ಠಲ್ ಮಷಿನ್ ನ ನಕಲಿ ಕೀ ಕೊಟ್ಟಿದ್ದ.
ಮಂಜುನಾಥ್ ಹಣವನ್ನು ಮಾಡುವ ಉದ್ದೇಶದಿಂದ ತನ್ನ ಪ್ರಿಯಕರನಿಗೆ ಕಳ್ಳತನ ಮಾಡಲು ಮಾರ್ಗವನ್ನು ನೀಡಿದ್ದಳು. ಮಂಜುನಾಥ್ ತನ್ನ 4 ಜನ ಸ್ನೇಹಿತರೊಂದಿಗೆ ನವೆಂಬರ್ 18 ರಂದು ತಡರಾತ್ರಿ ಕಾಲೋನಿಯಲ್ಲಿರುವ ಯೂನಿಯನ್ ಬ್ಯಾಂಕ್ ಎಟಿಎಂ ನಲ್ಲಿ ಕಳ್ಳತನ ಮಾಡಿ 16 ಲಕ್ಷ ಹಣವನ್ನು ಲೂಟಿ ಮಾಡಿದ್ದರು.
ಘಟನೆಯ ನಂತರ ಬ್ಯಾಂಕ್ ಮ್ಯಾನೇಜರ್ ಮುದ್ದೇಬಿಹಾಳ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದರು. ನಂತರ ಕಾರ್ಯಾಚರಣೆಗಿಳಿದ ಪೊಲೀಸರು ಇಡೀ ಮುದ್ದೇಬಿಹಾಳದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ಒಂದು ಕಾರಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯವನ್ನು ಗಮನಿಸಿದ್ದರು. ನಂತರ ಬ್ಯಾಂಕ್ ನ ಸಿಬ್ಬಂದಿಗಳನ್ನು ವಿಚಾರಿಸಿದಾಗ ತನಿಖೆಯ ವೇಳೆ ಮಿಸ್ಮಿತಾ ಮತ್ತು ವಿಠ್ಠಲ್ ಅವರ ನಡವಳಿಕೆಯ ಮೇಲೆ ಅನುಮಾನ ಬಂದು ವಿಚಾರಿಸಿದಾಗ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಹೆಚ್ಚು ಒತ್ತಡ ಹಾಕಿ ವಿಚಾರಿಸಿದಾಗ ತನ್ನ ಗೆಳೆಯನೊಂದಿಗೆ ಸೇರಿ ಹಾಗೂ ಸಿಪಾಯಿಯೊಡನೆ ಸೇರಿ ಕಳ್ಳತನ ನಡೆಸಿರುವುದು ತಿಳಿದಿದೆ.
ನಂತರ ಆಕೆಯನ್ನು ಗೆಳೆಯ ಗೆಳೆಯನ ಸ್ನೇಹಿತರನ್ನು ಬಂಧಿಸಿದ ಪೊಲೀಸರು ಅವರಿಂದ 13 ಲಕ್ಷ ರೂ ಹಣ, ಎಟಿಎಂ ಮಷಿನ್ ನ ಯಂತ್ರದ ಸಲಕರಣೆಗಳು, ಒಂದು ಸ್ವಿಫ್ಟ್ ಕಾರು, 5 ಸ್ಮಾರ್ಟ್ ಫೋನ್, ಸೇರಿ 18 ಲಕ್ಷ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.